
ಬೆಳಗಾವಿ: ನಗರದ ಮಚ್ಛೆ ಲಕ್ಷ್ಮೀನಗರದಲ್ಲಿ ನಿನ್ನೆ ಕೊಲೆಯಾಗಿದ್ದ ಗರ್ಭಿಣಿಯ ಅಂತ್ಯಕ್ರಿಯೆಗೆ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ. ತಮ್ಮ ಊರಿನಲ್ಲಿ ಗರ್ಭಿಣಿಯ ಅಂತ್ಯಕ್ರಿಯೆ ನಡೆಸಬಾರದೆಂದು ಕಾಳೇನಟ್ಟಿಯ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು.
ನಿನ್ನೆ ಸಂಜೆ ವಾಕಿಂಗ್‌ಗೆ ಹೋದ ವೇಳೆ ರೋಹಿಣಿ ಹಾಗೂ ಆಕೆಯೊಟ್ಟಿಗೆ ಬಂದಿದ್ದ ರಾಜಶ್ರೀಯನ್ನು ಹತ್ಯೆ ಮಾಡಲಾಗಿತ್ತು. ಕೊಲೆಯಾದ ಇಬ್ಬರೂ ಮಹಿಳೆಯರು ಕಾಳೇನಟ್ಟಿ ಗ್ರಾಮದ ಸೊಸೆಯಂದಿರು. ಅದರೆ, ಮೃತ ಮಹಿಳೆಯರ ಅಂತ್ಯಕ್ರಿಯೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಲೆಯಾದ ರೋಹಿಣಿ ಗಂಡ ಗಂಗಪ್ಪ ಮೂಲತಃ ಬೇರೆ ಊರಿನವರೆಂದು ವಿರೋಧ ವ್ಯಕ್ತವಾಗಿದೆ. ಹಾಗಾಗಿ, ಬೆಳಗ್ಗೆಯಿಂದ ಕಾಳೇನಟ್ಟಿ ಗ್ರಾಮದ ಹೊರ ವಲಯದ ರಸ್ತೆಯಲ್ಲೇ ಮಹಿಳೆಯರ ಮೃತದೇಹವನ್ನು ಇರಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ವಾಕಿಂಗ್ ಹೋಗಿದ್ದ ಗರ್ಭಿಣಿಯ ಕಣ್ಣಿಗೆ ಖಾರದ ಪುಡಿ ಎರಚಿ, ಕತ್ತು ಕೊಯ್ದ ದುಷ್ಕರ್ಮಿಗಳು