ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಗುರುವಾದ ಕ್ಯಾಪ್ಟನ್ ಕೊಹ್ಲಿ

ಕನ್ನಡಿಗ ದೇವದತ್ ಪಡಿಕ್ಕಲ್ ಬೊಂಬಾಟ್ ಬ್ಯಾಟಿಂಗ್, ಆರ್​ಸಿಬಿ ತಂಡದ ಎರಡು ಗೆಲುವಿಗೆ ಪ್ರಮುಖ ಕಾರಣವಾಗಿದೆ. ಯಾಕಂದ್ರೆ ಎರಡೂ ಪಂದ್ಯದಲ್ಲೂ ಪಡಿಕ್ಕಲ್ ಆರಂಭಿಕನಾಗಿ ಎರಡು ಅರ್ಧಶತಕ ಸಿಡಿಸಿ, ಆರ್​ಸಿಬಿ ಗೆಲುವಿನ ರೂವಾರಿಗಳಲ್ಲಿ ಒಬ್ಬನಾಗಿ ಮಿಂಚಿದ್ದಾನೆ. ಆರ್​ಸಿಬಿ ಪರ ಇನ್ನು ಮುಂದಿನ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್, ಇನ್ನು ಹೆಚ್ಚಿನ ಕೊಡುಗೆ ನೀಡೋದ್ರಲ್ಲಿ ಅನುಮಾನವೇ ಇಲ್ಲ. ಯಾಕೇ ಅಂತೀರಾ. ಸ್ವತಃ ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ, ಪಡಿಕ್ಕಲ್​ಗೆ ಕೋಚ್ ಆಗಿ ಪಾಠ ಹೇಳಿಕೊಡ್ತಿದ್ದಾರೆ. ನಿಜ.. ಆರ್​ಸಿಬಿ ತಂಡದ ನಿರ್ದೇಶಕ ಮೈಕ್ ಹಸನ್, ತಂಡದಲ್ಲಿ […]

ಕನ್ನಡಿಗ ದೇವದತ್ ಪಡಿಕ್ಕಲ್​ಗೆ ಗುರುವಾದ ಕ್ಯಾಪ್ಟನ್ ಕೊಹ್ಲಿ

Updated on: Oct 02, 2020 | 8:43 AM

ಕನ್ನಡಿಗ ದೇವದತ್ ಪಡಿಕ್ಕಲ್ ಬೊಂಬಾಟ್ ಬ್ಯಾಟಿಂಗ್, ಆರ್​ಸಿಬಿ ತಂಡದ ಎರಡು ಗೆಲುವಿಗೆ ಪ್ರಮುಖ ಕಾರಣವಾಗಿದೆ. ಯಾಕಂದ್ರೆ ಎರಡೂ ಪಂದ್ಯದಲ್ಲೂ ಪಡಿಕ್ಕಲ್ ಆರಂಭಿಕನಾಗಿ ಎರಡು ಅರ್ಧಶತಕ ಸಿಡಿಸಿ, ಆರ್​ಸಿಬಿ ಗೆಲುವಿನ ರೂವಾರಿಗಳಲ್ಲಿ ಒಬ್ಬನಾಗಿ ಮಿಂಚಿದ್ದಾನೆ.

ಆರ್​ಸಿಬಿ ಪರ ಇನ್ನು ಮುಂದಿನ ಪಂದ್ಯಗಳಲ್ಲಿ ದೇವದತ್ ಪಡಿಕ್ಕಲ್, ಇನ್ನು ಹೆಚ್ಚಿನ ಕೊಡುಗೆ ನೀಡೋದ್ರಲ್ಲಿ ಅನುಮಾನವೇ ಇಲ್ಲ. ಯಾಕೇ ಅಂತೀರಾ. ಸ್ವತಃ ಕ್ಯಾಪ್ಟನ್ ವಿರಾಟ್ ಕೊಹ್ಲಿಯೇ, ಪಡಿಕ್ಕಲ್​ಗೆ ಕೋಚ್ ಆಗಿ ಪಾಠ ಹೇಳಿಕೊಡ್ತಿದ್ದಾರೆ.

ನಿಜ.. ಆರ್​ಸಿಬಿ ತಂಡದ ನಿರ್ದೇಶಕ ಮೈಕ್ ಹಸನ್, ತಂಡದಲ್ಲಿ ಹೊಸದೊಂದು ನಿಯಮ ತಂದಿದ್ದಾರೆ. ಅದೇ ಮೆಂಟರ್​ಶಿಪ್ ಪ್ರೊಗ್ರಾಮ್. ಅಂದ್ರೆ ತಂಡದಲ್ಲಿರೋ ಹಿರಿಯ ಕ್ರಿಕೆಟಿಗರು, ತಮ್ಮ ಅನುಭವವನ್ನ ಯುವ ಕ್ರಿಕೆಟಿಗರಿಗೆ ಧಾರೆಯೆರೆದು ಅವರನ್ನ ಬೆಳೆಸೋದು. ಈ ಮೆಂಟರ್​ಶಿಪ್ ಪ್ರೋಗ್ರಾಮ್​ನಲ್ಲಿ ಕ್ಯಾಪ್ಟನ್ ಕೊಹ್ಲಿಗೆ ಜೊತೆಯಾಗಿದ್ದು ನಮ್ಮ ಹೆಮ್ಮೆಯ ಕನ್ನಡಿಗ ದೇವದತ್ ಪಡಿಕ್ಕಲ್.

ದೇವದತ್ ಪಡಿಕ್ಕಲ್​ಗೆ ಕೊಹ್ಲಿ ಮಾರ್ಗದರ್ಶಕರಾಗಿ ಕೆಲಸ ಮಾಡಲಿದ್ದಾರೆ. ಪಡಿಕ್ಕಲ್​ಗೂ ವೈಯಕ್ತಿಕ ಮಾರ್ಗದರ್ಶಕರಿಲ್ಲ. ಇಬ್ಬರು ಆರಂಭಿಕರಾಗಿ ಯಶಸ್ಸು ಕಂಡವರೆ ಆಗಿದ್ದಾರೆ. ಇದು ಪಡಿಕ್ಕಲ್​​ಗೆ ನೆರವಾಗಲಿದೆ ಎಂದು ಮೈಕ್ ಹಸನ್ ಹೇಳಿದ್ದರೆ.

ನಿಜಕ್ಕೂ ಇದೊಂದು ಅದ್ಭುತವಾದ ಐಡಿಯಾ. ಈಗಾಗಲೇ ಫುಟ್ಬಾಲ್ ಪಂದ್ಯಗಳಲ್ಲಿ ಈ ಐಡಿಯಾ ಯಶಸ್ಸು ಕಂಡಿದೆ. ಹೀಗಾಗಿ ಆರ್​ಸಿಬಿ ತಂಡದ ಹೆಡ್ ಕೋಚ್ ಸೈಮನ್ ಕಾಟಿಚ್, ಈ ಪ್ರೋಗ್ರಾಮ್ ಅನ್ನ ಆರ್​ಸಿಬಿ ತಂಡದಲ್ಲೂ ತಂದಿದ್ದಾರೆ.

ಈ ಮೆಂಟರ್​ಶಿಪ್ ಪ್ರೊಗ್ರಾಮ್ ಈಗಾಗಲೇ ಆರ್​ಸಿಬಿ ಆಟಗಾರರು ಅಳವಡಿಸಿಕೊಂಡಿದ್ದಾರೆ. ಹೀಗಾಗಿ ಕ್ಯಾಪ್ಟನ್ ಕೊಹ್ಲಿ, ನಿನ್ನೆ ದಿನವಿಡಿ ದೇವದತ್ ಪಡಿಕ್ಕಲ್ ಜೊತೆಯೆ ಪ್ರಾಕ್ಟೀಸ್ ಮಾಡಿದ್ದಾರೆ. ಪಡಿಕ್ಕಲ್​​ಗೆ ಉಪಯುಕ್ತವಾದ ಮಾಹಿತಿ ನೀಡಿದ್ದಾರೆ.

ಇನ್ನು ಮುಂಬೈ ವಿರುದ್ಧದ ಪಂದ್ಯದಲ್ಲಿ ಸೂಪರ್ ಓವರ್​ನಲ್ಲಿ ಆರ್​ಸಿಬಿಗೆ ಗೆಲುವು ತಂದು ಕೊಟ್ಟ ನವದೀಪ್ ಸೈನಿಗೆ, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಮೆಂಟರ್ ಆಗಿದ್ದಾರೆ. ಹೀಗಾಗಿ ಸೈನಿಗೆ ಸ್ಟೇನ್, ತಮ್ಮ ಅನುಭವವನ್ನ ಧಾರೆಯೆರೆಯುತ್ತಿದ್ದಾರೆ.

ಮುಂಬೈ ವಿರುದ್ಧ ಸೂಪರ್ ಓವರ್​ನಲ್ಲಿ ಗೆದ್ದು ಬೀಗಿರೋ ಆರ್​ಸಿಬಿ ಮತ್ತೆ ಗೆಲುವಿನ ಟ್ರ್ಯಾಕ್​ಗೆ ಬಂದಿದೆ. ಹೀಗಾಗಿ ಕೋಚಿಂಗ್ ಸ್ಟಾಫ್ ತಂಡದಲ್ಲಿ ಮೆಂಟರ್​ಶಿಪ್ ಪ್ರೋಗ್ರಾಮ್ ಜಾರಿಗೆ ತಂದಿದೆ. ಆ ಮೂಲಕ ಇನ್ನು ಉತ್ತಮ ಪ್ರದರ್ಶನ ಹೊರ ತಗೆಯೋದಕ್ಕೆ ಮುಂದಾಗಿರೋ ಆರ್​ಸಿಬಿ ಕೋಚಿಂಗ್ ಸ್ಟಾಫ್​ಗೆ ಯಶಸ್ಸು ಸಿಗುತ್ತೆ ಅನ್ನೋ ನಂಬಿಕೆ ಅಭಿಮಾನಿಗಳಿಗೂ ಇದೆ.