ಪಾರ್ಕ್​ಗಳ ಮುಂದೆ ಕ್ಯೂ, ಥರ್ಮಲ್ ಸ್ಕ್ರೀನಿಂಗ್ ಬಳಿಕ ಪ್ರವೇಶಕ್ಕೆ ಅನುಮತಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಎಲ್ಲಾ ಪಾರ್ಕ್‌ಗಳು ಓಪನ್ ಆಗಿವೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಮಾತ್ರ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಬಳಿಕ ಸಂಜೆ 5ರಿಂದ 7ರವರೆಗೆ ಪಾರ್ಕ್ ಓಪನ್ ಆಗಿರುತ್ತದೆ. ಮಾಸ್ಕ್ ಹಾಕಿಕೊಂಡು ಬಂದವರಿಗೆ ಮಾತ್ರ ಪಾರ್ಕ್‌ಗಳ ಒಳಗೆ ಹೋಗಲು ಅವಕಾಶ ನೀಡಲಾಗುತ್ತೆ. ಲಾಲ್ ಬಾಗ್ ಅಂದ ಸವಿಯೋಕೆ ಗೇಟ್ ಮುಂದೆ ಕಾತುಕುಳಿತಿರೋ ವಾಯುವಿಹಾರಿಗಳಿಗೆ ಅಲ್ಲಿನ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಮಾಡಿ ಒಳಕ್ಕೆ ಹೋಗಲು ಬಿಡುತ್ತಿದ್ದಾರೆ. ವಾಕಿಂಗ್, ವ್ಯಾಯಾಮ ಮಾಡಲು ಪಾರ್ಕ್​ಗಳಿಗೆ […]

ಪಾರ್ಕ್​ಗಳ ಮುಂದೆ ಕ್ಯೂ, ಥರ್ಮಲ್ ಸ್ಕ್ರೀನಿಂಗ್ ಬಳಿಕ ಪ್ರವೇಶಕ್ಕೆ ಅನುಮತಿ
ಸಾಧು ಶ್ರೀನಾಥ್​

Updated on: May 19, 2020 | 1:57 PM

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದಿನಿಂದ ಎಲ್ಲಾ ಪಾರ್ಕ್‌ಗಳು ಓಪನ್ ಆಗಿವೆ. ಬೆಳಗ್ಗೆ 7 ಗಂಟೆಯಿಂದ 9 ಗಂಟೆವರೆಗೆ ಮಾತ್ರ ವಾಕಿಂಗ್‌ಗೆ ಅವಕಾಶ ನೀಡಲಾಗಿದೆ. ಬಳಿಕ ಸಂಜೆ 5ರಿಂದ 7ರವರೆಗೆ ಪಾರ್ಕ್ ಓಪನ್ ಆಗಿರುತ್ತದೆ.

ಮಾಸ್ಕ್ ಹಾಕಿಕೊಂಡು ಬಂದವರಿಗೆ ಮಾತ್ರ ಪಾರ್ಕ್‌ಗಳ ಒಳಗೆ ಹೋಗಲು ಅವಕಾಶ ನೀಡಲಾಗುತ್ತೆ. ಲಾಲ್ ಬಾಗ್ ಅಂದ ಸವಿಯೋಕೆ ಗೇಟ್ ಮುಂದೆ ಕಾತುಕುಳಿತಿರೋ ವಾಯುವಿಹಾರಿಗಳಿಗೆ ಅಲ್ಲಿನ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್, ಹ್ಯಾಂಡ್ ಸ್ಯಾನಿಟೈಸರ್ ಮಾಡಿ ಒಳಕ್ಕೆ ಹೋಗಲು ಬಿಡುತ್ತಿದ್ದಾರೆ. ವಾಕಿಂಗ್, ವ್ಯಾಯಾಮ ಮಾಡಲು ಪಾರ್ಕ್​ಗಳಿಗೆ ಹೋಗುತ್ತಿದ್ದವರು ಸಾಲುಕಟ್ಟಿ ಪಾರ್ಕ್​ಗಳ ಮುಂದೆ ನಿಂತಿರುವ ದೃಶ್ಯ ಬಹುತೇಕ ಪಾರ್ಕ್​ಗಳ ಬಳಿ ಕಂಡು ಬಂದಿದೆ.

Published On - 8:57 am, Tue, 19 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us