
ಬೆಂಗಳೂರು: ಕೊರೊನಾ ನಿಯಂತ್ರಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಿಗೆ ಒಬ್ಬಬ್ಬ ಸಚಿವರನ್ನು ನೇಮಿಸಿದ ಬೆನ್ನಲ್ಲೇ ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಸಚಿವ ವಿ ಸೋಮಣ್ಣ ತಮ್ಮ ನೇಮಕವಾಗುತ್ತಿದ್ದಂತೆ ತಕ್ಷಣವೇ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ವಸಂತನಗರದಲ್ಲಿ ನಡೆಯುತ್ತಿರುವ ಈ ಪೋರ್ವ ವಲಯದ ಸಭೆಗೆ ಬಿಬಿಎಂಪಿ ಪೂರ್ವವಲಯದ ಅಧಿಕಾರಿಗಳು, ಕಾರ್ಪೋರೇಟರ್‌ಗಳನ್ನು ಆಹ್ವಾನಿಸಲಾಗಿದೆ.
ಈ ಅಧಿಕಾರಿಗಳು ತಮ್ಮ ತಮ್ಮ ವಲಯಗಳ ಅಪ್‌ಟುಡೇಟ್ ಮಾಹಿತಿಯನ್ನ ಬಿಬಿಎಪಿ ಕಮಿಷನರ್ ಅನಿಲ್‌ಕುಮಾರ್‌ಗೆ ನೀಡಬೇಕು. ಹಾಗೇನೇ ಉಸ್ತುವಾರಿ ಸಚಿವರಿಗೂ ನೀಡಬೇಕು.
Published On - 7:32 pm, Thu, 9 July 20