TikTok ಇಲ್ಲ ಅಂತಾ ಅಪ್ಪಿತಪ್ಪಿ ಈ ಌಪ್ ಡೌನ್ಲೋಡ್ ಮಾಡಬೇಡಿ, ಹುಷಾರು!
ಮುಂಬೈ: ಗಾಲ್ವಾನ್ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಮುಂದಾಗಿತ್ತು. ಪ್ರಬಲ ವೈರಿಯನ್ನ ಮಣಿಸಲು ಚೀನಾ ಮೂಲದ ಌಪ್ಗಳನ್ನು ಬ್ಯಾನ್ ಮಾಡಿ ಭಾರತ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮೂಲಕ ಚೀನಾಕ್ಕೆ ಪೆಟ್ಟು ನೀಡಿತ್ತು. ಈ ಮಧ್ಯೆ ಬಹಳ ಜನ ಇಷ್ಟ ಪಡುತ್ತಿದ್ದ TikTok ಌಪ್ ಕೂಡ ಬ್ಯಾನ್ ಆಯ್ತು. ಈ ವಿಚಾರವಾಗಿ ಹಲವರು ದುಃಖ ಪಟ್ಟಿದ್ದು ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಖದೀಮರ ತಂಡವೊಂದು TikTok Pro ಎಂಬ ಪರ್ಯಾಯ ಌಪ್ ನೀಡುವ ಆಮಿಷವೊಡ್ಡಿದೆ. […]
ಮುಂಬೈ: ಗಾಲ್ವಾನ್ ಕಣಿವೆಯಲ್ಲಿ ಅಟ್ಟಹಾಸ ಮೆರೆದ ಚೀನಾಕ್ಕೆ ತಕ್ಕ ಶಾಸ್ತಿ ಮಾಡಲು ಭಾರತ ಮುಂದಾಗಿತ್ತು. ಪ್ರಬಲ ವೈರಿಯನ್ನ ಮಣಿಸಲು ಚೀನಾ ಮೂಲದ ಌಪ್ಗಳನ್ನು ಬ್ಯಾನ್ ಮಾಡಿ ಭಾರತ ಡಿಜಿಟಲ್ ಸರ್ಜಿಕಲ್ ಸ್ಟ್ರೈಕ್ ಮೂಲಕ ಚೀನಾಕ್ಕೆ ಪೆಟ್ಟು ನೀಡಿತ್ತು.
ಈ ಮಧ್ಯೆ ಬಹಳ ಜನ ಇಷ್ಟ ಪಡುತ್ತಿದ್ದ TikTok ಌಪ್ ಕೂಡ ಬ್ಯಾನ್ ಆಯ್ತು. ಈ ವಿಚಾರವಾಗಿ ಹಲವರು ದುಃಖ ಪಟ್ಟಿದ್ದು ಇದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಖದೀಮರ ತಂಡವೊಂದು TikTok Pro ಎಂಬ ಪರ್ಯಾಯ ಌಪ್ ನೀಡುವ ಆಮಿಷವೊಡ್ಡಿದೆ. ಅದರ ಮುಖೇನ ಜನರ ಮೊಬೈಲ್ನಲ್ಲಿರುವ ವೈಯಕ್ತಿಕ ಮತ್ತು ಬ್ಯಾಂಕ್ ಖಾತೆಗಳ ಬಗ್ಗೆ ಇರುವ ಮಾಹಿತಿಯನ್ನ ಕನ್ನ ಹಾಕಲು ಮುಂದಾಗಿದೆ. ಈ ಮಾಹಿತಿಯನ್ನ ಮಹಾರಾಷ್ಟ್ರ ಪೊಲೀಸರ ಸೈಬರ್ ಸೆಲ್ ವಿಭಾಗ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.
Citizens are requested to be aware of the new TikTok scam happening under the name of a malware app 'TikTok Pro'@DGPMaharashtra @CyberDost #CyberSafety #CyberSecurity pic.twitter.com/KqWk70KhbV
— Maharashtra Cyber (@MahaCyber1) July 8, 2020
ವೈಯಕ್ತಿಕ ಮಾಹಿತಿಗೆ ಕನ್ನ! ಜನರ ಸೋಷಿಯಲ್ ಮೀಡಿಯಾ ಖಾತೆಗಳಿಗೆ ಮೆಸೇಜ್ ಕಳಿಸುತ್ತಿರುವ ಈ ಹ್ಯಾಕರ್ಸ್ ತಂಡವು ಈ ಖತರ್ನಾಕ್ ಌಪ್ನ ಡೌನ್ಲೋಡ್ ಮಾಡಿಕೊಳ್ಳುವ ಲಿಂಕ್ ಸಹ ನೀಡುತ್ತಾರೆ. ನಂತರ ಫೋನ್ನಲ್ಲಿರುವ ಕ್ಯಾಮರಾ, ಮೈಕ್ಮತ್ತು ಗ್ಯಾಲರಿ ಬಳಸಿಕೊಳ್ಳಲು ಅನುಮತಿ ಕೇಳುತ್ತದೆ. ಆಮೇಲೆ ಫೋನ್ನಲ್ಲಿರುವ ವೈಯಕ್ತಿಕ ಮಾಹಿತಿಯನ್ನು ಕದಿಯುತ್ತಾರೆ ಎಂದು ತಿಳಿದುಬಂದಿದೆ.
ಹಾಗಾಗಿ, ಸಿನಿಮಾ ಹಾಡುಗಳಿಗೆ ಕುಣಿಯುವ ಚೆಲುವೆಯರನ್ನ ನೋಡೋಕೆ ಆಗ್ತಿಲ್ಲ ಅಂತಿರುವ ಯುವಕರೇ ಹಾಗೂ ಪಡ್ಡೆ ಹುಡುಗರ ನಿದ್ದೆಗೆಡಿಸೋಕೆ ಅವಕಾಶ ಸಿಗ್ತಿಲ್ಲ ಅಂತಾ ಬೇಜಾರ್ ಮಾಡಿಕೊಂಡಿರುವ ಯುವತಿಯರೇ ಗಮನವಿಟ್ಟು ಕೇಳಿ. TikTok ಮತ್ತೆ ಬಂತೂ ಅಂತಾ ಬೀಗಬೇಡಿ. ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.
Published On - 6:55 pm, Thu, 9 July 20