ಹಾಸನ: ಅಧಿಕಾರಕ್ಕೆ ಬಂದರೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತೇವೆ ಅಂತ ಹೇಳಿರುವುದನ್ನು ಜೆಡಿ(ಎಸ್) ಧುರೀಣ ಮತ್ತು ಮಾಜಿ ಸಚಿವ ಹೆಚ್ ಡಿ ರೇವಣ್ಣ (HD Revanna) ಲೇವಡಿ ಮಾಡಿದ್ದಾರೆ. ರಾಜ್ಯದ ಐದು ವಿದ್ಯುತ್ ಕಂಪನಿಗಳು (ESCOMs) ಒಟ್ಟು ರೂ. 48,000 ಕೋಟಿ ನಷ್ಟದಲ್ಲಿವೆ. ಕಾಂಗ್ರೆಸ್ (Congress) ಮತ್ತು ಬಿಜೆಪಿ ರಾಜ್ಯಕ್ಕೆ ನೀಡಿರುವ ಕೊಡುಗೆ ಇದು. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಹೇಗೆ 200 ಯೂನಿಟ್ ವಿದ್ಯುತ್ ಉಚಿತವಾಗ ನೀಡಲು ಸಾಧ್ಯ ಎಂದು ರೇವಣ್ಣ ಪ್ರಶ್ನಸಿದರು. ತಾವು 2008 ರಿಂದ 2012 ರವರೆಗೆ ಇಂಧನ ಖಾತೆ ಸಚಿವನಾಗಿದ್ದಾಗ ಒಮ್ಮೆಯೂ ವಿದ್ಯುತ್ ದರ ಹೆಚ್ಚಿಸಿರಲಿಲ್ಲ ಎಂದು ರೇವಣ್ಣ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ