ಬೆಳಗಾವಿ: ಅಂತ್ಯಸಂಸ್ಕಾರಕ್ಕೆ ಯಾರು ಸಹಾಯ ಮಾಡದ ಹಿನ್ನೆಲೆಯಲ್ಲಿ ತಳ್ಳುವ ಗಾಡಿಯಲ್ಲಿ ಪತಿಯ ಶವವನ್ನು ಪತ್ನಿಯೇ ತೆಗೆದುಕೊಂಡು ಹೋದ ಘಟನೆ ನಡೆದಿದೆ ಡಿಸಿಎಂ ಲಕ್ಷಣ ಸವದಿ ಕ್ಷೇತ್ರದಲ್ಲಿ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಅಥಣಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಚಪ್ಪಲಿ ಹೊಲೆಯುತ್ತಿದ್ದ ಸದಾಶಿವ ಎಂಬಾತ ಎರಡು ದಿನಗಳ ಹಿಂದೆಯೇ ಅನಾರೋಗ್ಯದಿಂದ ಅಥಣಿ ಪಟ್ಟಣದ ಸಿದ್ದಾರ್ಥನಗರದಲ್ಲಿ ಮೃತಪಟ್ಟಿದ್ದಾನೆ. ಆದರೆ ಆತನ ಹೆಂಡತಿ ಅಥಣಿ ತಾಲೂಕಿನ ಚಿಕ್ಕ ಹಟ್ಟಿ ಗ್ರಾಮದಲ್ಲಿ ವಾಸವಿದ್ದು, ಇಂದು ಸದಾಶಿವ ಮನೆಯಲ್ಲಿ ದುರ್ವಾಸನೆ ಬರುತ್ತಿದ್ದಾಗ ಸ್ಥಳೀಯರು ಗಮನಿಸಿ ಬಾಗಿಲು ತೆರೆದು ನೋಡಿದಾಗ ಆತ ಸತ್ತಿರುವುದು ದೃಢ ಪಟ್ಟಿದೆ.
ತಕ್ಷಣ ಸ್ಥಳೀಯರು ಆತನ ಹೆಂಡತಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಹೆಂಡತಿಗೆ ಯಾರೂ ಸಹಾಯ ಮಾಡದ ಕಾರಣ ಆಕೆ ಮತ್ತು ಆಕೆಯ ಮಗ ಇಬ್ಬರೂ ಸೇರಿ ಕೂಲಿಯವನಿಗೆ 500 ರೂ. ಹಣ ಕೊಟ್ಟು ತಳ್ಳುವ ಗಾಡಿಯಲ್ಲಿ ಶವ ತೆಗೆದುಕೊಂಡು ಹೋಗಿ ಅಥಣಿ ಪಟ್ಟಣದ ಹೊರ ವಲಯದಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ.