
ಧಾರವಾಡ: ಜನವರಿ 15 ರಂದು ತಾಲೂಕಿನ ಇಟ್ಟಿಗಟ್ಟಿ ಬಳಿ ಟೆಂಪೋ ಟ್ರ್ಯಾವೆಲರ್ ಮತ್ತು ಟಿಪ್ಪರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಇಂದು (ಜನವರಿ 24) ಸಾವನ್ನಪ್ಪಿದ್ದಾರೆ.
ದಾವಣಗೆರೆಯಿಂದ ಗೆಳತಿಯರ ಜೊತೆಗೆ ಗೋವಾಕ್ಕೆ ತೆರಳುತ್ತಿದ್ದಾಗ ನಡೆದಿದ್ದ ಅಪಘಾತದಲ್ಲಿ ಒಂಬತ್ತು ಮಹಿಳೆಯರು ಸೇರಿ ಒಟ್ಟು ಹನ್ನೊಂದು ಜನರು ಸಾವನ್ನಪ್ಪಿದ್ದರು. ಈ ವೇಳೆ ತೀವ್ರಾ ಗಾಯಗೊಂಡಿದ್ದ ವೇದಾ ಮಂಜುನಾಥ ಎಂಬುವವರನ್ನು ಅಂಬ್ಯುಲೇನ್ಸ್ ಮೂಲಕ ಬೆಂಗಳೂರಿಗೆ ಸಾಗಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಮಹಿಳೆ ಶಿವಮೊಗ್ಗದ ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರ್ರವರ ಸಂಬಂಧಿಯಾಗಿದ್ದು, ಕುಟುಂಬ ಸದಸ್ಯರು ಮಹಿಳೆಯ ಅಂಗಾಂಗಗಳನ್ನು ಬೆಂಗಳೂರು ಮಣಿಪಾಲ್ ಆಸ್ಪತ್ರೆಗೆ ದಾನ ಮಾಡಿದರು.
ಸವದತ್ತಿ ಸಮೀಪ ಬಸ್-ಕಾರು ಮುಖಾಮುಖಿ: ನಾಲ್ವರ ಸಾವು
Published On - 5:46 pm, Sun, 24 January 21