
ಬೆಂಗಳೂರು: ಬೆಂಗಳೂರಿನಲ್ಲಿ ವೈದ್ಯರ ಅಮಾನವೀಯ ವರ್ತನೆಗೆ ಮತ್ತೊಂದು ಬಲಿಯಾಗಿದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದ ಕಾರಣ ವಿಕ್ಟೋರಿಯಾ ಆಸ್ಪತ್ರೆಯ ಗೇಟ್ ಬಳಿಯೇ ಮಹಿಳೆಯೊಬ್ಬಳು ನರಳಿ ನರಳಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಬೆಂಗಳೂರಿನ 60 ವರ್ಷದ ಮಹಿಳೆಯೊಬ್ಬಳು ಉಸಿರಾಟದ ತೊಂದರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದರು. ಆದ್ರೆ ಬೆಡ್ ಇಲ್ಲ ಎಂದು ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿ ಮಹಿಳೆಯನ್ನ ದಾಖಲಿಸಿಕೊಂಡಿಲ್ಲ. ಪರಿಣಾಮ ಆಸ್ಪತ್ರೆ ಗೇಟ್ ಬಳಿಯೇ ನರಳುತ್ತಿದ್ದ ಮಹಿಳೆ ಚಿಕಿತ್ಸೆ ಸಿಗದೆ ಬೆಳಗಿನ ಜಾವ 4ಗಂಟೆ ಸುಮಾರಿಗೆ ಕೊನೆಯುಸಿರೆಳೆದಿದ್ದಾಳೆ.
ಆಘಾತಕಾರಿಯಂದ್ರೆ ಬದುಕಿದ್ದಾಗ ಚಿಕಿತ್ಸೆ ನೀಡದೆ ಆಸ್ಪತ್ರೆ ಒಳಗೂ ಬಿಟ್ಟುಕೊಳ್ಳದೆ ಇದ್ದ ವೈದ್ಯಕೀಯ ಸಿಬ್ಬಂದಿ, ಮಹಿಳೆ ಸತ್ತ ಮೇಲೆ ಆಕೆಯ ಶವವನ್ನ ಪಡೆದು ಕೋವಿಡ್ ಟೆಸ್ಟ್‌ಗೆ ರವಾನಿಸಿದ್ದಾರೆ.
ಇದಕ್ಕೂ ಮೊದಲು ಮಹಿಳೆ ಉಸಿರಾಟದ ತೊಂದರೆಯಂದು ಖಾಸಗಿ ಆಸ್ಪತ್ರೆಗೆ ಚೆಕ್ ಅಪ್ಗಾಗಿ ಹೋದಾಗ ಕೋವಿಡ್ ಶಂಕೆ ಕಂಡು ಬಂದಿತ್ತು. ಆಗ ಖಾಸಗಿ ಆಸ್ಪತ್ರೆ ವೈದ್ಯರು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಎಂದು ಕಳಿಸಿದ್ರು. ಮಹಿಳೆ ದೇವನಹಳ್ಳಿಯ ಆಕಾಶ್ ಆಸ್ಪತ್ರೆ, ಕಿಮ್ಸ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆಗೆ ಹೋದರೂ ಬೆಡ್ ಇಲ್ಲ ,ವೆಂಟಿಲೇಟರ್ ಇಲ್ಲ ಎಂದು ಆಸ್ಪತ್ರೆಗಳು ಚಿಕಿತ್ಸೆ ನೀಡಲು ನಿರಾಕರಿಸಿವೆ.
ಬೆಳಗಿನ ಜಾವ 2 ಗಂಟೆಯಿಂದ ಆಂಬುಲೆನ್ಸ್ನಲ್ಲಿ ಆಸ್ಪತ್ರೆಗಾಗಿ ಅಲೆಯುತ್ತಿದ್ದ ಮಹಿಳೆ ಕೊನೆಗೆ ಚಿಕಿತ್ಸೆ ಸಿಗದೆ ವಿಕ್ಟೋರಿಯಾ ಆಸ್ಪತ್ರೆಯ ಗೇಟ್ ಮುಂದೆ ನರಳಿ ನರಳಿ ಪ್ರಾಣ ಬಿಟ್ಟಿದ್ದಾಳೆ.
Published On - 10:35 am, Sun, 12 July 20