ತುಮಕೂರು: ಮಗಳು ಪ್ರೀತಿಸಿ ಮದುವೆಯಾಗಿದ್ದಕ್ಕೆ ಆಕೆಯ ಗಂಡನಿಗೆ ಸೇರಿದ ಅಡಿಕೆ ಗಿಡಗಳನ್ನು ಪೋಷಕರು ನಾಶಪಡಿಸಿದ ಘಟನೆ ತಾಲೂಕಿನ ಮಲ್ಲಸಂದ್ರಪಾಳ್ಯದಲ್ಲಿ ನಡೆದಿದೆ.
ಪೋಷಕರ ವಿರುದ್ಧದ ನಡುವೆಯೂ ಎರಡು ದಿನಗಳ ಹಿಂದೆ ಮಗಳು ಅನು, ರವಿಚಂದ್ರ ಎಂಬಾತನನ್ನು ವಿವಾಹವಾಗಿದ್ದರು. ಇದೇ ದ್ವೇಷಕ್ಕೆ ರವಿಚಂದ್ರಗೆ ಸೇರಿದ 250 ಅಡಕೆ ಗಿಡಗಳನ್ನು ಅನು ಪೋಷಕರು ನಾಶಪಡಿಸಿದ್ದಾರೆ. ಮರಗಳನ್ನು ಕಡಿದ ಕಾರಣ ಲಕ್ಷಾಂತರ ರೂಪಾಯಿ ನಷ್ಟವಾಗಿದ್ದು, ಸಂತೋಷ ಹಾಗೂ ಗಂಗಮ್ಮ ಎಂಬುವವರ ವಿರುದ್ಧ ಆರೋಪ ಕೇಳಿಬಂದಿದೆ.
ಪ್ರೀತಿಸಿ ವಿವಾಹವಾದ ಅನು ಮತ್ತು ರವಿಚಂದ್ರ
ರಾಜಕೀಯ ದ್ವೇಷಕ್ಕೆ ಬಲಿಯಾದವು 250 ಕ್ಕೂ ಹೆಚ್ಚು ಅಡಿಕೆ ಗಿಡಗಳು, ಯಾವೂರಲ್ಲಿ?