ಸಿನಿಮಾ ಥಿಯೇಟರ್ಗಳಲ್ಲಿ ಮತ್ತೆ ಕೇಳಲಿದೆ ಸಿಳ್ಳೆ ಚಪ್ಪಾಳೆ.. ಶುಭ ಶುಕ್ರವಾರಕ್ಕೆ ರಿಲೀಸ್ಗೆ ಸಿದ್ಧವಾಗಿವೆ ಈ ಸಿನಿಮಾಗಳು
Sandalwood New releasing movies ನಾಳೆ ಸ್ಯಾಂಡಲ್ವುಡ್ ಚಿತ್ರಗಳ ಪಾಲಿಗೆ ಶುಭದಿನ. ನಾಳೆ ಕನ್ನಡದ ಮೂರು ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ.
ಬೆಂಗಳೂರು: ಸ್ಯಾಂಡಲ್ವುಡ್ ಸಮರದ ಬೆನ್ನಲ್ಲೇ ಸರ್ಕಾರದ ನಿರ್ಧಾರ ಬದಲಾಗಿದೆ. ರಾಜ್ಯದ ಥಿಯೇಟರ್ಗಳಲ್ಲಿ ‘ಹೌಸ್ಫುಲ್’ಗೆ ಪರ್ಮಿಷನ್ ಸಿಕ್ಕಿದೆ. ಹೀಗಾಗಿ ನಾಳೆ ಸ್ಯಾಂಡಲ್ವುಡ್ ಚಿತ್ರಗಳ ಪಾಲಿಗೆ ಶುಭದಿನ. ನಾಳೆ ಕನ್ನಡದ ಮೂರು ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ. ಪ್ರಜ್ವಲ್ ದೇವರಾಜ್ ಅಭಿನಯದ ಇನ್ಸ್ ಪೆಕ್ಟರ್ ವಿಕ್ರಮ್, ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೊ, ಮಂಗಳವಾರ ರಜಾದಿನ ಚಿತ್ರ ನಾಳೆ ರಿಲೀಸ್ಗೆ ರೆಡಿಯಾಗಿದೆ. ಇನ್ನು ಫೆಬ್ರವರಿ 19ರಂದು ಗ್ಯ್ರಾಂಡ್ ಎಂಟ್ರಿ ಕೊಡಲಿದೆ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ‘ಪೊಗರು’ ಚಿತ್ರ. ಈ ವಾರದಿಂದಲೇ ಚಿತ್ರಮಂದಿರಗಳು ಭರ್ತಿ ಆಗಲಿವೆ. ಸದ್ಯದಲ್ಲೇ ರಾಜ್ಯ ಸರ್ಕಾರ ಮಾರ್ಗ ಸೂಚಿ ಬಿಡುಗಡೆ ಮಾಡಲಿದೆ. ಮಾರ್ಗ ಸೂಚಿ ಅನ್ವಯ ಚಿತ್ರಮಂದಿಗಳು ನಡೆದುಕೊಳ್ಳಬೇಕಾಗುತ್ತೆ. ಸದ್ಯ ಈಗ ಸರ್ಕಾರದಿಂದ ಅಧಿಕೃತ ಆದೇಶ ಬರೋದೊಂದೆ ಬಾಕಿ ಉಳಿದಿದೆ.
ಸಿನಿಮಾ ಥಿಯೇಟರ್ಗಳಲ್ಲಿ ಮತ್ತೆ ಕೇಳಲಿದೆ ಸಿಳ್ಳೆ ಚಪ್ಪಾಳೆ ಥಿಯೇಟರ್ನಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಫೇಸ್ ಮಾಸ್ಕ್ ಹಾಕವುದು ಕಡ್ಡಾಯವಾಗಿರುತ್ತೆ. ಥಿಯೇಟರ್, ಮಲ್ಟಿಪ್ಲೆಕ್ಸ್ ಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಕಡ್ಡಾಯ. ಆರೋಗ್ಯ ಸೇತು ಌಪ್ ಬಳಸಲು ಒತ್ತು ಕೊಡಲಾಗುವುದು. ಥಿಯೇಟರ್ ಒಳಗೆ ಹೋಗುವ ಮುನ್ನ ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಥಿಯೇಟರ್ನಲ್ಲಿ ಸ್ಟಿಕ್ಕರ್ ಅಂಟಿಸುವುದು. ಆನ್ಲೈನ್ ಬುಕ್ಕಿಂಗ್ಗೆ ಹೆಚ್ಚು ಒತ್ತು ನೀಡುವ ಸೂಚನೆ ಕೊಡುವ ಮೂಲಕ ಥಿಯೇಟರ್ ಮಾಲೀಕರು ಸುರಕ್ಷತೆಗೆ ಹೆಚ್ಚು ಒತ್ತು ನೀಡಬೇಕಾಗುತ್ತೆ.
ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ: ಸಿನಿಮಾ ಹಾಲ್ಗಳಲ್ಲಿ ಶೇ.100 ಪ್ರೇಕ್ಷಕರಿಗೆ ಅವಕಾಶ ನೀಡಲು ಒಪ್ಪಿಗೆ
Published On - 9:38 am, Thu, 4 February 21