AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Prayashaha: ‘ಪ್ರಾಯಶಃ’ ಗಿಟಾರ್, ಕೊಳಲಿನ ಕರೆ ನಿಮ್ಮ ಮನಗೆಲ್ಲದೇ ಇರದು

Kannada Cinema: ಅತ್ಯಾಚಾರ ಹಾಗೂ ಕೊಲೆಯ ಹಿಂದೆ ಇರುವಂತಹ ಊಹೆಗೂ ಸಿಗದ ಕಾಣದ ಕೈಗಳ ಹುಡುಕಾಟವೇ ಕತೆಯ ಮುಖ್ಯ ಹಂದರವಾಗಿದ್ದು, ಚಿತ್ರದ ಪ್ರಾರಂಭಿಕ ಅಧ್ಯಾಯಗಳನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.

Prayashaha: ‘ಪ್ರಾಯಶಃ’ ಗಿಟಾರ್, ಕೊಳಲಿನ ಕರೆ ನಿಮ್ಮ ಮನಗೆಲ್ಲದೇ ಇರದು
ಪ್ರಾಯಶಃ ಚಿತ್ರದ ಟೈಟಲ್​​
Skanda
|

Updated on:Feb 04, 2021 | 3:28 PM

Share

ಪ್ರಾಯಶಃ ಇದೇ ಮೊದಲ ಬಾರಿಗೆ ಹೀಗೆ ಹೊಸ ವರ್ಷವೊಂದು ಸಿನಿಮಾಗಳ ಅಬ್ಬರವಿಲ್ಲದೆ ಆರಂಭವಾಗಿರೋದು. ಕೊರೊನಾ ಬಂದಿದ್ದೇ ಬಂದಿದ್ದು ಚಿತ್ರಮಂದಿರಗಳೆಲ್ಲಾ ಮೌನಕ್ಕೆ ಜಾರುವಂತಾಗಿಬಿಟ್ಟಿತು. ಸದ್ದುಗದ್ದಲಗಳೊಂದಿಗೆ ಕಂಗೊಳಿಸುತ್ತಿದ್ದ ಚಿತ್ರರಂಗ ತಣ್ಣಗಾಗಿಬಿಟ್ಟಿತ್ತು. ಆದರೆ, ಇದೀಗ ಚಂದನವನಕ್ಕೆ ಕವಿದಿದ್ದ ಕಾರ್ಮೋಡ ನಿಧಾನಕ್ಕೆ ಸರಿಯುತ್ತಿದೆ. ಸ್ತಬ್ಧಗೊಂಡಿದ್ದ ಚಿತ್ರರಂಗದಲ್ಲಿ ಮತ್ತೆ ಬಣ್ಣ ಮೂಡುತ್ತಿದೆ. ಪ್ರಾಯಶಃ ಇನ್ನೊಂದೆರೆಡು ತಿಂಗಳಲ್ಲಿ ಎಲ್ಲವೂ ಮೊದಲಿನಂತಾಗಬಹುದು ಎಂಬ ನಿರೀಕ್ಷೆ ಇದೆ. ಅಂದಹಾಗೆ ಇದೆಲ್ಲವೂ ಸರಿಯಾಗುವ ಹೊತ್ತಿನಲ್ಲಿ ‘ಪ್ರಾಯಶಃ’  ಸಿನಿಮಾ ನಿಮ್ಮ ಮುಂದೆ ಬರಲಿದೆ.

ಕನ್ನಡದ ಅತ್ಯುತ್ಸಾಹಿ ಯುವಕರ ತಂಡವೊಂದು ಅರ್ಹ ಕ್ರಿಯೇಷನ್ಸ್ ಮೂಲಕ ತನ್ನ ಚೊಚ್ಚಲ ಚಲನಚಿತ್ರ ‘ಪ್ರಾಯಶಃ’ವನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸಲು ಸಿದ್ಧವಾಗಿದೆ. ಕಳೆದ ವಾರವಷ್ಟೇ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಿ ಗಮನ ಸೆಳೆದಿದ್ದ ತಂಡ, ಇದೀಗ ಗಿಟಾರ್ ಮತ್ತು ಕೊಳಲಿನ ಸ್ವರ ಸಂಯೋಜನೆ ಎಲ್ಲರ ಹೃದಯ ಗೆಲ್ಲುತ್ತಿದೆ.

ಕ್ರೈಂ ಥ್ರಿಲ್ಲರ್ ಹಾಗೂ ಲವ್ ಸ್ಟೋರಿಯ ಎಳೆಯನ್ನು ಹೊಂದಿರುವ ಚಿತ್ರಕ್ಕೆ ವಿಜಯಕೃಷ್ಣ ಅವರು ಸಂಗೀತ ನೀಡಿದ್ದು, ರಂಜಿತ್ ರಾವ್ ಅವರ ಕಥೆ, ಚಿತ್ರಕಥೆ, ನಿರ್ದೇಶನದೊಂದಿಗೆ ಮೂಡಿಬಂದಿರುವ ಚಿತ್ರದಲ್ಲಿ ರಾಹುಲ್, ಕೃಷ್ಣ ಭಟ್, ಶೋಭರಾಜ್, ವಿನೀತ್, ಮಧು ಹೆಗ್ಡೆ ಮುಂತಾದವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಶಾಂತ್ ಪಾಟೀಲ್​ ಛಾಯಾಗ್ರಹಣ ಹಾಗೂ ಅಶೋಕ್ ಅವರ ಸಂಕಲನದಲ್ಲಿ ಚಿತ್ರ ಸಿದ್ಧವಾಗಿದೆ.

ಅತ್ಯಾಚಾರ ಹಾಗೂ ಕೊಲೆಯ ಹಿಂದೆ ಇರುವಂತಹ ಊಹೆಗೂ ಸಿಗದ ಕಾಣದ ಕೈಗಳ ಹುಡುಕಾಟವೇ ಕತೆಯ ಮುಖ್ಯ ಹಂದರವಾಗಿದ್ದು, ಚಿತ್ರದ ಪ್ರಾರಂಭಿಕ ಅಧ್ಯಾಯಗಳನ್ನು ಮಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಯಶಃ ಚಿತ್ರದ ಗಿಟಾರ್-ಕೊಳಲಿನ ನಾದಝರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ.

Vikrant Rona On Burj Khalifa ಬುರ್ಜ್ ಖಲೀಫಾ ಮೇಲೆ ರಾರಾಜಿಸಿದ ಕಿಚ್ಚ ಸುದೀಪ್ ಕಟೌಟ್!

Published On - 3:23 pm, Thu, 4 February 21

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು