ಜನ ವಸತಿ ಪ್ರದೇಶದಲ್ಲಿ ಮೂತ್ರವಿಸರ್ಜನೆ ಮಾಡ್ತಿದ್ದವನಿಗೆ ಮಹಿಳೆಯರಿಂದ ಧರ್ಮದೇಟು
ದಾವಣಗೆರೆ: ಜನ ವಸತಿ ಪ್ರದೇಶದಲ್ಲಿ ಮೂತ್ರವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಗೆ ಧರ್ಮದೇಟು ಬಿದ್ದಿರುವ ಘಟನೆ ನಗರದ RTO ಆಫೀಸ್ ಬಳಿಯ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ನಡೆದಿದೆ. ಜನವಸತಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮೂತ್ರವಿಸರ್ಜನೆ ಮಾಡುವುದನ್ನ ಗಮನಿಸಿದ ಸ್ಥಳೀಯ ಮಹಿಳೆಯರು ಆತನನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ಇದೇ ವೇಳೆ ಮಹಿಳೆಯರು ಬರುತ್ತಿರುವುದನ್ನ ಕಂಡ ವ್ಯಕ್ತಿ ಓಡಲು ಮುಂದಾದನಂತೆ. ಆದರೆ, ಅಷ್ಟರಲ್ಲಿ ಅತನನ್ನ ಹಿಡಿದ ಮಹಿಳೆಯರು ವ್ಯಕ್ತಿಗೆ ಸಿಕ್ಕಾಪಟ್ಟೆ ಧರ್ಮದೇಟು ಕೊಟ್ಟಿದ್ದಾರೆ.
Follow us on