
ಹಾವೇರಿ: ಜಿಲ್ಲೆ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ತಮ್ಮನೇ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 22 ವರ್ಷ ನಾಗರಾಜ ಗೊರವರ ಹತ್ಯೆಯಾದ ಅಣ್ಣ. ದಿಳ್ಳೆಪ್ಪ ಗೊರವರ (20) ಹತ್ಯೆ ಮಾಡಿದ ಸೋದರ.
ಕಾರಣ ಏನು?:
ಅಣ್ಣ ನಾಗರಾಜ ನಿತ್ಯ ಕುಡಿದು ಬಂದು ತಂದೆ ತಾಯಿ ಜೊತೆ ಜಗಳವಾಡ್ತಿದ್ದ. ತಂದೆ ತಾಯಿಗೆ ಅಣ್ಣ ನೀಡ್ತಿದ್ದ ಕಿರಿಕಿರಿಯಿಂದ ಬೇಸತ್ತು ತಮ್ಮ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಣ್ಣನ ಹತ್ಯೆ ಮಾಡಿದ ತಮ್ಮ ದಿಳ್ಳೆಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.