AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಾ! ಇದೆಷ್ಟು ದೊಡ್ಡ ಕುಂಬಳಕಾಯಿ ಗೊತ್ತಾ?

ಕ್ಯಾಲಿಫೋರ್ನಿಯಾ: ವಿಶ್ವದಾದ್ಯಂತ ಆವರಿಸಿರುವ ಮಹಾಮಾರಿ ಕೊರೊನಾದಿಂದ ಜನ ಸಾಕಷ್ಟು ಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಲಾಕ್​ಡೌನ್ ಸಮಯವನ್ನು ಬಳಸಿಕೊಂಡು ಅದರ ಪ್ರಯೋಜನ ಪಡೆದವರೂ ಸಹ ಸಾಕಷ್ಟು ಮಂದಿ. ಇದೇ ರೀತಿ ಇಲೊಬ್ಬ ವ್ಯಕ್ತಿ ತನ್ನ ಸಮಯ ಪರಿಶ್ರಮದಿಂದ 2,350 ಪೌಂಡ್ ತೂಕದ ಕುಂಬಳಕಾಯಿಯನ್ನು ಬೆಳೆಸಿದ್ದಾನೆ. ಸದ್ಯ ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ತಂದುಕೊಟ್ಟಿದೆ. ತೋಟಗಾರಿಕಾ ಶಿಕ್ಷಕನಾಗಿರುವ 40 ರ ಹರೆಯದ ಗಿಯೆಂಜರ್ ಲಾಕ್​ಡೌನ್ ಸಮಯದಲ್ಲಿ ತಮ್ಮ ಬಹುತೇಕ […]

ಅಬ್ಬಾ! ಇದೆಷ್ಟು ದೊಡ್ಡ ಕುಂಬಳಕಾಯಿ ಗೊತ್ತಾ?
ಆಯೇಷಾ ಬಾನು
ಆಯೇಷಾ ಬಾನು| Edited By: ಸಾಧು ಶ್ರೀನಾಥ್​|

Updated on: Oct 14, 2020 | 10:30 AM

Share

ಕ್ಯಾಲಿಫೋರ್ನಿಯಾ: ವಿಶ್ವದಾದ್ಯಂತ ಆವರಿಸಿರುವ ಮಹಾಮಾರಿ ಕೊರೊನಾದಿಂದ ಜನ ಸಾಕಷ್ಟು ಕಷ್ಟು ನೋವುಗಳನ್ನು ಅನುಭವಿಸುತ್ತಿದ್ದಾರೆ. ಈ ನಡುವೆ ಲಾಕ್​ಡೌನ್ ಸಮಯವನ್ನು ಬಳಸಿಕೊಂಡು ಅದರ ಪ್ರಯೋಜನ ಪಡೆದವರೂ ಸಹ ಸಾಕಷ್ಟು ಮಂದಿ. ಇದೇ ರೀತಿ ಇಲೊಬ್ಬ ವ್ಯಕ್ತಿ ತನ್ನ ಸಮಯ ಪರಿಶ್ರಮದಿಂದ 2,350 ಪೌಂಡ್ ತೂಕದ ಕುಂಬಳಕಾಯಿಯನ್ನು ಬೆಳೆಸಿದ್ದಾನೆ. ಸದ್ಯ ಇದು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ತಂದುಕೊಟ್ಟಿದೆ.

ತೋಟಗಾರಿಕಾ ಶಿಕ್ಷಕನಾಗಿರುವ 40 ರ ಹರೆಯದ ಗಿಯೆಂಜರ್ ಲಾಕ್​ಡೌನ್ ಸಮಯದಲ್ಲಿ ತಮ್ಮ ಬಹುತೇಕ ಸಮಯವನ್ನು ಕುಂಬಳಕಾಯಿ ಬೆಳೆಸಲು ಕಳೆದಿದ್ದಾರೆ. ಅವರು ತಮ್ಮ ಮನೆಯ ಹಿತ್ತಲಿನಲ್ಲೇ ಈ ಬೃಹತ್ ಕಾಯಿಯನ್ನು ಬೆಳೆಸಿದ್ದರು. ಅಲ್ಲದೆ ತಮ್ಮ ಸಸ್ಯಗಳಿಗೆ ದಿನಕ್ಕೆ 10 ಬಾರಿ ನೀರು ಹಾಕುತ್ತಿದ್ದರು.

ಮತ್ತು ಪ್ರತಿದಿನ ಕನಿಷ್ಠ ಎರಡು ಬಾರಿಯಾದರೂ ಅವುಗಳಿಗೆ ರಸಗೊಬ್ಬರ ಹಾಕುತ್ತಿದ್ದರು. ಸದ್ಯ ಇವರ ಪರಿಶ್ರಮಕ್ಕೆ ಫಲ ಸಿಕ್ಕಿದ್ದು, 47 ನೇ ವಿಶ್ವ ಚಾಂಪಿಯನ್‌ಶಿಪ್ ಕುಂಬಳಕಾಯಿ ಹಾಫ್ ಮೂನ್ ಬೇ ಸ್ಪರ್ಧೆಯಲ್ಲಿ 2,350 ಪೌಂಡ್‌ಗಳಷ್ಟು (1,066 ಕೆ.ಜಿ.) ದಾಖಲೆಯ ತೂಕದಿಂದ ವಿಜೇತರಾಗಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರತಿ ವರ್ಷವೂ ಇದೇ ರೀತಿ ಸ್ಪರ್ಧೆ ನಡೆಯುತ್ತದೆ. ಇಲ್ಲಿ ದೊಡ್ಡ ದೊಡ್ಡ ಗಾತ್ರದ ಕುಂಬಳಕಾಯಿಗಳನ್ನು ಕಣ್ತುಂಬಿಕೊಳ್ಳಬಹುದು.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ