ವಾಯುಮಾಲಿನ್ಯ, ಶಾಖ ಮತ್ತು ಇಂಗಾಲದ ಡೈಆಕ್ಸೈಡ್ ನಿದ್ರೆಯ ಗುಣಮಟ್ಟ ಕಡಿಮೆ ಮಾಡಲಿದೆ: ಸಂಶೋಧನೆ

ಹೆಚ್ಚುತ್ತಿರುವ ನಗರೀಕರಣ ಮತ್ತು ಹವಾಮಾನ ಬದಲಾವಣೆಯಿಂದಾಗಿ ತ್ವರಿತವಾಗಿ ಬದಲಾಗುತ್ತಿರುವ ವಾತಾವರಣವು ಉತ್ತಮ ನಿದ್ರೆ ಮಾಡಲೂ ಸಹ ಕಷ್ಟಕರವಾಗಿಸಿದೆ ಎಂದು ಸಂಶೋಧನೆಯಿಂದ ತಿಳಿದುಬಂದಿದೆ.

ವಾಯುಮಾಲಿನ್ಯ, ಶಾಖ ಮತ್ತು ಇಂಗಾಲದ ಡೈಆಕ್ಸೈಡ್ ನಿದ್ರೆಯ ಗುಣಮಟ್ಟ ಕಡಿಮೆ ಮಾಡಲಿದೆ: ಸಂಶೋಧನೆ
ಸಾಂದರ್ಭಿಕ ಚಿತ್ರ
Edited By:

Updated on: Apr 19, 2023 | 4:49 PM

ವಾಯುಮಾಲಿನ್ಯ, ಶಾಖ ಮತ್ತು ಹೆಚ್ಚಿನ ಮಟ್ಟದ ಇಂಗಾಲದ ಡೈಆಕ್ಸೈಡ್ ಹಾಗೂ ಸುತ್ತಮುತ್ತಲಿನಿಂದ ಕೇಳಿಬರುವ ಶಬ್ದ ಇವೆಲ್ಲವೂ ರಾತ್ರಿ ನಿದ್ರೆ ಮಾಡಲು ಆಗುತ್ತಿಲ್ಲ ಇದರಿಂದ ನಮ್ಮ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಅಧ್ಯಯನವೊಂದು ತಿಳಿಸಿದೆ. ಸ್ಲೀಪ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ಈ ಸಂಶೋಧನೆಯು ನಿದ್ರೆಯ ಗುಣಮಟ್ಟ ಕಡಿಮೆ ಮಾಡಲಿದೆ ಎಂದು ತಿಳಿಸಿದೆ. ಈ ಚಟುವಟಿಕೆ ಮಾನಿಟರ್ಗಳು ಮತ್ತು ಸ್ಲೀಪ್ ಲಾಗ್ಗಳೊಂದಿಗೆ ಎರಡು ವಾರಗಳ ಕಾಲ ಟ್ರ್ಯಾಕ್ ಮಾಡಿದ್ದು 62 ಜನರು ಗುಂಪುಗಳಾಗಿ ಭಾಗವಹಿಸಿದ್ದು, ಹೆಚ್ಚಿನ ಜನರ ಮಲಗುವ ಕೋಣೆಯಲ್ಲಿನ ವಾಯುಮಾಲಿನ್ಯದ ಮಟ್ಟಗಳು (ಗಾತ್ರದಲ್ಲಿ 2.5 ಮೈಕ್ರೋಮೀಟರ್ ಅಥವಾ ಪಿಎಂ 2.5 ಕ್ಕಿಂತ ಕಡಿಮೆ ಕಣಗಳು), ಇಂಗಾಲದ ಡೈಆಕ್ಸೈಡ್, ಶಬ್ದ ಮತ್ತು ತಾಪಮಾನ ಎಲ್ಲವೂ ನಿದ್ರೆಯ ಗುಣಮಟ್ಟ ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಈ ಸಂಶೋಧನೆಗಳು ಉತ್ತಮ ಗುಣಮಟ್ಟದ ನಿದ್ರೆಗೆ ಮಲಗುವ ಕೋಣೆಯ ವಾತಾವರಣದ ಅಧ್ಯಯನದ ಮಹತ್ವವನ್ನು ತೋರಿಸುತ್ತವೆ ಎಂದು ಯುಎಸ್ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಥಿಯಾಸ್ ಬಾಸ್ನರ್ ಹೇಳಿದ್ದಾರೆ. ನಿದ್ರೆ ಮಾಡಲು ಸಮಯವಿಲ್ಲದಷ್ಟು ಕೆಲಸ ಮಾಡುವುದು ಮತ್ತು ಕುಟುಂಬ ಬಾಧ್ಯತೆ, ಹೆಚ್ಚುತ್ತಿರುವ ನಗರೀಕರಣ ಮತ್ತು ಹವಾಮಾನ ಬದಲಾವಣೆಯಿಂದಾಗಿ ತ್ವರಿತವಾಗಿ ಬದಲಾಗುತ್ತಿರುವ ವಾತಾವರಣವು ರಾತ್ರಿಯ ಸಮಯದಲ್ಲಿ ಸರಿಯಾದ ನಿದ್ರೆ ಮಾಡುವುದು ಕಷ್ಟಕರವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಅಸಮರ್ಪಕ ಅವಧಿಯ ನಿದ್ರೆ, ಅಥವಾ ಆಗಾಗ ನಿದ್ರೆಗೆ ಅಡಚಣೆ ಉಂಟಾಗುವುದರಿಂದ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಇದು ಹೃದ್ರೋಗ, ಟೈಪ್ 2 ಮಧುಮೇಹ, ಖಿನ್ನತೆ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸುಲಭ ಮಾರ್ಗಗಳು

ಅಮೆರಿಕದ ಲೂಯಿಸ್ವಿಲ್ಲೆ ವಿಶ್ವವಿದ್ಯಾಲಯದ ಸಂಶೋಧಕರು ಸೇರಿದಂತೆ ತಂಡವು ಲೂಯಿಸ್ವಿಲ್ಲೆ ನಿವಾಸಿಗಳ ಹೃದಯರಕ್ತನಾಳದ ಆರೋಗ್ಯದ ಮೇಲೆ 8,000 ಪ್ರಬುದ್ಧ ಮರಗಳನ್ನು ನೆಡುವುದರಿಂದ ಉಂಟಾಗುವ ಪರಿಣಾಮಗಳನ್ನು ತನಿಖೆ ಮಾಡುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಗ್ರೀನ್ ಹಾರ್ಟ್ ಪ್ರಾಜೆಕ್ಟ್​​ನಿಂದ ಭಾಗವಹಿಸುವವರನ್ನು ನೇಮಿಸಿಕೊಂಡಿತು.

ಸಂಶೋಧಕರ ಪ್ರಕಾರ, ಸಾಪೇಕ್ಷ ಆರ್ದ್ರತೆ ಮತ್ತು ಬ್ಯಾರೊಮೆಟ್ರಿಕ್ ಒತ್ತಡ ಎಂಬ ಇತರ ಎರಡು ನಿದ್ರೆಯ ವಾತಾವರಣದ ವೇರಿಯಬಲ್​​ಗಳು ನಿದ್ರೆಯ ದಕ್ಷತೆಯೊಂದಿಗೆ ಯಾವುದೇ ಗಮನಾರ್ಹ ಸಂಬಂಧವನ್ನು ಹೊಂದಿಲ್ಲ. ನಾವು ನಮ್ಮ ಮಲಗುವ ಕೋಣೆಯ ವಾತಾವರಣಕ್ಕೆ ಹೊಂದಿಕೊಂಡಂತೆ ತೋರುತ್ತದೆ, ಹಾಗಾಗಿ ಅದನ್ನು ಸುಧಾರಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತೇವೆ, ಆದರೆ ವಾಸ್ತವವಾಗಿ ರಾತ್ರಿಯ ನಂತರ ನಮ್ಮ ನಿದ್ರೆಗೆ ತೊಂದರೆಯಾಗಬಹುದು ಎಂದು ಬಾಸ್ನರ್ ಹೇಳಿದರು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 4:49 pm, Wed, 19 April 23

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us