
ಅಂಗಳದಲ್ಲಿ ಮತ್ತು ಮನೆಯ ಒಳಾಂಗಣದಲ್ಲಿ ನಡೆಸುವಂತಹ ಗಿಡಗಳು (plants) ಮನೆಯ ಅಂದವನ್ನು ಹೆಚ್ಚಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತವೆ. ಅಷ್ಟೇ ಅಲ್ಲದೆ ಮನೆ ಸುತ್ತ ಗಿಡಗಳನ್ನು ನೆಡುವ ಮೂಲಕ ಶುದ್ಧ ಗಾಳಿಯನ್ನು ಸಹ ಪಡೆಯಬಹುದು. ಇಂದಿನ ಈ ಕಾಲ ಘಟ್ಟದಲ್ಲಿ ಮಾಲಿನ್ಯದ ಮಟ್ಟ ತೀರಾ ಹೆಚ್ಚಾಗಿದ್ದು, ಇದರಿಂದ ಗಾಳಿಯ ಗುಣಮಟ್ಟ ಕೂಡ ಕಡಿಮೆಯಾಗುತ್ತಿವೆ. ಕಳಪೆ ಗಾಳಿಯ ಗುಣಮಟ್ಟವು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಅಸ್ವಸ್ಥತೆ, ಶ್ವಾಸನಾಳದ ಆಸ್ತಮಾ, ಇಂಟರ್ಸ್ಟಿಷಿಯಲ್ ಶ್ವಾಸಕೋಶದ ಕಾಯಿಲೆಗೆ ಕಾರಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಶುದ್ಧ ಗಾಳಿಯನ್ನು ಪಡೆಯಲು ಮನೆಯಲ್ಲಿ ಈ ಕೆಲವೊಂದು ಒಳಾಂಗಣ ಸಸ್ಯಗಳನ್ನು ನೀವು ನೆಡಬಹುದು. ಈ ಗಿಡಗಳು ಗಾಳಿಯನ್ನು ಶುದ್ಧೀಕರಿಸುವುದರ ಜೊತೆಗೆ ತಾಜಾ ಗಾಳಿಯನ್ನು ಒದಗಿಸುತ್ತವೆ.
ಇದು ಅತ್ಯುತ್ತಮ ಗಾಳಿ ಶುದ್ಧೀಕರಣ ಸಸ್ಯಗಳಲ್ಲಿ ಒಂದಾಗಿದೆ. ಇದು ಒಳಾಂಗಣ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಅರೆಕಾ ಪಾಮ್ ಗಿಡ ಮನೆಯ ವಾತಾವರಣವನ್ನು ಸುಂದರವನ್ನಾಗಿ ಕಾಣಿಸುವುದರ ಜೊತೆಗೆ ಈ ಸಸ್ಯವು ಗಾಳಿಯನ್ನು ಸಹ ಶುದ್ಧೀಕರಿಸುತ್ತದೆ. ಮುಖ್ಯವಾಗಿ ಈ ಗಿಡ ಗಾಳಿಯಲ್ಲಿರುವ ಇಂಗಾಲದ ಡೈ ಫಾರ್ಮಾಲ್ಡಿಹೈಡ್ನಂತಹ ಹಾನಿಕಾರಕ ಅನಿಲಗಳನ್ನು ಹೀರಿಕೊಂಡು ಗಾಳಿಯನ್ನು ಶುದ್ಧೀಕರಿಸುತ್ತದೆ.
ಮನೆಯ ಒಳಗೆ ಮತ್ತು ಹೊರಗೆ ಸುಲಭವಾಗಿ ಬೆಳೆಯಬಹುದಾದ ಮನಿ ಪ್ಲಾಂಟ್ ಏರ್ ಪ್ಯೂರಿಫೈಯರ್ ಆಗಿಯೂ ಕೆಲಸ ಮಾಡುತ್ತದೆ. ಈ ಸಸ್ಯವು ನಿಮಗೆ ಶುದ್ಧ ಗಾಳಿಯನ್ನು ಒದಗಿಸಿಕೊಡುತ್ತದೆ. ಇದು ಗಾಳಿಯಲ್ಲಿರುವ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ ಮತ್ತು ತಾಜಾ ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ. ಈ ರೀತಿ ಗಾಳಿಯನ್ನು ಶುದ್ಧೀಕರಿಸುತ್ತವೆ.
ಒಳಾಂಗಣ ಸಸ್ಯಗಳಲ್ಲಿ ಒಂದಾದ ಪೀಸ್ ಲಿಲಿ ಸುಂದರವಾದ ಗಿಡವಾಗಿದೆ. ಹಸಿರು ಎಲೆಗಳು ಮತ್ತು ಬಿಳಿ ಹೂವುಗಳನ್ನು ಹೊಂದಿರುವ ಲಿಲಿ ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಗಾಳಿಯನ್ನು ಸಹ ಶುದ್ಧೀಕರಿಸುತ್ತದೆ. ವಾಯು ಮಾಲಿನ್ಯವನ್ನು ಕಡಿಮೆ ಮಾಡಲು ಈ ಗಿಡ ಸಹಾಯ ಮಾಡುತ್ತದೆ. ಈ ಸಸ್ಯ ಗಾಳಿಯಲ್ಲಿನ ಕಾರ್ಬನ್ ಮಾನಾಕ್ಸೈಡ್ ಮತ್ತು ಇತರ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.
ಜೇಡ್ ಸಸ್ಯಗಳು ಅತ್ಯುತ್ತಮ ಗಾಳಿ ಶುದ್ಧೀಕರಣಕಾರಕಗಳಾಗಿಯೂ ಕಾರ್ಯನಿರ್ವಹಿಸುತ್ತವೆ, ಈ ಸಸ್ಯ ಒಳಾಂಗಣ ಗಾಳಿಯನ್ನು ಸ್ವಚ್ಛವಾಗಿಡುತ್ತವೆ. ಅವು ರಾತ್ರಿಯಲ್ಲಿ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ, ಆದ್ದರಿಂದ ನೀವು ಅವುಗಳನ್ನು ಹಾಲ್ ಮತ್ತು ಮಲಗುವ ಕೋಣೆಯನ್ನು ಇಡಬಹುದು. ಅಲ್ಲದೆ ಈ ಗಿಡ ಧೂಳು ಮತ್ತು ಅಲರ್ಜಿನ್ಗಳಿಂದ ನಮ್ಮನ್ನು ರಕ್ಷಿಸುತ್ತವೆ.
ಇದನ್ನೂ ಓದಿ: ತುಳಸಿ ಹೂವುಗಳಿಂದ ತಯಾರಿಸಿ ರಾಸಯನಿಕಮುಕ್ತ ಪರಿಮಳಯುಕ್ತ ಧೂಪ
ಈ ಸಸ್ಯವು ಗಾಳಿಯಲ್ಲಿರುವ ಹಾನಿಕಾರಕ ಮಾಲಿನ್ಯಕಾರಕಗಳನ್ನು ಫಿಲ್ಟರ್ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಇದು ಗಾಳಿಯಿಂದ ಇಂಗಾಲದ ಮಾನಾಕ್ಸೈಡ್, ಮೀಥೇನ್ ಮತ್ತು ಗಂಧಕವನ್ನು ಹೀರಿಕೊಳ್ಳುತ್ತದೆ. ಈ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.
ಈ ಗಿಡ ಗಾಳಿಯಿಂದ ಹಾನಿಕಾರಕ ಮತ್ತು ಮಾಲಿನ್ಯಕಾರಕ ವಸ್ತುಗಳನ್ನು ತೆಗೆದುಹಾಕುತ್ತದೆ. ಮಾತ್ರವಲ್ಲದೆ ಇದು ಶುದ್ಧ ಗಾಳಿಯನ್ನು ಸಹ ನೀಡುತ್ತದೆ. ಈ ಸಸ್ಯವು ಗಾಳಿಯಲ್ಲಿರುವ ಕ್ಸಿಲೀನ್, ಬೆಂಬೀನ್, ಫಾರ್ಮಾಲ್ಡಿಹೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ನಂತಹ ವಿಷಕಾರಿ ಅನಿಲವನ್ನು ಹೀರಿಕೊಳ್ಳುವ ಮೂಲಕ ಗಾಳಿಯನ್ನು ಶುದ್ಧೀಕರಿಸುತ್ತದೆ.
ಈ ಗಿಡ ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ ಮರದ ಪೀಠೋಪಕರಣಗಳಿಂದ ಬಿಡುಗಡೆಯಾಗುವ ಹಾನಿಕಾರಕ ಸಾವಯವ ಸಂಯುಕ್ತವಾಗಿರುವ ಫಾರ್ಮಾಲ್ಡಿಹೈಡ್ನಿಂದ ಪರಿಸರವನ್ನು ಮುಕ್ತವಾಗಿಡುವ ಸಾಮಾರ್ಥ್ಯವನ್ನು ಹೊಂದಿದೆ. ಅದ್ದರಿಂದ ಮರದ ಟೇಬಲ್, ಸೋಫಾ ಅಥವಾ ಹಾಸಿಗೆಯ ಬಳಿ ಈ ರಬ್ಬರ್ ಗಿಡವನ್ನು ಇರಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ