AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Homemade Incense: ತುಳಸಿ ಹೂವುಗಳಿಂದ ತಯಾರಿಸಿ ರಾಸಯನಿಕಮುಕ್ತ ಪರಿಮಳಯುಕ್ತ ಧೂಪ

ಸಾಮಾನ್ಯವಾಗಿ ತುಳಸಿ ಗಿಡದಲ್ಲಿ ಹೂವು ಬಿಡಲು ಆರಂಭಿಸಿದಾಗ, ಗಿಡ ಸೊಂಪಾಗಿ ಬೆಳೆಯಲಿ ಎಂಬ ಕಾರಣಕ್ಕೆ ಆ ಹೂವುಗಳನ್ನು ಕಿತ್ತು ಎಸೆದು ಬಿಡುತ್ತೇವೆ. ಈ ಹೂವುಗಳನ್ನು ಎಸೆಯುವ ಬದಲು ಅದನ್ನು ಕೂಡ ಉಪಯೋಗ ಮಾಡಬಹುದು. ಹೌದು ಅದರಿಂದ ಪರಿಮಳಯುಕ್ತ, ರಾಸಾಯನಿಕ ಮುಕ್ತ ಧೂಪವನ್ನು ತಯಾರಿಸಬಹುದು. ಈ ಹೋಮ್‌ಮೇಡ್‌ ಧೂಪ ತಯಾರಿಸುವುದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ.

Homemade Incense: ತುಳಸಿ ಹೂವುಗಳಿಂದ ತಯಾರಿಸಿ ರಾಸಯನಿಕಮುಕ್ತ ಪರಿಮಳಯುಕ್ತ ಧೂಪ
ಸಾಂದರ್ಭಿಕ ಚಿತ್ರ Image Credit source: vecteezy
ಮಾಲಾಶ್ರೀ ಅಂಚನ್​
|

Updated on: Nov 08, 2026 | 6:42 PM

Share

ಹಿಂದೂ ಧರ್ಮದಲ್ಲಿ, ತುಳಸಿಯನ್ನು (Tulsi) ವಿಷ್ಣುವಿಗೆ ಅತ್ಯಂತ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಅನೇಕರು ದೇವರ ಕೋಣೆಯಲ್ಲಿ ತುಳಸಿ ಎಲೆ ಅಥವಾ ತುಳಸಿ ಹೂವುಗಳನ್ನು ಇಡುತ್ತಾರೆ. ಮರುದಿನ ಆ ತುಳಸಿ ಹೂವುಗಳನ್ನು ಎಸೆದು ಬಿಡುತ್ತಾರೆ. ಇನ್ನೂ ಅನೇಕರು ತುಳಸಿ ಗಿಡದಲ್ಲಿ ಬೆಳೆದ ಹೂವುಗಳನ್ನು ಯಾವುದೇ ಉಪಯೋಗವಿಲ್ಲವೆಂದು ಕಿತ್ತು ಎಸೆದುಬಿಡುತ್ತಾರೆ. ಈ ರೀತಿ ತುಳಸಿ ಹೂವನ್ನು ಎಸೆಯುವ ಬದಲು ಅದರಿಂದ ಧೂಪವನ್ನು ತಯಾರಿಸಬಹುದು. ಹೌದು ಮಾರುಕಟ್ಟೆಯಲ್ಲಿ ಲಭ್ಯವಿರುವ ರಾಸಾಯನಿಕಯುಕ್ತ ಧೂಪ ಅಥವಾ ಸಾಂಬ್ರಾಣಿಯನ್ನು ಬಳಸುವ ಬದಲು ಒಣಗಿದ ತುಳಸಿ ಹೂವುಗಳಿಂದ ತಯಾರಿಸಿದ ಕೆಮಿಕಲ್‌ ಫ್ರೀ ಧೂಪವನ್ನು ಬಳಸಹುದು. ಈ ಹೋಮ್‌ಮೇಡ್‌ ಧೂಪವನ್ನು ತಯಾರಿಸುವುದು ಹೇಗೆ ಎಂಬ ಪೂರ್ಣ ವಿವರ ಇಲ್ಲಿದೆ.

ತುಳಸಿ ಹೂವುಗಳಿಂದ ತಯಾರಿಸಿ ಧೂಪ:

ನೀವು ಮಾರುಕಟ್ಟೆಯಿಂದ ಯಾವುದೇ ವಿಶೇಷ ಪದಾರ್ಥಗಳನ್ನು ಖರೀದಿಸುವ ಅಗತ್ಯವಿಲ್ಲ. ಒಣಗಿದ ತುಳಸಿ ಹೂವುಗಳು ಮತ್ತು ಕೆಲವು ಅಡುಗೆಮನೆಯ ಪದಾರ್ಥಗಳನ್ನು ಬಳಸಿ ನೀವು ಸುಲಭವಾಗಿ ಧೂಪವನ್ನು ತಯಾರಿಸಬಹುದು.

ತುಳಸಿ ಹೂವಿನ ಧೂಪ ತಯಾರಿಸಲು ಬೇಕಾಗಿರುವ ಸಾಮಾಗ್ರಿಗಳು:

  • ಒಣಗಿದ ತುಳಸಿ ಹೂವು
  • ಪಲಾವ್‌ ಎಲೆ 5 ರಿಂದ 6
  • ಲವಂಗ
  • ಕರ್ಪೂರ 12 ರಿಂದ 13
  • ಅರಶಿನ ಪುಡಿ
  • ರೋಸ್‌ ವಾಟರ್‌
  • ಹಸುವಿನ ತುಪ್ಪ

ತುಳಸಿ ಹೂವಿನ ಧೂಪ ತಯಾರಿಸುವ ವಿಧಾನ:

  • ಮೊದಲಿಗೆ ತುಳಸಿ ಹೂವನ್ನು ಎರಡರಿಂದ ಮೂರು ದಿನ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಬಳಿಕ ಇದನ್ನು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಳ್ಳಿ. ಇದರ ಜೊತೆಗೆ ನೀವು  ಪಲಾವ್‌ ಎಲೆ, ಲವಂಗ, ಕರ್ಪೂರ, ಅರಶಿನ ಪುಡಿ ಇವೆಲ್ಲವನ್ನೂ ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಸುವಾಸನೆಗಾಗಿ ನೀವು ಸ್ವಲ್ಪ ಹವನ ಸಾಮಗ್ರಿ, ಶ್ರೀಗಂಧವನ್ನು ಕೂಡ ಸೇರಿಸಬಹುದು.
  • ಈಗ, ತಯಾರಾದ ಈ ಪುಡಿಯನ್ನು ಒಂದು ಪ್ಲೇಟ್‌ಗೆ ವರ್ಗಾಯಿಸಿ, ಅದಕ್ಕೆ ಸ್ವಲ್ಪ ರೋಸ್‌ ವಾಟರ್‌ ಮತ್ತು ತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮೃದುವಾದ ಉಂಡೆಯನ್ನು ತಯಾರಿಸಿಕೊಳ್ಳಿ. ನಂತರ ಒಂದೊಂದೇ ಸಣ್ಣ ಉಂಡೆಗಳನ್ನು ತೆಗೆದುಕೊಂಡು ಕೋನ್‌ ಆಕಾರದಲ್ಲಿ ಧೂಪವನ್ನು ತಯಾರಿಸಿಕೊಳ್ಳಿ.
  • ತಯಾರಾದ ತುಳಸಿ ಹೂವಿನ ಧೂಪವನ್ನು ಸ್ವಚ್ಛವಾದ ಬಟ್ಟೆ ಅಥವಾ ತಟ್ಟೆಯ ಮೇಲೆ ಇರಿಸಿ ನೆರಳಿರುವ ಹಾಗೂ ಚೆನ್ನಾಗಿ ಗಾಳಿ ಬೀಸುವ ಪ್ರದೇಶದಲ್ಲಿ ಇಟ್ಟು 2 ರಿಂದ 3 ದಿನಗಳ ಕಾಲ ಒಣಗಲು ಬಿಡಿ. ನೀವು ಧೂಪವನ್ನು ಒಣಗಲು ಫ್ಯಾನ್‌ ಅಡಿಯಲ್ಲೂ ಇಡಬಹುದು. ಧೂಪ ತೇವಾಂಶವನ್ನು ಉಳಿಸಿಕೊಳ್ಳದಂತೆ  ಚೆನ್ನಾಗಿ ಒಣಗಲು ಬಿಡುವುದು ಮುಖ್ಯ. ಆದರೆ ಧೂಪವನ್ನು ನೇರ ಸೂರ್ಯನ ಬೆಳಕಿನಲ್ಲಿ ಒಣಗಿಸಬಾರದು. ಏಕೆಂದರೆ ಇದು ಸುವಾಸನೆಯನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಕಿತ್ತಳೆ ಸಿಪ್ಪೆಯ ಸಾಬೂನು; ಈ ಕೆಮಿಕಲ್‌ ಫ್ರೀ ಸೋಪ್ ತಯಾರಿಸೋದು ಬಲು ಸುಲಭ

ತುಳಸಿ ಧೂಪದ ಬಳಕೆ:

ಹಿಂದೂ ಧರ್ಮದಲ್ಲಿ, ತುಳಸಿಯನ್ನು ವಿಷ್ಣುವಿಗೆ ಅತ್ಯಂತ ಪ್ರಿಯವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನೀವು ಪೂಜೆಯ ಸಮಯದಲ್ಲಿ ಈ ತುಳಸಿ ಹೂವಿನ ಪರಿಮಳಯುಕ್ತ ಧೂಪವನ್ನು ಬಳಸಿ. ಇನ್ನು ಮುಂದೆ ತುಳಸಿ ಹೂವುಗಳನ್ನು ಎಸೆಯುವ ಬದಲು, ನೀವು ಈ ರೀತಿ ಧೂಪವನ್ನು ತಯಾರಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಪಿತೃಕಾರ್ಯದಲ್ಲಿ ಭಾಗವಹಿಸಲು ಪ್ರದೋಷ್​ಗೆ ಸೀಮಿತ ಅನುಮತಿ ನೀಡಿದ ಕೋರ್ಟ್
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ಎಥೆನಾಲ್​ ಉತ್ಪಾದಿಸಲು ಹೇಳಿ, ಇದೀಗ ಖರೀದಿಸ್ತಿಲ್ಲ: ಸಚಿವ ಎಂಬಿ ಪಾಟೀಲ್​
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ದೇವಿರಮ್ಮ ದರ್ಶನಕ್ಕೆ ಭಕ್ತಸಾಗರ! ಬೆಟ್ಟದ ತುದಿಯಲ್ಲಿ ಕಂಬಿ ಮುರಿದು ದುರಂತ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಕಿಚ್ಚ ಸುದೀಪ್ ಆಡಿಸಿದ ಆಟಕ್ಕೆ ಬಿಗ್ ಬಾಸ್ ಸ್ಪರ್ಧಿಗಳ ತಲೆ ಗಿರಗಿರ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಹಾಸನಾಂಬೆ ದರ್ಶನ ಪಡೆದ ಹೆಚ್​ಡಿಕೆ ದಂಪತಿ
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಕುಟುಂಬ ಸಮೇತ ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿದ ಡಿಕೆ ಶಿವಕುಮಾರ್
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಬೆಂಗಳೂರಲ್ಲಿ ವಿಮಾನ ಕ್ಯಾನ್ಸಲ್‌ಗೆ ಪ್ರಯಾಣಿಕರು ಗರಂ, ಸಿಬ್ಬಂದಿಗೆ ತರಾಟೆ
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
ಶಿವಮೊಗ್ಗದ ಬಿಜೆಪಿ ಕಚೇರಿ, ವಿಜಯೇಂದ್ರ ನಿವಾಸದ ಮುಂದೂ ಪೋಸ್ಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
'ಹೌದು.. ನಾನು ಬಲಿತ ದಲಿತನೇ ಸುಮಾರಣ್ಣ': JDSಗೆ ಕಾಂಗ್ರೆಸ್​​ ಕೌಂಟರ್​
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಮಂಜನ ಮತ್ತೆ ಬಿಗ್​​ಬಾಸ್​ಗೆ ಸ್ವಾಗತಿಸಿದ ಕಿಚ್ಚ ಸುದೀಪ್: ವಿಡಿಯೋ ನೋಡಿ