
ಬಾಳೆಹಣ್ಣು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಾಳೆಹಣ್ಣು ಮಾತ್ರವಲ್ಲ ಬಾಳೆ ಹೂವು (Banana Flower) ಕೂಡ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿವೆ. ಪ್ರೋಟೀನ್, ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ರಂಜಕ, ಪೊಟ್ಯಾಸಿಯಮ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಬಾಳೆ ಹೂವಿನ ಸೇವನೆಯಿಂದ ಸಾಕಷ್ಟು ಆರೋಗ್ಯ ಪ್ರಯೋಜನವನ್ನು ಪಡೆಯಬಹುದು. ನಿಮಗೂ ಕೂಡ ಬಾಳೆ ಹೂವನ್ನು ಸೇವಿಸಬೇಕೆಂದಾದರೆ ಹೀಗೊಮ್ಮೆ ಅದರಿಂದ ರುಚಿಕರ ಪಲ್ಯವನ್ನು ಮಾಡಿ, ಗಂಜಿಊಟದೊಂದಿಗೆ ಸವಿಯಿರಿ. ಈ ರೆಸಿಪಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಬಾಳೆಹಣ್ಣು, ಬಾಳೆದಿಂಡಿನ ಹಾಗೆ ಬಾಳೆ ಹೂವು ಕೂಡ ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಈ ಬಾಳೆ ಹೂವಿನಿಂದ ರುಚಿಕರ ಪಲ್ಯ ಮಾಡಿ ಸವಿಯುವ ಮೂಲಕ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಇದನ್ನು ತಯಾರಿಸುವುದು ತುಂಬಾನೇ ಸುಲಭ. ಈ ಒಂದು ರೆಸಿಪಿಯನ್ನು ಹೆಸರಿನ Sudha & Sandeep Manjunath ಫೇಸ್‌ಬುಕ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಸಣ್ಣದಾಗಿ ಹೆಚ್ಚಿದ ಬಾಳೆ ಹೂವು, ಅರಶಿನ, ಧನಿಯಾ ಪುಡಿ, ಅಚ್ಚಖಾರದ ಪುಡಿ, ಹುಣಸೆ ಹಣ್ಣು, ಜೀರಿಗೆ ಪುಡಿ, ತೆಂಗಿನಕಾಯಿ ತುರಿ, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ಎಣ್ಣೆ, ಸಾಸಿವೆ, ಕರಿಬೇವು, ಈರುಳ್ಳಿ ಅಥವಾ ಬೆಳ್ಳುಳ್ಳಿ
ಇದನ್ನೂ ಓದಿ: ಹಲಸಿನ ಹಣ್ಣಿನ ಪಡ್ಡು; ಈ ಸ್ಪೆಷಲ್ ಖಾದ್ಯ ತಯಾರಿಸೋದು ಬಲು ಸುಲಭ
ರೋಗನಿರೋಧಕ ಶಕ್ತಿಯ ಹೆಚ್ಚಳ: ಬಾಳೆಹಣ್ಣಿನಲ್ಲಿರುವ ಫ್ಲೇವನಾಯ್ಡ್‌ಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಹೃದ್ರೋಗ ದಂತಹ ಕಾಯಿಲೆಗಳಿಂದ ರಕ್ಷಿಸುತ್ತವೆ.
ಮೂತ್ರಪಿಂಡದ ಆರೋಗ್ಯವನ್ನು ವೃದ್ಧಿಸುತ್ತದೆ: ಮೂತ್ರಪಿಂಡದ ಸಮಸ್ಯೆ ಇರುವವರಿಗೆ ಬಾಳೆ ಹೂವು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ಸೇವನೆಯು ಮೂತ್ರಪಿಂಡಗಳನ್ನು ಆರೋಗ್ಯವಾಗಿಡಲು ಮತ್ತು ಮೂತ್ರಪಿಂಡದ ಕಲ್ಲುಗಳ ರಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.
ಮೂಳೆಗಳನ್ನು ಬಲಪಡಿಸುತ್ತದೆ: ಬಾಳೆಹಣ್ಣಿನ ಹೂವುಗಳು ಮೂಳೆಗಳನ್ನು ಬಲಪಡಿಸಲು ಸಹಕಾರಿ. ಬಾಳೆಹಣ್ಣಿನಲ್ಲಿ ನೈಸರ್ಗಿಕವಾಗಿ ಕಂಡುಬರುವ ಉತ್ಕರ್ಷಣ ನಿರೋಧಕಗಳಾದ ಕ್ವೆರ್ಸೆಟಿನ್ ಮತ್ತು ಕ್ಯಾಟೆಚಿನ್‌ಗಳು ಮೂಳೆ ಸಾಂದ್ರತೆ ನಷ್ಟವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಮೂಳೆಯನ್ನು ಬಲಪಡಿಸುತ್ತದೆ.
ಮಧುಮೇಹವನ್ನು ನಿಯಂತ್ರಣದಲ್ಲಿಡುತ್ತದೆ: ಬಾಳೆ ಹೂವುಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುವಲ್ಲಿ ಬಹಳ ಪ್ರಯೋಜನಕಾರಿ. ಬಾಳೆ ಹೂವುಗಳಲ್ಲಿ ಕಂಡುಬರುವ ಆರೋಗ್ಯಕರ ಗುಣಗಳು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕಾರಿ.
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಬಾಳೆಹಣ್ಣಿನಲ್ಲಿ ನಾರಿನಂಶ ಹೇರಳವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಹೊಟ್ಟೆಯ ವಿವಿಧ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:30 pm, Mon, 13 July 26