AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲಸಿನ ಹಣ್ಣಿನ ಪಡ್ಡು; ಈ ಸ್ಪೆಷಲ್‌ ಖಾದ್ಯ ತಯಾರಿಸೋದು ಬಲು ಸುಲಭ

ಮಳೆಗಾಲದಲ್ಲಿ ಹಲಸಿನ ಹಣ್ಣಿನ ಭರಾಟೆ ತುಂಬಾನೇ ಜೋರಿರುತ್ತೆ. ಈ ಹಣ್ಣನ್ನು ಬಹುತೇಕ ಎಲ್ಲರೂ ಸಿಕ್ಕಾಪಟ್ಟೆ ಇಷ್ಟಪಟ್ಟು ತಿನ್ನುತ್ತಾರೆ. ಹಲಸಿನ ಹಣ್ಣಿನಿಂದ ಬಗೆ ಬಗೆಯ ಖಾದ್ಯಗಳನ್ನೂ ಮಾಡಿ ಸವಿಯಬಹುದು. ಈ ಬಾರಿ ನಿಮಗೇನಾದ್ರೂ ಹಲಸಿನ ಹಣ್ಣು ಸಿಕ್ರೆ ಅದರಿಂದ ಸಖತ್‌ ಟೇಸ್ಟಿಯಾಗಿರುವ ಸ್ವೀಟ್‌ ಪಡ್ಡು ಮಾಡಿ. ಈ ಸ್ಪೆಷಲ್‌ ಪಡ್ಡು ರುಚಿಗೆ ನೀವು ಪಕ್ಕಾ.

ಹಲಸಿನ ಹಣ್ಣಿನ  ಪಡ್ಡು; ಈ ಸ್ಪೆಷಲ್‌ ಖಾದ್ಯ ತಯಾರಿಸೋದು ಬಲು ಸುಲಭ
ಹಲಸಿನ ಹಣ್ಣಿನ ಪಡ್ಡುImage Credit source: Getty Images
ಮಾಲಾಶ್ರೀ ಅಂಚನ್​
|

Updated on: Jul 09, 2026 | 6:44 PM

Share

ದಕ್ಷಿಣ ಭಾರತೀಯರ ನೆಚ್ಚಿನ ಖಾದ್ಯಗಳಲ್ಲಿ ಪಡ್ಡು (Paddu) ಕೂಡ ಒಂದು. ಸಾಮಾನ್ಯವಾಗಿ  ಹೆಚ್ಚಿನವರ ಮನೆಗಳಲ್ಲಿ ರುಚಿರುಚಿಯಾದ ಮಸಾಲ ಪಡ್ಡು, ರವೆ-ಮೊಸರು ಪಡ್ಡು ತಯಾರಿಸುತ್ತಾರೆ. ಇದರ ಜೊತೆಗೆ ಹಲಸಿನ ಹಣ್ಣಿನ ಸ್ವೀಟ್‌ ಪಡ್ಡು ಕೂಡ ತಯಾರಿಸಬಹುದು. ಮಳೆಗಾಲದ ಋತುವಿನಲ್ಲಿ ಹಲಸಿನ ಹಣ್ಣಿನ ಭರಾಟೆ ತುಂಬಾನೇ ಜೋರಿರುತ್ತವೆ. ಪೋಷಕಾಂಶಗಳ ಗಣಿಯಾಗಿರುವ ಈ ಹಣ್ಣು ತಿನ್ನಲು ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು. ಇಂತಹ ಹಲಸಿನ ಹಣ್ಣನ್ನು ಬರೀ ತಿಂದು ಬೋರಾಗಿದ್ರೆ, ಇದರಿಂದ ಒಂದು ಸಲ ಸ್ವೀಟ್‌ ಪಡ್ಡು ತಯಾರಿಸಿ. ಈ ಸ್ಪೆಷಲ್‌ ಪಡ್ಡು ರೆಸಿಪಿಯ ಸಂಪೂರ್ಣ ವಿವರ ಇಲ್ಲಿದೆ.

ಸ್ವಾದಿಷ್ಟಕರ ಹಲಸಿನ ಹಣ್ಣಿನ ಪಡ್ಡು ರೆಸಿಪಿ:

ಸ್ವಾದಿಷ್ಟಕರವಾದ ಹಲಸಿನ ಹಣ್ಣಿನ ಪಡ್ಡನ್ನು ತಯಾರಿಸುವುದು ತುಂಬಾನೇ ಸುಲಭ, ಜೊತೆಗೆ ಇದಕ್ಕೆ ಹೆಚ್ಚಿನ ಪದಾರ್ಥಗಳು ಕೂಡ ಬೇಕಿಲ್ಲ. ಕೇವಲ ನಾಲ್ಕರಿಂದ ಐದು ಪದಾರ್ಥಗಳನ್ನು ಬಳಸಿ ಸಖತ್‌ ಟೇಸ್ಟಿಯಾಗಿರುವ ಹಲಸಿನ ಹಣ್ಣಿನ ಸ್ವೀಟ್‌ ಪಡ್ಡು ತಯಾರಿಸಬಹುದು.

ಹಲಸಿನ ಹಣ್ಣಿನ ಪಡ್ಡು ತಯಾರಿಸಲು ಬೇಕಾದ ಸಾಮಾಗ್ರಿಗಳು:

  •  ಒಂದು ಕಪ್‌ ದೋಸೆ ಅಕ್ಕಿ
  • ತೆಂಗಿನಕಾಯಿ ತುರಿ
  • ಬೆಲ್ಲ
  • ಹಲಸಿನ ಹಣ್ಣಿನ ತೊಳೆ
  • ರುಚಿಗೆ ತಕ್ಕಷ್ಟು ಉಪ್ಪು
  • ತುಪ್ಪ
  • ಏಲಕ್ಕಿ

ಇದನ್ನೂ ಓದಿ: ಚಹಾ ತಯಾರಿಸುವಾಗ, ಸೇವಿಸುವಾಗ ಮಾಡುವ ಈ ತಪ್ಪುಗಳು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು

ಹಲಸಿನ ಹಣ್ಣಿನ ಪಡ್ಡು ತಯಾರಿಸುವ ವಿಧಾನ:

  • ಮೊದಲಿಗೆ ಅಕ್ಕಿಯನ್ನು ಒಂದರಿಂದ ಎರಡು ಗಂಟೆಗಳ ಕಾಲ ನೆನೆಸಿಡಿ.
  • ಬಳಿಕ ಒಂದು ಮಿಕ್ಸಿ ಜಾರ್‌ಗೆ ನೆನೆಸಿದ ಅಕ್ಕಿ, ಸಿಹಿಗೆ ತಕ್ಕಷ್ಟು ಬೆಲ್ಲ, ಒಂದೆರಡು ಏಲಕ್ಕಿ, ತೆಂಗಿನಕಾಯಿ ತುರಿ, ಒಂದು ಕಪ್‌ ಹಲಸಿನ ತೊಳೆ, ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಎಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ. ಈ ಹಿಟ್ಟು ಸಾಮಾನ್ಯ ಪಡ್ಡು ತಯಾರಿಸುವ ಹಿಟ್ಟಿನ ಹದಕ್ಕೆ ಇರಲಿ.
  • ಹಿಟ್ಟು ರುಬ್ಬಿದ ಬಳಿಕ ಗ್ಯಾಸ್‌ ಒಲೆ ಮೇಲೆ ಪಡ್ಡು ಪ್ಯಾನ್‌ ಇಟ್ಟು ಅದಕ್ಕೆ ತುಪ್ಪವನ್ನು ಸುರಿಸಿ, ತುಪ್ಪ ಕಾದ ಬಳಿಕ ಸ್ಪೂನ್‌ ಸಹಾಯದಿಂದ ಹಿಡ್ಡನ್ನು ಪ್ಯಾನ್‌ಗೆ ಹಾಕಿ ಸ್ವಲ್ಪ ಹೊತ್ತು ಮುಚ್ಚಳ ಮುಚ್ಚಿ ಬೇಯಿಸಿ, ನಂತರ ಪಡ್ಡು ಮಗುಚಿ ಅದರ ಇನ್ನೊಂದು ಭಾಗವನ್ನು ಕೂಡ ಬೇಯಲು ಬಿಡಿ. ಸ್ವಲ್ಪ ಕಂದು ಬಣ್ಣಕ್ಕೆ ತಿರುಗಿದರೆ ಪಡ್ಡು ಸವಿಯಲು ರೆಡಿ.

ನೀವು ಕೂಡ ಹಲಸಿನ ಹಣ್ಣಿನ ಈ ಸೀಸನ್‌ನಲ್ಲಿ ರುಚಿಕರ ಹಲಸಿನ ಹಣ್ಣಿನ ಪಡ್ಡು ಒಮ್ಮೆ ಮಾಡಿ ಸವಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಬಾಗಲಕೋಟೆ ಜೋಡೆತ್ತುಗಳ ಕಮಾಲ್‌.. 10 ಗಂಟೆಗಳಲ್ಲಿ 20 ಎಕರೆ ಬಿತ್ತನೆ!
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಮಹಿಳೆಯ ಸಾಲು ಸಾಲು ಕಷ್ಟ ಕೇಳಿ ಕಣ್ಣೀರಿಟ್ಟ ಸಂಸದ ಶ್ರೇಯಸ್ ಪಟೇಲ್
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಇಂಡಸ್ಟ್ರಿಗೆ ಅಪ್ಪ ಆಗಿ ಬಿಟ್ಟಿದ್ದಾರಂಂತೆ ರಂಗಾಯಣ ರಘು: ವಿಡಿಯೋ ನೋಡಿ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ಹೆಣ್ಮಕ್ಕಳು ಬೇಕು ಸರ್.. ಸಿಎಂ ಮುಂದೆ ಅಳಲು ತೋಡಿಕೊಂಡ ಯುವಕ
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ನಟಿಸೋದು ಇಷ್ಟ, ಡ್ಯಾನ್ಸ್ ಮಾಡೋದು ಕಷ್ಟ: ಹಿರಿಯ ನಟ ಅನಂತ್ ನಾಗ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದ ದಿನಗಳ ನೆನಪಿಸಿಕೊಂಡ ಅನಂತ್
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
‘ದಾದಾ ಸಾಹೇಬ್ ಫಾಲ್ಕೆ’ ಘೋಷಣೆಯಾದ ದಿನ ಮಾಡಿದ್ದೇನು? ಅನಂತ್ ನಾಗ್ ಉತ್ತರ
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ರಂಗಭೂಮಿ ಹಾಗೂ ಬದುಕಿನ ಪಯಣ ಬಿಚ್ಚಿಟ್ಟ ಅನಂತ್ ನಾಗ್
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಬದಲಾಗುತ್ತಿರುವ ಇಂದಿನ ರಾಜಕೀಯ ವ್ಯವಸ್ಥೆ ಬಗ್ಗೆ ಅನಂತ್ ನಾಗ್ ನೇರ ಮಾತು
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ
ಸಿಗಂದೂರು ರಸ್ತೆಯಲ್ಲಿ ನಿಗೂಢ ಪೂಜೆ, ಮಾಟಮಂತ್ರದಿಂದ ಬೆಚ್ಚಿಬಿದ್ದ ಜನ