Chanakya Niti : ಅಪರಿಚಿತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸುವ ಮುನ್ನ ಈ ಗುಣಗಳಿವೆಯೇ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 06, 2024 | 3:49 PM

ಈಗಿನ ಕಾಲದಲ್ಲಿ ಯಾರನ್ನು ನಂಬುವಂತಿಲ್ಲ. ಯಾರು ಹೇಗೆ ಇರುತ್ತಾರೆ ಎಂದು ಹೇಳುವುದು ಕಷ್ಟ. ಹೀಗಾಗಿ ನಾವು ಒಬ್ಬ ವ್ಯಕ್ತಿಯನ್ನು ನಂಬುವ ಮೊದಲು ಅಥವಾ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸುವ ಮೊದಲು ಆತನನ್ನು ಸರಿಯಾಗಿ ಪರೀಕ್ಷಿಸಬೇಕು ಎಂದು ಚಾಣಕ್ಯ ಹೇಳುತ್ತಾನೆ. ವ್ಯಕ್ತಿಯಲ್ಲಿ ಈ ನಾಲ್ಕು ಗುಣಗಳಿವೆಯೇ ಎಂದು ನೋಡುವುದು ಮುಖ್ಯವಂತೆ. ಈ ಎಲ್ಲಾ ವಿಚಾರಗಳನ್ನು ಗಮನಿಸಿದ ಬಳಿಕ ಸ್ನೇಹ ಬೆಳೆಸಿದರೆ ಆಗ ಮಾತ್ರ ಸಂಬಂಧ ಉತ್ತಮವಾಗಿರಲು ಸಾಧ್ಯವಂತೆ. ಹಾಗಾದ್ರೆ ಚಾಣಕ್ಯನು ಹೇಳುವ ಆ ನಾಲ್ಕು ಅಂಶಗಳೇನು? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Chanakya Niti : ಅಪರಿಚಿತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸುವ ಮುನ್ನ ಈ ಗುಣಗಳಿವೆಯೇ ನೋಡಿ
Chanakya Niti
Follow us on

ಸಂಬಂಧಗಳು ಬಹಳ ಸೂಕ್ಷ್ಮವಾದುದು. ಯಾವುದೇ ಸಂಬಂಧಗಳಿರಲಿ ಅದನ್ನು ಬಹಳ ಕಾಳಜಿಯುತವಾಗಿ ನಿಭಾಯಿಸಿಕೊಂಡು ಹೋಗಬೇಕು. ಹೀಗಾಗಿ ಯಾವುದೇ ವ್ಯಕ್ತಿಯ ಜೀವನದಲ್ಲಿ ಉತ್ತಮ ಸಂಬಂಧಗಳು ಬಹಳ ಮುಖ್ಯ. ಒಳ್ಳೆಯ ಜನರೊಂದಿಗಿನ ಸಂಬಂಧವನ್ನು ಎಂದಿಗೂ ಹಾಳು ಮಾಡಿಕೊಳ್ಳಬಾರದು. ಅದೇ ರೀತಿ ಅಪರಿಚಿತ ವ್ಯಕ್ತಿಯ ಜೊತೆಗೆ ಸ್ನೇಹ ಸಂಬಂಧವನ್ನು ಹೊಂದುವ ಮುನ್ನ ಈ ನಾಲ್ಕು ವಿಚಾರಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕು ಎನ್ನುವ ಸಲಹೆಯನ್ನು ಚಾಣಕ್ಯ ನೀಡುತ್ತಾನೆ.

  • ತ್ಯಾಗದ ಗುಣವಿದೆಯೇ ನೋಡಿ : ಆಚಾರ್ಯ ಚಾಣಕ್ಯನು ಹೇಳುವಂತೆ ನಾವು ಇತರರೊಂದಿಗೆ ಸ್ನೇಹ ಬೆಳೆಸಿದಾಗ ಅವರಲ್ಲಿ ತ್ಯಾಗದ ಗುಣವಿದೆಯೇ ಎಂದು ತಿಳಿದುಕೊಳ್ಳುವುದು ಮುಖ್ಯ. ತ್ಯಾಗದ ಗುಣವುಳ್ಳ ವ್ಯಕ್ತಿಯನ್ನು ಕಣ್ಣು ಮುಚ್ಚಿಯೇ ನಂಬಬಹುದು. ಅಂತಹ ಜನರು ಮೊದಲು ಇತರರ ಬಗ್ಗೆ ಯೋಚಿಸುತ್ತಾರೆ. ಇತರರ ಸಂತೋಷಕ್ಕಾಗಿ ಎಲ್ಲವನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಈ ಗುಣವಿರುವ ಜನರೊಂದಿಗೆ ಸ್ನೇಹಿತ ಬೆಳೆಸಿದರೆ ಸಮಸ್ಯೆಗಳ ಸುಳಿಯಲ್ಲಿ ಬೀಳುವುದಿಲ್ಲ.
  • ಚರಿತ್ರೆಯನ್ನು ತಿಳಿದುಕೊಳ್ಳಿ : ಒಬ್ಬ ವ್ಯಕ್ತಿಯನ್ನು ಭೇಟಿಯಾದಾಗ ಒಳ್ಳೆಯವರಂತೆಯೇ ಕಾಣಬಹುದು. ಆದರೆ ಆತನ ಹಿನ್ನಲೆಯನ್ನು ಪರೀಕ್ಷಿಸುವುದು ಬಹಳ ಮುಖ್ಯವಾಗುತ್ತದೆ. ಒಳ್ಳೆಯ ಸ್ವಭಾವವನ್ನು ಹೊಂದಿದ ವ್ಯಕ್ತಿಯು ಇತರರ ಬಗ್ಗೆ ಕೆಟ್ಟ ಭಾವನೆಗಳನ್ನು ಹೊಂದಿರುವುದಿಲ್ಲ. ಆ ವ್ಯಕ್ತಿಯೂ ನಂಬಲರ್ಹನಾಗಿರುತ್ತಾನೆ. ಸ್ನೇಹ ಸಂಬಂಧ ಬೆಳೆಸುವ ಮುನ್ನ ಚರಿತ್ರೆ ತಿಳಿದುಕೊಂಡರೆ ಆ ಸ್ನೇಹವೂ ಭದ್ರತೆಯ ಭಾವವನ್ನು ನೀಡುತ್ತದೆ.
  • ಗುಣವನ್ನು ಪರೀಕ್ಷಿಸಿ : ಮನುಷ್ಯರೆಂದ ಮೇಲೆ ಒಳ್ಳೆಯ ಹಾಗೂ ಕೆಟ್ಟ ಗುಣಗಳಿರುತ್ತದೆ. ಆದರೆ ಈ ಕೋಪ, ಸ್ವಾರ್ಥ, ಅಹಂಕಾರ, ಸೋಮಾರಿತನ ಮತ್ತು ಸುಳ್ಳು ಹೇಳುವ ಗುಣಗಳನ್ನು ಹೊಂದಿರದ ಜನರನ್ನು ಕಣ್ಣು ಮುಚ್ಚಿ ನಂಬಬಹುದು. ಈ ಗುಣವಿರುವ ಜನರು ಎಂದಿಗೂ ಯಾರಿಗೂ ಕೂಡ ಮೋಸ ಮಾಡುವುದಿಲ್ಲ. ಈ ವ್ಯಕ್ತಿಗಳು ಜೀವನದ ಸುಖ ದುಃಖದಲ್ಲೂ ಭಾಗಿಯಾಗುತ್ತಾರೆ ಎಂಬುದನ್ನು ಮರೆಯದಿರಿ.
  • ಕೆಲಸವನ್ನು ಪರೀಕ್ಷಿಸಿ: ಒಬ್ಬ ವ್ಯಕ್ತಿಯನ್ನು ಹೇಗೆ ಎಂದು ತಿಳಿದುಕೊಳ್ಳಬೇಕಾದರೆ ಆತನ ಕೆಲಸ ಕಾರ್ಯಗಳತ್ತ ಗಮನ ಕೊಡುವುದು ಒಳ್ಳೆಯದು. ಕೆಲಸ ಕಾರ್ಯಗಳಲ್ಲಿ ನಿಯತ್ತಾಗಿದ್ದರೆ ಅಂತಹವರು ಯಾರನ್ನು ವಂಚಿಸಲಾರರು. ಒಳ್ಳೆಯ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಮನುಷ್ಯನೊಂದಿಗೆ ಸ್ನೇಹವನ್ನು ಮಾಡಬೇಕು ಎನ್ನುತ್ತಾನೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ