
ಗಂಡ್ಮಕ್ಳು (men) ಸಾಮಾನ್ಯವಾಗಿ ಹುಡುಗಿಯ ರೂಪವನ್ನು ನೋಡಿ ಆಕೆಯನ್ನು ಇಷ್ಟಪಡುತ್ತಾರೆ. ಅದರಲ್ಲೂ ಆಕೆಯ ವ್ಯಕ್ತಿತ್ವ ಇಷ್ಟವಾದರೆ ಆಕೆಯನ್ನು ಜೀವನ ಸಂಗಾತಿಯನ್ನಾಗಿ ಮಾಡುವ ಬಯಕೆಯೂ ಅವರಿಗಿರುತ್ತದೆ. ಇನ್ನೂ ಹುಡುಗರು ಹುಡುಗಿಯ ಗುಣವನ್ನು ನೋಡಿ ಇಷ್ಟಪಟ್ಟರೆ ಹುಡುಗಿಯರು ಮಾತ್ರ ಹುಡಗನಲ್ಲಿ ಆಸ್ತಿ, ಅಂತಸ್ತು ಇದೆಯೇ ಎಂಬುದನ್ನೇ ನೋಡ್ತಾರೆ ಎಂದು ಅನೇಕರು ಹೇಳ್ತಾರೆ. ಆದ್ರೆ ನಿಜಕ್ಕೂ ಹುಡುಗಿಯರು ಹಣವಂತ, ಸಿರಿವಂತ ಹುಡುಗನನ್ನೇ ಇಷ್ಟ ಪಡೋದಾ? ಹುಡುಗರ ಯಾವ ಗುಣಗಳು ಹುಡುಗಿಯರನ್ನು ಆಕರ್ಷಿಸುತ್ತದೆ ಎಂಬುದರ ರಹಸ್ಯವನ್ನು ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಸಿಕೊಟ್ಟಿದ್ದಾರೆ. ಹಾಗಿದ್ದರೆ ಚಾಣಕ್ಯರ ಪ್ರಕಾರ ಹುಡುಗಿಯರಿಗೆ ಎಂತಹ ಹುಡುಗರು ಇಷ್ಟವಾಗ್ತಾರೆ ಎಂಬುದನ್ನು ನೋಡೋಣ ಬನ್ನಿ.
ಹುಡುಗಿಯರು ಕೇವಲ ಅಂದಚಂದ ನೋಡಿ ಹುಡುಗರತ್ತ ಆಕರ್ಷಿತರಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಹುಡುಗಿಯರು ಮಹಿಳೆಯರನ್ನು ಗೌರವಿಸುವ ಮತ್ತು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಹುಡುಗರನ್ನು ಇಷ್ಟಪಡುತ್ತಾರೆ. ಹೌದು ಹುಡುಗಿಯರು ತಮ್ಮನ್ನು ಕೀಳಾಗಿ ಕಾಣದ, ಎಲ್ಲರ ಮುಂದೆ ತಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವ ಹುಡುಗ ಹುಡುಗರತ್ತ ಹೆಣ್ಮಕ್ಳು ಹೆಚ್ಚು ಆಕರ್ಷಿತರಾಗುತ್ತಾರೆ. ಅಲ್ಲದೆ ಅಂತಹ ಹುಡುಗರೊಂದಿಗೆ ಸಂತೋಷದಿಂದ ಮತ್ತು ಶಾಂತಿಯುತವಾಗಿ ಜೀವನವನ್ನು ಕಳೆಯಬಹುದು ಎಂದು ನಂಬುತ್ತಾರೆ.
ಚಾಣಕ್ಯರು ಹೇಳುವಂತೆ ಹುಡುಗಿಯರು ಮುಕ್ತವಾಗಿ ಮಾತನಾಡುವ ಹುಡುಗರನ್ನು ಇಷ್ಟಪಡುತ್ತಾರೆ. ಹುಡುಗಿಯರು ತಮ್ಮ ಹೃದಯವನ್ನು ಗೆಲ್ಲಲು ಯಾವುದೇ ಸುಳ್ಳನ್ನು ಹೇಳದೆ, ನಾಟಕ ಮಾಡದೆ ಪ್ರಾಮಾಣಿಕವಾಗಿರುವ ಮತ್ತು ಯಾವುದೇ ನೇರವಾಗಿ ಮಾತನಾಡುವ ಆದರೆ ಕಠಿಣವಾಗಿ ವರ್ತಿಸದ, ಬದಲಿಗೆ ಶಾಂತವಾಗಿ ಸತ್ಯವನ್ನೇ ಮಾತನಾಡುವ ಹುಡುಗರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಒಟ್ಟಾರೆಯಾಗಿ ಚಾಣಕ್ಯರ ಪ್ರಕಾರ ಪ್ರಾಮಾಣಿಕವಾಗಿರುವ, ಸ್ಪಷ್ಟವಾಗಿ ಮಾತನಾಡುವ ಮತ್ತು ಇತರರ ಭಾವನೆಗಳನ್ನು ಗೌರವಿಸುವ ಹುಡುಗರ ಬಗ್ಗೆ ಹೆಣ್ಮಕ್ಳು ಹೆಚ್ಚು ಆಸಕ್ತಿ ಹೊಂದಿರುತ್ತಾರೆ.
ಚಾಣಕ್ಯರ ಪ್ರಕಾರ ತಮ್ಮ ಕೋಪವನ್ನು ನಿಯಂತ್ರಿಸಬಲ್ಲ, ಕೋಪದಲ್ಲಿ ಕೆಟ್ಟ ಪದಗಳನ್ನಾಡದ, ಕೋಪದಲ್ಲಿ ಇನ್ನೊಬ್ಬರ ಭಾವನೆಗಳಿಗೆ ನೋವು ಮಾಡದ ಹುಡುಗರನ್ನು ಇಷ್ಟಪಡುತ್ತಾರೆ. ಅದೇ ಹುಡುಗಿಯರು ಸುಲಭವಾಗಿ ಕೋಪಗೊಳ್ಳುವ, ಚುಚ್ಚು ಮಾತುಗಳನ್ನಾಡುವ ಹುಡುಗರನ್ನು ಜೀವನ ಸಂಗಾತಿಯನ್ನಾಗಿ ಆಯ್ಕೆ ಮಾಡಲು ಎಂದಿಗೂ ಇಷ್ಟಪಡುವುದಿಲ್ಲ.
ಆಚಾರ್ಯ ಚಾಣಕ್ಯರು ಜವಾಬ್ದಾರಿಯುತ ಪುರುಷನನ್ನು ಸಮಾಜ ಮತ್ತು ಕುಟುಂಬದ ಬೆನ್ನೆಲುಬು ಎಂದು ಪರಿಗಣಿಸಿದ್ದಾರೆ. ತನ್ನ ಕರ್ತವ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಮಹಿಳೆಯರಿಗೆ ಮಾನಸಿಕ ಮತ್ತು ಭಾವನಾತ್ಮಕ ಭದ್ರತೆಯನ್ನು ಒದಗಿಸಬಲ್ಲ ಪುರುಷನನ್ನೇ ಮಹಿಳೆಯರು ಹೆಚ್ಚು ಇಷ್ಟಪಡೋದು.
ಇದನ್ನೂ ಓದಿ: ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದು ಅತ್ಯಗತ್ಯ
ಆಚಾರ್ಯ ಚಾಣಕ್ಯ ಹೇಳುವಂತೆ, ಬಿಕ್ಕಟ್ಟಿನ ಸಮಯದಲ್ಲೂ ತಾಳ್ಮೆ ಮತ್ತು ನಗುವನ್ನು ಕಾಯ್ದುಕೊಳ್ಳುವ, ಸಕಾರಾತ್ಮಕ ಮನಸ್ಥಿತಿ ಮತ್ತು ಹಾಸ್ಯಪ್ರಜ್ಞೆಯನ್ನು ಹೊಂದಿರುವ ಹುಡುಗರು ಹೆಣ್ಮಕ್ಳಿಗೆ ಇಷ್ಟವಾಗ್ತಾರೆ.
ಕಷ್ಟದ ಸಮಯದಲ್ಲಿ ಶಾಂತ ಮನಸ್ಥಿತಿಯಲ್ಲಿ ಯೋಚಿಸಿ ಸಮಸ್ಯೆಗಳನ್ನು ಪರಿಹರಿಸುವ ಹುಡುಗರತ್ತ ಹುಡುಗಿಯರು ಆಕರ್ಷಿತರಾಗುತ್ತಾರೆ. ಹುಡುಗಿಯರ ಸಮಸ್ಯೆಗಳನ್ನು ಕೋಪಗೊಳ್ಳತೆ ಶಾಂತವಾಗಿ ಆಲಿಸುವ ಮತ್ತು ಅವರ ಭಾವನೆಗಳನ್ನು ಮುಂಚಿತವಾಗಿ ಅರ್ಥಮಾಡಿಕೊಳ್ಳುವ ಹುಡುಗ ಜೀವನ ಸಂಗಾತಿಯಾಗಿ ಬರಬೇಕು ಎಂದು ಬಯಸುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ