Special Food : ಮಳೆಗಾಲದಲ್ಲಿ ಕರಾವಳಿಗರ ಅಡುಗೆ ಮನೆಯಲ್ಲಿ ‘ನರ್ತೆ’ ಘಮ

ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿಯ ಜನರ ಆಹಾರ ಪದ್ಧತಿಯೇ ವಿಭಿನ್ನ. ಜಿಟಿ ಜಿಟಿ ಮಳೆ ಶುರುವಾಗುತ್ತಿದ್ದಂತೆ ಗದ್ದೆಯಲ್ಲಿ ಸಿಗುವ ಬಸವನ ಹುಳುವಿನ ಜಾತಿಯ (ನರ್ತೆ) ಅಡುಗೆ ಸಿಕ್ಕಾಪಟ್ಟೆ ಫೇಮಸ್. ಯಾರ ಮನೆ ಬಾಗಿಲಿಗೆ ಹೋದರೂ ಈ ಅಡುಗೆ ಘಮವು ಮೂಗಿಗೆ ಬಡಿಯುತ್ತದೆ. ಹಾಗಾದ್ರೆ ಈ ವಿಶೇಷ ಅಡುಗೆಯ ಆ ಕುರಿತಾದ ಸಂಪೂರ್ಣ ಮಾಹಿತಿಯು ಇಲ್ಲಿದೆ.

Special Food : ಮಳೆಗಾಲದಲ್ಲಿ ಕರಾವಳಿಗರ ಅಡುಗೆ ಮನೆಯಲ್ಲಿ ನರ್ತೆ ಘಮ
ಸಾಂದರ್ಭಿಕ ಚಿತ್ರ
Edited By:

Updated on: Jun 25, 2024 | 4:10 PM

ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಲಿಸಿದರೆ ಆಹಾರ ಪದ್ಧತಿಯಲ್ಲಿ ಸಾಕಷ್ಟು ವ್ಯತ್ಯಾಸವನ್ನು ಕಾಣಬಹುದು. ಆದರೆ ಮಳೆಗಾಲದಲ್ಲಿ ಕರಾವಳಿ ಪ್ರದೇಶದ ಆಹಾರ ಪದ್ಧತಿಯು ವಿಶೇಷತೆಯಿಂದ ಕೂಡಿದೆ. ಸುತ್ತ ಮುತ್ತಲಿನ ಪರಿಸರದಲ್ಲೇ ಸಿಗುವುದರಲ್ಲಿಯೇ ಆಹಾರವನ್ನು ತಯಾರಿಸಿ ಸೇವಿಸುವ ಬಗೆ ತುಳುವರಿಗೆ ಮಾತ್ರ ಗೊತ್ತು. ಮಳೆಗಾಲದ ಆರಂಭದಲ್ಲಿ ಕರಾವಳಿಗರ ಮನೆಗೆ ಹೋದರೆ ನರ್ತೆ (ಮೃದ್ವಂಗಿಗಳು)ಯ ಅಡುಗೆಯ ಘಮವೇ ಬೇರೆ.

ಹೌದು, ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಲ್ಲಿ ಗದ್ದೆಗಳಲ್ಲಿ ಕಾಣ ಸಿಗುವ ಶಂಖಾಕೃತಿಯ ಈ ಮೃದ್ವಂಗಿಗಳಿಗೆ ಕರಾವಳಿಗರು ಆಡುಭಾಷೆಯಲ್ಲಿ ನರ್ತೆ ಎಂದು ಕರೆಯುತ್ತಾರೆ. ಗಾತ್ರದಲ್ಲಿ ತುಂಬಾ ಚಿಕ್ಕದಿದ್ದರೆ ಅವುಗಳನ್ನು ಗುಳ್ಳೆ ಎನ್ನುವುದಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಇಲ್ಲಿನ ಜನರು ಗದ್ದೆಯ ಬದುಗಳಲ್ಲಿ ನರ್ತೆ ಹೆಕ್ಕುವ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಇದೊಂದು ಮಾಂಸಹಾರವಾಗಿದ್ದು, ಈ ಚಿಪ್ಪಿರುವ ಜೀವಿಯನ್ನು ಪಲ್ಯ ಅಥವಾ ಸುಕ್ಕ ಮಾಡಿ ಸೇವಿಸಿದರೆ ಅದರ ರುಚಿ ಸವಿದವರಿಗೆ ಮಾತ್ರ ಬಲ್ಲರು. ಕೆಲವರು ಈ ನರ್ತೆಗೆ ಬಸಳೆ ಹಾಗೂ ಸೌತೆಕಾಯಿಯನ್ನು ಹಾಕಿ ಪದಾರ್ಥ ಮಾಡಿ ಸೇವಿಸುತ್ತಾರೆ.

ರೈತರ ಮಿತ್ರ ಈ ನರ್ತೆ ಅಥವಾ ಮೃದ್ವಂಗಿಗಳು

ಬೇಸಿಗೆಗಾಲ ಪ್ರಾರಂಭವಾಗುತ್ತಿದ್ದಂತೆ ಮಣ್ಣಿನಡಿಲ್ಲಿರುವ ಜೀವಿಸುವ ಈ ಜೀವಿಗಳು ಮತ್ತೆ ಕಾಣಿಸಿಕೊಳ್ಳುವುದು ಮಳೆಗಾಲದಲ್ಲೇ ಮಾತ್ರ. ಹೌದು, ಗದ್ದೆಗಳ ಅಂಟುಮಣ್ಣಿನಲ್ಲಿ ಅವಿತಿರುವ ಈ ನರ್ತೆಗಳಿಗೆ ಪಾಚಿ, ಕೆಸರು ಮಣ್ಣೇ ಆಹಾರವಾಗಿದೆ. ರೈತರ ಮಿತ್ರ ಎಂದೇ ಕರೆಸಿಕೊಂಡಿರುವ ಈ ಮೃದ್ವಂಗಿಗಳು ಮಣ್ಣನ್ನು ಹದಗೊಳಿಸುವ ಕೆಲಸ ಹಾಗೂ ಬೆಳೆ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ.

ಇದನ್ನೂ ಓದಿ: ಒತ್ತಡಲ್ಲಿರುವಾಗ ಈ ಆಹಾರಗಳ ಕಡೆಗೆ ತಿರುಗಿಯೂ ನೋಡಬೇಡಿ

ಗದ್ದೆಗಳಲ್ಲಿ ಕಾಣಸಿಗುವ ನರ್ತೆಯ ದೇಹ ರಚನೆ ಹೇಗಿದೆ?

ಮೃದ್ವಂಗಿಗಳ ಮೆತ್ತನೆಯ ಮುದ್ದೆಯಂತಹ ಶರೀರ, ಅಸ್ಥಿಪಂಜರ ರಹಿತ ದೇಹವನ್ನು ಹೊಂದಿದೆ. ತಮ್ಮ ಶರೀರ ರಕ್ಷಣೆಗೆ ಹಾಗೂ ಚಲನೆಗೆ ಯೋಗ್ಯವಾಗುವಂತಹ ಗಟ್ಟಿಯಾದ ಬಾಹ್ಯ ಕವಚವು ಶರೀರವನ್ನು ಆವರಿಸಿದೆ. ಮಳೆಗಾಲದಲ್ಲಿ ಗದ್ದೆಯ ನೀರಿನ ಹರಿವಿನೊಂದಿಗೆ ಸಂಚರಿಸುವ ಈ ಜೀವಿಗಳು ಇಂದು ಅಳಿವಿನಂಚಿನಲ್ಲಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ