Deepawali 2023: ಕಡಿಮೆ ದುಡ್ಡಿನಲ್ಲಿ ದೀಪಾವಳಿಗೆ ಮನೆಯನ್ನು ಅಲಂಕರಿಸುವುದು ಹೇಗೆ?

|

Updated on: Oct 31, 2023 | 11:33 AM

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ದೀಪಾವಳಿಯಂದು ಮನೆಯನ್ನು ಅಲಂಕರಿಸಲು ಮಾರುಕಟ್ಟೆಯಲ್ಲಿ ಹಲವಾರು ಶೋ ಪೀಸ್‌ಗಳು ಲಭ್ಯವಿದೆ. ಆದರೆ ಅವುಗಳು ಸಾಕಷ್ಟು ದುಬಾರಿಯಾಗಿದೆ. ದೀಪಾವಳಿಯಂದು ನೀವು ಕಡಿಮೆ ಬಜೆಟ್‌ನಲ್ಲಿ ಮನೆಯನ್ನು ಸಂದರವಾಗಿ ಅಲಂಕರಿಸಲು ಬಯಸಿದರೆ, ಕೆಲವು ಸರಳ ಸಲಹೆಗಳನ್ನು ಅನುಸರಿಸಿ.

Deepawali  2023: ಕಡಿಮೆ ದುಡ್ಡಿನಲ್ಲಿ ದೀಪಾವಳಿಗೆ  ಮನೆಯನ್ನು ಅಲಂಕರಿಸುವುದು ಹೇಗೆ?
Deepawali 2023
Image Credit source: Pinterest
Follow us on

ಈ ವರ್ಷದ ದೀಪಾವಳಿ ನವೆಂವರ್​​ 12ರಂದು ಆಚರಿಸಲಾಗುತ್ತಿದೆ. ಹಬ್ಬಕ್ಕೆ ಕೇವಲ 11 ದಿನಗಳು ಮಾತ್ರ ಉಳಿದಿವೆ. ಮನೆಯ ಮಹಿಳೆಯರಂತೂ ಒಂದು ತಿಂಗಳ ಹಿಂದೆಯೇ ಮನೆಯ ಸ್ವಚ್ಛಗೊಳಿಸುವುದು, ಹೊಸ ಬಟ್ಟೆಬರೆಗಳ ಶಾಪಿಂಗ್​​, ಹೀಗೆ ಹಬ್ಬದ ಅಡುಗೆಯ ತಯಾರಿಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಮನೆಯ ಅಲಂಕಾರದ ವಿಷಯಕ್ಕೆ ಬಂದರೆ ಮನೆಯ ಅಲಂಕಾರಕ್ಕಾಗಿ ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳಿವೆ. ಅದೇ ಸಮಯದಲ್ಲಿ, ಮಾರುಕಟ್ಟೆಯಲ್ಲಿ ಲೈಟ್‌ಗಳಿಂದ ಹಿಡಿದು ಶೋ ಪೀಸ್‌ಗಳವರೆಗೆ ಈ ಎಲ್ಲಾ ವಸ್ತುಗಳ ಬೆಲೆ ಕೂಡ ತುಂಬಾ ಹೆಚ್ಚಾಗಿರುತ್ತದೆ.ಈ ಕೆಲವು ಸಲಹೆಗಳ ಸಹಾಯದಿಂದ, ಕಡಿಮೆ ಬಜೆಟ್‌ನಲ್ಲಿ ದೀಪಾವಳಿಯಂದು ನಿಮ್ಮ ಮನೆಯನ್ನು ಸುಂದರವಾಗಿ ಅಲಂಕರಿಸಬಹುದು.

ಹಳೆಯ ಸೀರೆಗಳನ್ನು ಬಳಸಿ:

ಹಬ್ಬದ ಸಮಯದಲ್ಲಿ ಮನೆಗೆ ಅತಿಥಿಗಳು ಬರುವುದರಿಂದ ನಿಮ್ಮ ಮನೆಯ ಸೋಫಾಗಳು ಚಂದವಾಗಿ ಕಾಣಲು ನೀವು ಬಯಸಿದರೆ, ಈ ಸಿಂಪಲ್​ ಟಿಪ್ಸ್​ ಫಾಲೋ ಮಾಡಿ. ದುಬಾರಿ ಬೆಲೆಯ ಸೋಫಾ ಕವರ್​​​ ಬಳಸುವ ಬದಲಾಗಿ ಹಳೆಯ ಹೊಳೆಯುವ ಝರಿಯುಳ್ಳ ಸೀರೆಗಳಿಂದ ಸೋಫಾ ಕವರ್​ ತಯಾರಿಸಿ.

ಹಳೆಯ ಮಣ್ಣಿನ ಪಾತ್ರೆ ಮತ್ತು ಬಾಟಲಿಗಳನ್ನು ಬಳಸಿ:

ಮನೆಯಲ್ಲಿ ಹಳೆಯ ಸಣ್ಣ ಮಡಕೆಗಳು ಅಥವಾ ಪಾತ್ರೆಗಳು ಬಿದ್ದಿದ್ದರೆ, ಅವುಗಳನ್ನು ಮಣಿಗಳು ಮತ್ತು ಲೇಸ್ನಿಂದ ಅಲಂಕರಿಸಿ, ಇದಕ್ಕಾಗಿ ಸ್ವಲ್ಪ ಅಂಟು ಅಗತ್ಯವಿರುತ್ತದೆ. ಅದೇ ರೀತಿ, ತ್ಯಾಜ್ಯ ಬಾಟಲಿಗಳಿಗೆ ಬಣ್ಣ ಹಾಕಿ ಮತ್ತು ನೀವು ಈ ಎಲ್ಲಾ ವಸ್ತುಗಳನ್ನು ಹೂಗುಚ್ಛಗಳಾಗಿ ಬಳಸಬಹುದು.

ಗೋಡೆಗಳ ಅಲಂಕಾರ:

ಪೇಂಟಿಂಗ್ ಅಥವಾ ಎಂಬ್ರಾಯ್ಡರಿ ಕೆಲಸ ಗೊತ್ತಿದ್ದರೆ ಮನೆಯಲ್ಲೇ ಗೋಡೆಗಳಿಗೆ ಪೇಂಟಿಂಗ್ ಗಳನ್ನು ಸಿದ್ಧಪಡಿಸಿ ಕರ್ಟನ್ ಕಸೂತಿ ಮಾಡಿ ಹೊಸ ಲುಕ್ ನೀಡಬಹುದು. ಇದು ನಿಮ್ಮ ಬಜೆಟ್‌ನಲ್ಲಿಯೂ ಉಳಿಯುತ್ತದೆ ಮತ್ತು ಮನೆಗೆ ಹೊಸ ನೋಟವನ್ನು ನೀಡುತ್ತದೆ. ಇದಕ್ಕಾಗಿ ನೀವು ಆನ್‌ಲೈನ್ ವೀಡಿಯೊಗಳಿಂದ ಸಲಹೆಗಳನ್ನು ಸಹ ತೆಗೆದುಕೊಳ್ಳಬಹುದು.

ಇದನ್ನೂ ಓದಿ: ಸಂಜೆಯ ಸ್ಯ್ನಾಕ್ಸ್ ಸಮಯಕ್ಕೆ ಮನೆಯಲ್ಲಿಯೇ ತಯಾರಿಸಿ ಗರಿಗರಿಯಾದ ಆಲೂ ಟಿಕ್ಕಿ

ಹೂವುಗಳಿಂದ ಅಲಂಕರಿಸಿ:

ಹಬ್ಬದ ಸಮಯದಲ್ಲಿ ಮನೆಯನ್ನು ಹೂವಿನಿಂದ ಅಲಂಕರಿಸುವುದು ಅನಿವಾರ್ಯ. ನಿಮ್ಮ ಮನೆಯನ್ನು ಅಲಂಕರಿಸಲು ಇದು ಅತ್ಯಂತ ಸಾಂಪ್ರದಾಯಿಕ ಮಾರ್ಗವಾಗಿದೆ ಮತ್ತು ಹೂವುಗಳಿಂದ ಅಲಂಕರಿಸುವುದು ನಿಮಗೆ ಹೆಚ್ಚು ವೆಚ್ಚವಾಗುವುದಿಲ್ಲ. ಇದಕ್ಕಾಗಿ, ಸ್ಥಳೀಯ ಸಗಟು ವ್ಯಾಪಾರಿಗಳಿಂದ ಹಳದಿ ಮತ್ತು ಕಿತ್ತಳೆ ಬಣ್ಣದ ಚೆಂಡು ಹೂವು ಒಟ್ಟಿಗೆ ಖರೀದಿಸಿ, ಹಾರ ತಯಾರಿಸಿ. ಜೊತೆಗೆ ಮಾವಿನ ಎಲೆಗಳಿಂದ ಮನೆಯನ್ನು ಅಲಂಕರಿಸಿ.

ರಂಗೋಲಿ ಹಾಕಿ:

ದೀಪಾವಳಿಯಂದು ಅಂಗಳದಲ್ಲಿ ರಂಗೋಲಿ ಹಾಕದಿದ್ದರೆ ಅದು ಅಪೂರ್ಣ ಎನಿಸುತ್ತದೆ. ಆದ್ದರಿಂದ ದೀಪಾವಳಿಯಂದು ರಂಗೋಲಿ ಹಾಕಿ. ಇತ್ತೀಚಿನ ದಿನಗಳಲ್ಲಿ ರಂಗೋಲಿ ಮಾಡಲು ವಿನ್ಯಾಸದ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳೊಂದಿಗೆ ನೀವು ಸುಲಭವಾಗಿ ರಂಗೋಲಿಯನ್ನು ಮಾಡಬಹುದು. ಇದಲ್ಲದೇ ಅಲಂಕಾರದಿಂದ ಉಳಿದಿರುವ ಹೂವುಗಳನ್ನು ಬಳಸಿ ಸುಂದರವಾದ ರಂಗೋಲಿಯನ್ನು ಸಹ ಮಾಡಬಹುದು.

ಜೀವಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: