Kannada News Lifestyle Do you often feel pain in the right side of the stomach? These may be symptoms of these diseases
Abdominal Pain: ನಿಮ್ಮ ಹೊಟ್ಟೆಯ ಬಲಭಾಗದಲ್ಲಿ ಆಗಾಗ್ಗೆ ನೋವು ಕಾಣಿಸಿಕೊಳ್ಳುತ್ತದೆಯೇ? ಈ ಕಾಯಿಲೆ ಲಕ್ಷಣವಾಗಿರಬಹುದು
ಹೊಟ್ಟೆನೋವು ಸಾಮಾನ್ಯ ಸಮಸ್ಯೆಯಾಗಿದೆ. ಆದರೆ ಪ್ರತಿಯೊಂದು ನೋವಿನ ಕಾರಣ ಬೇರೆಯಾಗಿರಬಹುದು. ಹಾಗೆಯೇ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದು ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿರಬಹುದು. ಹೀಗಿರುವಾಗ ಸೂಕ್ತ ವೈದೈಕೀಯ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಅವಶ್ಯಕವಾಗಿದೆ.
ಹೊಟ್ಟೆನೋವು(Abdominal Pain) ಸಾಮಾನ್ಯವಾಗಿ ಎಲ್ಲರನ್ನು ಕಾಡುವಂತಹ ಸಮಸ್ಯೆಯಾಗಿದೆ. ಇದರಿಂದಾಗಿ ಅನೇಕ ಜನರು ಆಗಾಗ್ಗೆ ತೊಂದರೆಗೊಳಗಾಗುತ್ತಾರೆ. ಹೊಟ್ಟೆ ನೋವಿಗೆ ಹಲವು ಕಾರಣಗಳಿರಬಹುದು. ಆದರೆ ಇದು ಸಾಮಾನ್ಯ ಸಮಸ್ಯೆಯೆಂದು ನಾವು ಅದನ್ನು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಕೆಲವೊಂದು ಬಾರಿ ಕಾಣಿಸಿಕೊಳ್ಳುವ ಹೊಟ್ಟೆನೋವು ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು. ಅದರಲ್ಲೂ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಂಡರೆ ಅದನ್ನು ಎಂದಿಗೂ ನಿರ್ಲಕ್ಷಿಸಬಾರದು. ಏಕೆಂದರೆ ಬಲಭಾಗದ ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ನೋವು ಅನೇಕ ಗಂಭೀರ ಅನಾರೋಗ್ಯದ ಸಮಸ್ಯೆಯಾಗಿರಬಹುದು. ಹಾಗಾಗಿ ಈ ರೀತಿಯ ಹೊಟ್ಟೆ ಕಾಣಿಸಿಕೊಂಡರೆ ಸೂಕ್ತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಳ್ಳುವುದು ಅವಶ್ಯಕ.
ಹೊಟ್ಟೆಯ ಬಲಭಾಗದಲ್ಲಿ ಕಾಣಿಸಿಕೊಳ್ಳುವ ನೋವು ಈ ಕೆಲವು ಕಾಯಿಲೆಗಳ ಲಕ್ಷಣವಾಗಿರಬಹುದು:
ಅಪೆಂಡಿಸೈಟಿಸ್ ಆಗಿರಬಹುದು:
ಹೊಟ್ಟೆಯ ಬಲಭಾಗದಲ್ಲಿ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡರೆ ಅದು ಅಪೆಂಡಿಸೈಟಿಸ್ನ ಲಕ್ಷಣವಾಗಿರಬಹುದು. ಈ ಸಮಸ್ಯೆಯಲ್ಲಿ ಮೊದಲು ಹೊಕ್ಕುಳಿನಿಂದ ನೋವು ಪ್ರಾರಂಭವಾಗುತ್ತದೆ. ಬಳಿಕ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡು, ಆ ನೋವು 6 ಗಂಟೆಗಳ ನಂತರ ಗಮನಾರ್ಹವಾಗಿ ಹೆಚ್ಚಬಹುದು. ಈ ಕಾಯಿಲೆಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ.
ಪಿತಕೋಶದ ಸಮಸ್ಯೆ:
ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು ಪಿತ್ತಕೋಶದ ಕಲ್ಲಿನ ಸಮಸ್ಯೆಯಿಂದಲೂ ಆಗಿರಬಹುದು. ಪಿತ್ತಕೋಶದ ಕಲ್ಲುಗಳ ಕಾರಣದಿಂದ ಉಂಟಾಗುವ ಹೊಟ್ಟೆನೋವು ಕೆಲವು ನಿಮಿಷಗಳಿಂದ ಕೆಲವು ಗಂಟೆಗಳವರೆಗೆ ಇರುತ್ತದೆ. ಕೆಲವೊಮ್ಮೆ ಈ ನೋವು ಹೊಟ್ಟೆಯ ಎಡಭಾಗದಲ್ಲಿ ಮತ್ತು ಬೆನ್ನಿನ ಭಾಗದಲ್ಲಿಯೂ ಕಂಡುಬರುತ್ತದೆ. ಹಸಿವಿನ ಕೊರತೆ, ಆಯಾಸ, ವಾಂತಿ, ಜ್ವರ ಇವೆಲ್ಲವೂ ಪಿತ್ತಕೋಶದ ಕಲ್ಲುಗಳ ಲಕ್ಷಣವಾಗಿರಬಹುದು. ಈ ಸಮಸ್ಯೆಯೂ ನಿಮ್ಮನ್ನು ಬಾಧಿಸಿದರೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯಕ.
ಯಕೃತ್ತಿನ ಸಮಸ್ಯೆಗಳು:
ಹೆಪಟೈಟಿಸ್ ಅಥವಾ ಯಕೃತ್ತಿನ ಬಾವುಗಳಂತಹ ಯಕೃತಿಗೆ ಸಂಬಂಧಿಸಿದ ಸಮಸ್ಯೆಗಳು ಹೊಟ್ಟೆಯ ಬಲಭಾಗದಲ್ಲಿ ತೀವ್ರವಾದ ನೋವನ್ನು ಉಂಟುಮಾಡಬಹುದು. ಇದರ ಜೊತೆಗೆ ಇದರ ರೋಗಲಕ್ಷಣಗಳು ಕಾಮಾಲೆ (ಚರ್ಮ ಮತ್ತು ಕಣ್ಣು ಹಳದಿಯಾಗುವುದು) ಆಯಾಸ, ಮೂತ್ರದ ಬಣ್ಣ ಬದಲಾಗುವುದು ಇತ್ಯಾದಿಗಳನ್ನು ಒಗೊಂಡಿರುತ್ತದೆ. ಯಕೃತ್ತಿಗೆ ಸಂಬಂಧಿಸಿದ ಕಾಯಿಲೆಗಳು ತೀವ್ರತೆಯಲ್ಲಿ ಬದಲಾಗುತ್ತವೆ. ಕೆಲವು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರಬಹುದು. ಆರೋಗ್ಯಕರ ಜೀವನಶೈಲಿಯನ್ನು ಪಾಲಿಸುವ ಮೂಲಕ ಮತ್ತು ಔಷಧಿಗಳಿಂದ ಇದನ್ನು ನಿಯಂತ್ರಿಸಬಹುದು.
ಕೆಲವೊಮ್ಮೆ ಆಮ್ಲೀಯತೆಯ ಕಾರಣದಿಂದಲೂ ಹೊಟ್ಟೆಯ ಬಲಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಾನದವರಿಗೂ ಈ ಸಮಸ್ಯೆ ಕಾಡಬಹುದು. ಸಾಮಾನ್ಯವಾಗಿ ಈ ರೀತಿಯ ನೋವು ತೀಕ್ಷ್ಣವಾಗಿರುತ್ತದೆ. ಮತ್ತು ಹೊಟ್ಟೆಯಲ್ಲಿ ಸೆಳೆತವನ್ನು ಕೂಡಾ ಉಂಟುಮಾಡುತ್ತದೆ. ಈ ನೋವು ಸಾಮಾನ್ಯವಾಗಿ ಊಟದ ಅಥವಾ ಆಹಾರ ಸೇವನೆ ನಂತರ ಕಂಡುಬರುತ್ತದೆ. ಗರ್ಭಾವಸ್ಥೆಯಲ್ಲಿಯೂ ಈ ನೋವು ಕಂಡುಬರುತ್ತದೆ. ಹಸಿವಿನ ಕೊರತೆ, ಹೊಟ್ಟೆಯೊಳಗೆ ಭಾರವಾದ ಭಾವನೆ, ಬೆಲ್ಚಿಂಗ್ ಅಥವಾ ವಾಯು, ಗ್ಯಾಸ್ ಇವೆಲ್ಲವೂ ಆಮ್ಲೀಯತೆಯ ಲಕ್ಷಣವಾಗಿರಬಹುದು.
ಮೂತ್ರಪಿಂಡದ ಕಲ್ಲು:
ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯ ಕಾರಣದಿಂದಲೂ ಹೊಟ್ಟೆಯ ಬಲಭಾಗದಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳಬಹುದು. ಇದು ತೀವ್ರವಾದ ನೋವಿನಿಂದ ಕೂಡಿದೆ, ಆದರೆ ಈ ಕಾಯಿಲೆ ಜೀವಕ್ಕೆ ಅಪಾಯಕಾರಿ ಅಲ್ಲ. ಸೂಕ್ತ ವೈದ್ಯಕೀಯ ಚಿಕಿತ್ಸೆ ಮತ್ತು ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಕರುಳಿನ ಸಮಸ್ಯೆಗಳು:
ವಿವಿಧ ರೀತಿಯ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ಹೊಟ್ಟೆಯ ಬಲಭಾಗದಲ್ಲಿ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: