Health Tips: ಮಾಸಿಕ ದಿನಗಳಲ್ಲಿ ಆರಾಮವಾಗಿರಲು ಆಹಾರದ ಪಟ್ಟಿ ಹೀಗಿರಲಿ

| Updated By: Pavitra Bhat Jigalemane

Updated on: Jan 12, 2022 | 6:25 PM

ಮಾಸಿಕದ ದಿನಗಳಲ್ಲಿ ದೇಹ ಸೂಕ್ಷ್ಮವಾಗಿರುತ್ತದೆ ಆದ್ದರಿಂದ ಪೌಷ್ಠಿಕ ಆಹಾರಗಳನ್ನು ಸೇವಿಸಿ. ಹೆಚ್ಚು ಕಬ್ಬಿಣಾಂಶ ಮತ್ತು ಮ್ಯಾಗ್ನೀಶಿಯಂ ಅಂಶಗಳಿರುವ ಆಹಾರವನ್ನು ಸೇವಿಸಿ.

Health Tips: ಮಾಸಿಕ ದಿನಗಳಲ್ಲಿ ಆರಾಮವಾಗಿರಲು ಆಹಾರದ ಪಟ್ಟಿ ಹೀಗಿರಲಿ
ಸಾಂದರ್ಭಿಕ ಚಿತ್ರ
Follow us on

ಆ ದಿನಗಳು ಆಕೆಗೆ ನಿಜವಾಗಿಯೂ ಸಿಕ್ಕ ವರ. ಆದರೆ ಆಕೆ ಅನುಭವಿಸುವ ನೋವು, ಹಿಂಸೆಯಿಂದ ಜರ್ಜರಿತಗೊಳ್ಳುತ್ತಾಳೆ. ಮಾಸಿಕ ದಿನಗಳಲ್ಲಿ ಅನುಭವಿಸುವ ಮಾನಸಿಕ ತೊಳಲಾಟಗಳನ್ನು ಮಹಿಳೆ ಚಕಾರವೆತ್ತದೆ ಸಹಿಸಿಕೊಳ್ಳುತ್ತಾಳೆ. ಋತುಮತಿಯಾದ ದಿನಗಳಲ್ಲಿ ತಲೆನೋವು, ಹೊಟ್ಟೆಯ ನೋವು, ಹೊಟ್ಟೆಯ ಸೆಳೆತ, ಸಿಟ್ಟು, ಮೂಡ್​ ಸ್ವಿಂಗ್ಸ್​​ ಹೀಗೆ ಕಿರಿಕಿರಿಗಳ ಪಟ್ಟಿ ಬೆಳೆಯುತ್ತಲೇ ಇರುತ್ತವೆ. ಇದಕ್ಕೆಲ್ಲಾ ಪರಿಹಾರವೆಂದರೆ ವಿಶ್ರಾಂತಿ ಪಡೆದುಕೊಳ್ಳುವುದು. ಮಾಸಿಕ ದಿನಗಳಲ್ಲಿ ಮಹಿಳೆಯರಿಗೆ ಸರಿಯಾದ ಫೊಷಣೆಯಿರುವ ಆಹಾರವೂ ಅಷ್ಟೇ ಮುಖ್ಯವಾಗಿರುತ್ತದೆ. ಕೇವಲ ಆ ದಿನಗಳಲ್ಲಿ ಮಾತ್ರವಲ್ಲ. ಮಹಿಳೆಯರ ದೇಹ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಮಾಸಿಕ ದಿನಗಳಿಗಿಂತ ಮೊದಲು. ಆ ದಿನಗಳಲ್ಲಿ ಹಾಗೂ ನಂತರದಲ್ಲಿ ಸೇವಿಸುವ ಆಹಾರಗಳು ಮಹತ್ವದ್ದಾಗಿರುತ್ತದೆ. 

ಮಾಸಿಕ ದಿನಗಳು ಹತ್ತಿರ ಬರುತ್ತಿದ್ದಂತೆ ತಲೆನೋವು, ಹೊಟ್ಟೆ ಉಬ್ಬರಿಸುವಿಕೆ, ಹೊಟ್ಟೆಯ ಸೆಳೆತ, ಕಾಲು ನೋವಿನಂತಹ ಸಮಸ್ಯೆಗಳು ಕಾಣಿಸಿಕೊಂಡರೆ, ಆ ದಿನಗಳಲ್ಲಿ ತೀವ್ರವಾದ ಕೆಳಹೊಟ್ಟೆ ನೋವು, ತಲೆನೋವು ಕಾನಿಸಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ದೇಹದಿಂದ ರಕ್ತ ಹೊರಹೋಗಿರುವ ಕಾರಣ ಸುಸ್ತು ಕಾಣಿಸಿಕೊಳ್ಳುತ್ತದೆ. ನೆನಪಿಡಿ ಈ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರಬಹುದು. ಆದ್ದರಿಂದ ಮೂರು ಹಂತಗಳಲ್ಲಿ ಆಹಾರವನ್ನು ಕಟ್ಟುನಿಟ್ಟಾಗಿ, ಸರಿಯಾದ ಪೋಷಕಾಂಶವಿರುವ ಆಹಾರಗಳನ್ನು ಸೇವಿಸುವುದು ಅವಶ್ಯಕವಾಗಿದೆ.

ಹಾಗಾದರೆ ಆ ದಿನಗಳಗಿಂತ ಮೊದಲು ಯಾವ ಆಹಾರ ಸೇವಿಸಬೇಕು?
ಆ ದಿನಗಳು ಹತ್ತಿರ ಬರುತ್ತಿದ್ದಂತೆ ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (FSH) ಮತ್ತು ಲ್ಯುಟೈನೈಜಿಂಗ್ ಹಾರ್ಮೋನ್ (LH) ಜತೆಗೆ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದ ಕೊರತೆಯಾಗುತ್ತದೆ. ಈ ಅವಧಿಯಲ್ಲಿ PMS (premenstrual syndrome) ಹೆಚ್ಚಾಗಿ ಸಂಭವಿಸಬಹುದು ಅಂದರೆ  ಕಿರಿಕಿರಿ, ಆಯಾಸ ಮತ್ತು ಮನಸ್ಥಿತಿಯ ಬದಲಾವಣೆ, ಹೊಟ್ಟೆಗೆ ಸಂಬಂದಿಸಿದ ಸಮಸ್ಯೆಗಳು ಎದುರಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಈ ಆಹಾರವನ್ನು ಸೇವಿಸಿ. ಡಾರ್ಕ್ ಚಾಕೊಲೇಟ್, ಹಸಿ ತರಕಾರಿಗಳು, ಅಗತ್ಯವಾದ ಕೊಬ್ಬಿನಾಮ್ಲಗಳು ಮತ್ತು ಫೈಬರ್-ಭರಿತ ಆಹಾರಗಳಾದ ಕೇಲ್, ಪಾಲಕ, ಕ್ವಿನೋವಾ, ಬೀಜಗಳು, ಬೀನ್ಸ್​ಗಳನ್ನು ಸೇವಿಸಿ. ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳಿ.
ಆದರೆ ನೆನಪಿಡಿ ಹೆಚ್ಚು ಉಪ್ಪು, ಮಸಾಲೆಯುಕ್ತ ಆಹಾರಗಳನ್ನು ಸೇವಿಸಬೇಡಿ.

ಆ ದಿನಗಳಲ್ಲಿ ಸೇವಿಸಬೇಕಾದ ಆಹಾರ
ಮಾಸಿಕದ ದಿನಗಳಲ್ಲಿ ದೇಹ ಸೂಕ್ಷ್ಮವಾಗಿರುತ್ತದೆ ಆದ್ದರಿಂದ ಪೌಷ್ಠಿಕ ಆಹಾರಗಳನ್ನು ಸೇವಿಸಿ. ಹೆಚ್ಚು ಕಬ್ಬಿಣಾಂಶ ಮತ್ತು ಮ್ಯಾಗ್ನೀಶಿಯಂ ಅಂಶಗಳಿರುವ ಆಹಾರವನ್ನು ಸೇವಿಸಿ. ಡಾರ್ಕ್​ ಚಾಕಲೇಟ್, ಮೊಸರು, ಮೀನಿನ ಆಹಾರಗಳನ್ನು ಹೆಚ್ಚು ಸೇವಿಸಿ. ಹೆಚ್ಚು ನೀರು ಕುಡಿಯಿರಿ ಇದು ನಿಮ್ಮ ದೇಹವನ್ನು ಡೀಹೈಡ್ರೇಟ್​ ಆಗದಂತೆ ಮಾಡುತ್ತದೆ.

ನಂತರದ ದಿನಗಳಲ್ಲಿ ಈ ಆಹಾರ ಸೇವಿಸಿ
ಮಾಸಿಕ ದಿನಗಳ ನಂತರ ಈಸ್ಟ್ರೋಜನ್​ ಉತ್ಪತ್ತಿಯಾಗಲು  ಆರಂಭವಾಗುತ್ತದೆ. 14 ನೇ ದಿನಕ್ಕೆ ಮತ್ತೆ ಓವಿಲೇಶನ್​ ಆರಂಭವಾಗುತ್ತದೆ. ಆದ್ದರಿಂದ ಓವಿಲೇಶನ್​ ದಿನಗಳಲ್ಲಿ ಫೋಷಣೆ ಅವಶ್ಯಕವಾಗಿರುತ್ತದೆ. ಹೀಗಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಒಳ್ಳೆಯದು. ಹೀಗಾಗಿ ವಿಟಮಿನ್​ ಬಿ, ಕಬ್ಬಿಣಾಂಶಗಳಿರುವ ಆಹಾರವನ್ನು ಸೇವಿಸಿ. ಓಟ್ಸ್​, ಹಣ್ಣುಗಳು,  ಡೈರಿ ಉತ್ಪನ್ನಗಳಾದ ಹಾಲು. ಮೊಸರಿನಂತಹ ಆಹಾರ ಸೇವಿಸಿ. ಜತೆಗೆ ಪೈಬರ್​ ಅಂಶ ಸಮೃದ್ಧವಾಗಿರುವ ಧಾನ್ಯಗಳು, ಹಸಿರು ತರಕಾರಿಗಳನ್ನು ಸೇವಿಸಿ. ಇವುಗಳನ್ನು ನಿಮ್ಮ ಋತುಚಕ್ರದ ನೋವಿನಿಂದ ಮುಕ್ತಗೊಳಿಸುತ್ತವೆ.

ಇದನ್ನೂ ಓದಿ:

Kidney Cancer: ಕಿಡ್ನಿ ಕ್ಯಾನ್ಸರ್​ನ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ಹೋಗಿ