AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kidney Cancer: ಕಿಡ್ನಿ ಕ್ಯಾನ್ಸರ್​ನ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ಹೋಗಿ

Health Tips: ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಕಿಡ್ನಿ ಕ್ಯಾನ್ಸರ್, ಶ್ವಾಸಕೋಶದಂತಹ ಸುತ್ತಮುತ್ತಲಿನ ಅಂಗಗಳಿಗೆ ಹರಡುವ ಮೊದಲು ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳತ್ತ ಗಮನಹರಿಸುವುದು ಅಗತ್ಯ. ಕಿಡ್ನಿ ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳು ಹೀಗಿವೆ.

Kidney Cancer: ಕಿಡ್ನಿ ಕ್ಯಾನ್ಸರ್​ನ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ಹೋಗಿ
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on: Jan 12, 2022 | 2:21 PM

Share

ಕಿಡ್ನಿ ಸೋಂಕು, ಕಿಡ್ನಿ ಸ್ಟೋನ್, ಕಿಡ್ನಿ ಕ್ಯಾನ್ಸರ್ ಇವೆಲ್ಲ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾದ ರೋಗಗಳಾಗಿವೆ. ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ತೇವಾಂಶದ ಸಮತೋಲನವನ್ನು ಕಾಪಾಡಿಕೊಂಡು ಮೂತ್ರದ ಮೂಲಕ ದೇಹದಿಂದ ವಿಷವನ್ನು ಹೊರಹಾಕುವ ಪ್ರಮುಖ ಅಂಗವಾಗಿದೆ. ಟ್ಯೂಬುಲ್ಸ್ ಎಂದು ಕರೆಯಲ್ಪಡುವ ಈ ಅಂಗದಲ್ಲಿನ ಸಣ್ಣ ಟ್ಯೂಬ್​ಗಳು ರಕ್ತವನ್ನು ಫಿಲ್ಟರ್ ಮಾಡುತ್ತವೆ, ತ್ಯಾಜ್ಯವನ್ನು ಹೊರಹಾಕುತ್ತವೆ. ಅಸಹಜ ಜೀವಕೋಶಗಳು ಅಂಗದಲ್ಲಿ ಅನಿಯಂತ್ರಿತವಾಗಿ ಬೆಳೆಯಲು ಪ್ರಾರಂಭಿಸಿದಾಗ ಇದು ಗೆಡ್ಡೆಯ ರಚನೆಗೆ ಕಾರಣವಾಗುತ್ತದೆ. ಅದನ್ನೇ ಕಿಡ್ನಿ ಕ್ಯಾನ್ಸರ್ ಎನ್ನಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಕಿಡ್ನಿ ಕ್ಯಾನ್ಸರ್, ಶ್ವಾಸಕೋಶದಂತಹ ಸುತ್ತಮುತ್ತಲಿನ ಅಂಗಗಳಿಗೆ ಹರಡುವ ಮೊದಲು ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳತ್ತ ಗಮನಹರಿಸುವುದು ಅಗತ್ಯ. ಕಿಡ್ನಿ ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳು ಹೀಗಿವೆ.

ಬೆನ್ನಿನ ಕೆಳ ಭಾಗದಲ್ಲಿ ನೋವು: ಕೆಲವು ಸಂದರ್ಭಗಳಲ್ಲಿ ಕಿಡ್ನಿ ಕ್ಯಾನ್ಸರ್ ಬೆನ್ನು ನೋವನ್ನು ಪ್ರಚೋದಿಸಬಹುದು. ಈ ರೋಗಲಕ್ಷಣವು ಹಲವಾರು ಇತರ ಪರಿಸ್ಥಿತಿಗಳಿಗೆ ಸಂಬಂಧಿಸಿದ್ದರೂ, ಕಿಡ್ನಿ ಕ್ಯಾನ್ಸರ್‌ಗೆ ಸಂಬಂಧಿಸಿದ ಕೆಳ ಬೆನ್ನು ನೋವು ಹಿಂಭಾಗದಲ್ಲಿ ಅಥವಾ ಎರಡೂ ಬದಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ಅನೇಕ ದಿನಗಳವರೆಗೆ ಇದ್ದರೆ ವೈದ್ಯರನ್ನು ಸಂಪರ್ಕಿಸಲು ಮರೆಯಬೇಡಿ.

ತೂಕ ಕಡಿಮೆಯಾಗುವುದು: ಇದ್ದಕ್ಕಿದ್ದಂತೆ ತೂಕ ಕಡಿಮೆಯಾಗುತ್ತದೆ ಎಂಬುದು ಅನೇಕರಿಗೆ ಒಳ್ಳೆಯ ವಿಷಯವಾಗಿರುತ್ತದೆ. ಎಷ್ಟೋ ಜನರು ತೂಕ ಇಳಿಸಿಕೊಳ್ಳಲು ಹರಸಾಹಸ ಮಾಡುತ್ತಾರೆ. ಆದರೆ, ನೀವು ಯಾವ ಪ್ರಯತ್ನವನ್ನೂ ಮಾಡದೆ ತೂಕ ಕಡಿಮೆಯಾಗುತ್ತಿದ್ದರೆ ಅದರ ಬಗ್ಗೆ ನೀವು ಯೋಚನೆ ಮಾಡಲೇಬೇಕು. ಇದು ಮೂತ್ರಪಿಂಡದ ಕ್ಯಾನ್ಸರ್ ಬಗ್ಗೆ ಸೂಚನೆ ಕೂಡ ಆಗಿರಬಹುದು. ಕಿಡ್ನಿ ಕ್ಯಾನ್ಸರ್ ಗೆಡ್ಡೆಯ ಗಾತ್ರದಿಂದಾಗಿ ಇದು ಸಂಭವಿಸುತ್ತದೆ. ಕಾಲಾನಂತರದಲ್ಲಿ ಅದು ಬೆಳೆದಾಗ ಜೀರ್ಣಕಾರಿ ಪ್ರಕ್ರಿಯೆಯ ಮೇಲೂ ಪರಿಣಾಮ ಬೀರುತ್ತದೆ ಇದರ ಪರಿಣಾಮವಾಗಿ ಹಸಿವು ಕಡಿಮೆಯಾಗುತ್ತದೆ ಮತ್ತು ತೂಕ ಕಡಿಮೆಯಾಗುತ್ತದೆ.

ಮೂತ್ರದಲ್ಲಿ ರಕ್ತ: ಹೆಮಟೂರಿಯಾ ಅಥವಾ ಮೂತ್ರದಲ್ಲಿ ರಕ್ತವು ಮೂತ್ರಪಿಂಡದ ಕ್ಯಾನ್ಸರ್​ನ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಸುಲಭವಾಗಿ ಗುರುತಿಸಲು ಇದು ತುಂಬಾ ಪ್ರಮುಖವಾದ ಚಿಹ್ನೆಯಂತೆ ತೋರುತ್ತದೆ. ಕೆಲವೊಮ್ಮೆ ಮೂತ್ರವು ಗುಲಾಬಿ, ಕಂದು, ಗಾಢ ಕೆಂಪು ಬಣ್ಣವನ್ನು ಹೊಂದಿರಬಹುದು. ಆದರೆ ಮೂತ್ರಪಿಂಡದ ಕ್ಯಾನ್ಸರ್​ಗೆ ಮೂತ್ರದಲ್ಲಿ ರಕ್ತ ಬರುವುದೊಂದೇ ಕಾರಣವಲ್ಲ.

ಆಯಾಸ: ಮೂತ್ರಪಿಂಡದ ಕ್ಯಾನ್ಸರ್ ಇದ್ದರೆ ವಿಪರೀತ ಆಯಾಸವಾಗುತ್ತದೆ. ಹಲವಾರು ಆರೋಗ್ಯ ಸಮಸ್ಯೆಗಳಿಂದಾಗಿ ಆಯಾಸವನ್ನು ಅನುಭವಿಸಿದರೂ, ನಿರಂತರ ಮತ್ತು ತೀವ್ರವಾದ ಬಳಲಿಕೆಯು ದೈನಂದಿನ ಚಟುವಟಿಕೆಗಳೊಂದಿಗೆ ಗೊಂದಲಕ್ಕೊಳಗಾದಾಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ.

ರಕ್ತಹೀನತೆ: ರಕ್ತಹೀನತೆ ಎಂದರೆ ಕೆಂಪು ರಕ್ತ ಕಣಗಳ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗುವುದು. ರಕ್ತಹೀನತೆ ಮೂತ್ರಪಿಂಡದ ಕ್ಯಾನ್ಸರ್​ನ ಸಾಮಾನ್ಯ ಆರಂಭಿಕ ಚಿಹ್ನೆಯಾಗಿದೆ. ಈ ಲಕ್ಷಣ ಕಾಣಿಸಿಕೊಂಡಾಗ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಿ.

ಇದನ್ನೂ ಓದಿ: Health Tips: ಚಳಿಗಾಲದಲ್ಲಿ ನೋವು ನೀಡುವ ಸ್ನಾಯುಗಳಿಂದ ರಕ್ಷಣೆ ಹೇಗೆ? ಇಲ್ಲಿದೆ ಸಿಂಪಲ್​ ಸೂತ್ರ

Health Tips: ದೇಹದ ಅತಿಯಾದ ತೂಕ ಇಳಿಸಲು ಈ ಆಹಾರವನ್ನು ಸೇವಿಸಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?