Health Tips: ಮಾಸಿಕ ದಿನಗಳಲ್ಲಿ ಆರಾಮವಾಗಿರಲು ಆಹಾರದ ಪಟ್ಟಿ ಹೀಗಿರಲಿ
ಮಾಸಿಕದ ದಿನಗಳಲ್ಲಿ ದೇಹ ಸೂಕ್ಷ್ಮವಾಗಿರುತ್ತದೆ ಆದ್ದರಿಂದ ಪೌಷ್ಠಿಕ ಆಹಾರಗಳನ್ನು ಸೇವಿಸಿ. ಹೆಚ್ಚು ಕಬ್ಬಿಣಾಂಶ ಮತ್ತು ಮ್ಯಾಗ್ನೀಶಿಯಂ ಅಂಶಗಳಿರುವ ಆಹಾರವನ್ನು ಸೇವಿಸಿ.
ಆ ದಿನಗಳು ಆಕೆಗೆ ನಿಜವಾಗಿಯೂ ಸಿಕ್ಕ ವರ. ಆದರೆ ಆಕೆ ಅನುಭವಿಸುವ ನೋವು, ಹಿಂಸೆಯಿಂದ ಜರ್ಜರಿತಗೊಳ್ಳುತ್ತಾಳೆ. ಮಾಸಿಕ ದಿನಗಳಲ್ಲಿ ಅನುಭವಿಸುವ ಮಾನಸಿಕ ತೊಳಲಾಟಗಳನ್ನು ಮಹಿಳೆ ಚಕಾರವೆತ್ತದೆ ಸಹಿಸಿಕೊಳ್ಳುತ್ತಾಳೆ. ಋತುಮತಿಯಾದ ದಿನಗಳಲ್ಲಿ ತಲೆನೋವು, ಹೊಟ್ಟೆಯ ನೋವು, ಹೊಟ್ಟೆಯ ಸೆಳೆತ, ಸಿಟ್ಟು, ಮೂಡ್ ಸ್ವಿಂಗ್ಸ್ ಹೀಗೆ ಕಿರಿಕಿರಿಗಳ ಪಟ್ಟಿ ಬೆಳೆಯುತ್ತಲೇ ಇರುತ್ತವೆ. ಇದಕ್ಕೆಲ್ಲಾ ಪರಿಹಾರವೆಂದರೆ ವಿಶ್ರಾಂತಿ ಪಡೆದುಕೊಳ್ಳುವುದು. ಮಾಸಿಕ ದಿನಗಳಲ್ಲಿ ಮಹಿಳೆಯರಿಗೆ ಸರಿಯಾದ ಫೊಷಣೆಯಿರುವ ಆಹಾರವೂ ಅಷ್ಟೇ ಮುಖ್ಯವಾಗಿರುತ್ತದೆ. ಕೇವಲ ಆ ದಿನಗಳಲ್ಲಿ ಮಾತ್ರವಲ್ಲ. ಮಹಿಳೆಯರ ದೇಹ ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಮಾಸಿಕ ದಿನಗಳಿಗಿಂತ ಮೊದಲು. ಆ ದಿನಗಳಲ್ಲಿ ಹಾಗೂ ನಂತರದಲ್ಲಿ ಸೇವಿಸುವ ಆಹಾರಗಳು ಮಹತ್ವದ್ದಾಗಿರುತ್ತದೆ.
ಮಾಸಿಕ ದಿನಗಳು ಹತ್ತಿರ ಬರುತ್ತಿದ್ದಂತೆ ತಲೆನೋವು, ಹೊಟ್ಟೆ ಉಬ್ಬರಿಸುವಿಕೆ, ಹೊಟ್ಟೆಯ ಸೆಳೆತ, ಕಾಲು ನೋವಿನಂತಹ ಸಮಸ್ಯೆಗಳು ಕಾಣಿಸಿಕೊಂಡರೆ, ಆ ದಿನಗಳಲ್ಲಿ ತೀವ್ರವಾದ ಕೆಳಹೊಟ್ಟೆ ನೋವು, ತಲೆನೋವು ಕಾನಿಸಿಕೊಳ್ಳುತ್ತದೆ. ನಂತರದ ದಿನಗಳಲ್ಲಿ ದೇಹದಿಂದ ರಕ್ತ ಹೊರಹೋಗಿರುವ ಕಾರಣ ಸುಸ್ತು ಕಾಣಿಸಿಕೊಳ್ಳುತ್ತದೆ. ನೆನಪಿಡಿ ಈ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರಬಹುದು. ಆದ್ದರಿಂದ ಮೂರು ಹಂತಗಳಲ್ಲಿ ಆಹಾರವನ್ನು ಕಟ್ಟುನಿಟ್ಟಾಗಿ, ಸರಿಯಾದ ಪೋಷಕಾಂಶವಿರುವ ಆಹಾರಗಳನ್ನು ಸೇವಿಸುವುದು ಅವಶ್ಯಕವಾಗಿದೆ.
ಹಾಗಾದರೆ ಆ ದಿನಗಳಗಿಂತ ಮೊದಲು ಯಾವ ಆಹಾರ ಸೇವಿಸಬೇಕು? ಆ ದಿನಗಳು ಹತ್ತಿರ ಬರುತ್ತಿದ್ದಂತೆ ಫಾಲಿಕಲ್ ಸ್ಟಿಮ್ಯುಲೇಟಿಂಗ್ ಹಾರ್ಮೋನ್ (FSH) ಮತ್ತು ಲ್ಯುಟೈನೈಜಿಂಗ್ ಹಾರ್ಮೋನ್ (LH) ಜತೆಗೆ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಮಟ್ಟದ ಕೊರತೆಯಾಗುತ್ತದೆ. ಈ ಅವಧಿಯಲ್ಲಿ PMS (premenstrual syndrome) ಹೆಚ್ಚಾಗಿ ಸಂಭವಿಸಬಹುದು ಅಂದರೆ ಕಿರಿಕಿರಿ, ಆಯಾಸ ಮತ್ತು ಮನಸ್ಥಿತಿಯ ಬದಲಾವಣೆ, ಹೊಟ್ಟೆಗೆ ಸಂಬಂದಿಸಿದ ಸಮಸ್ಯೆಗಳು ಎದುರಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಈ ಆಹಾರವನ್ನು ಸೇವಿಸಿ. ಡಾರ್ಕ್ ಚಾಕೊಲೇಟ್, ಹಸಿ ತರಕಾರಿಗಳು, ಅಗತ್ಯವಾದ ಕೊಬ್ಬಿನಾಮ್ಲಗಳು ಮತ್ತು ಫೈಬರ್-ಭರಿತ ಆಹಾರಗಳಾದ ಕೇಲ್, ಪಾಲಕ, ಕ್ವಿನೋವಾ, ಬೀಜಗಳು, ಬೀನ್ಸ್ಗಳನ್ನು ಸೇವಿಸಿ. ನಿಮ್ಮನ್ನು ಹೈಡ್ರೀಕರಿಸಿಟ್ಟುಕೊಳ್ಳಿ. ಆದರೆ ನೆನಪಿಡಿ ಹೆಚ್ಚು ಉಪ್ಪು, ಮಸಾಲೆಯುಕ್ತ ಆಹಾರಗಳನ್ನು ಸೇವಿಸಬೇಡಿ.
ಆ ದಿನಗಳಲ್ಲಿ ಸೇವಿಸಬೇಕಾದ ಆಹಾರ ಮಾಸಿಕದ ದಿನಗಳಲ್ಲಿ ದೇಹ ಸೂಕ್ಷ್ಮವಾಗಿರುತ್ತದೆ ಆದ್ದರಿಂದ ಪೌಷ್ಠಿಕ ಆಹಾರಗಳನ್ನು ಸೇವಿಸಿ. ಹೆಚ್ಚು ಕಬ್ಬಿಣಾಂಶ ಮತ್ತು ಮ್ಯಾಗ್ನೀಶಿಯಂ ಅಂಶಗಳಿರುವ ಆಹಾರವನ್ನು ಸೇವಿಸಿ. ಡಾರ್ಕ್ ಚಾಕಲೇಟ್, ಮೊಸರು, ಮೀನಿನ ಆಹಾರಗಳನ್ನು ಹೆಚ್ಚು ಸೇವಿಸಿ. ಹೆಚ್ಚು ನೀರು ಕುಡಿಯಿರಿ ಇದು ನಿಮ್ಮ ದೇಹವನ್ನು ಡೀಹೈಡ್ರೇಟ್ ಆಗದಂತೆ ಮಾಡುತ್ತದೆ.
ನಂತರದ ದಿನಗಳಲ್ಲಿ ಈ ಆಹಾರ ಸೇವಿಸಿ ಮಾಸಿಕ ದಿನಗಳ ನಂತರ ಈಸ್ಟ್ರೋಜನ್ ಉತ್ಪತ್ತಿಯಾಗಲು ಆರಂಭವಾಗುತ್ತದೆ. 14 ನೇ ದಿನಕ್ಕೆ ಮತ್ತೆ ಓವಿಲೇಶನ್ ಆರಂಭವಾಗುತ್ತದೆ. ಆದ್ದರಿಂದ ಓವಿಲೇಶನ್ ದಿನಗಳಲ್ಲಿ ಫೋಷಣೆ ಅವಶ್ಯಕವಾಗಿರುತ್ತದೆ. ಹೀಗಾಗಿ ಪೋಷಕಾಂಶಯುಕ್ತ ಆಹಾರ ಸೇವನೆ ಒಳ್ಳೆಯದು. ಹೀಗಾಗಿ ವಿಟಮಿನ್ ಬಿ, ಕಬ್ಬಿಣಾಂಶಗಳಿರುವ ಆಹಾರವನ್ನು ಸೇವಿಸಿ. ಓಟ್ಸ್, ಹಣ್ಣುಗಳು, ಡೈರಿ ಉತ್ಪನ್ನಗಳಾದ ಹಾಲು. ಮೊಸರಿನಂತಹ ಆಹಾರ ಸೇವಿಸಿ. ಜತೆಗೆ ಪೈಬರ್ ಅಂಶ ಸಮೃದ್ಧವಾಗಿರುವ ಧಾನ್ಯಗಳು, ಹಸಿರು ತರಕಾರಿಗಳನ್ನು ಸೇವಿಸಿ. ಇವುಗಳನ್ನು ನಿಮ್ಮ ಋತುಚಕ್ರದ ನೋವಿನಿಂದ ಮುಕ್ತಗೊಳಿಸುತ್ತವೆ.
ಇದನ್ನೂ ಓದಿ:
Kidney Cancer: ಕಿಡ್ನಿ ಕ್ಯಾನ್ಸರ್ನ ಈ ಲಕ್ಷಣಗಳು ಕಾಣಿಸಿಕೊಂಡರೆ ಕೂಡಲೇ ವೈದ್ಯರ ಬಳಿ ಹೋಗಿ