AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಲ್ಲಿಗಿಂತ ಭಾರತದ ಜೀವನ ಗುಣಮಟ್ಟ ಉತ್ತಮವಾಗಿದೆ; ಕೆನಡಾ ಬಿಟ್ಟು ತಾಯ್ನಾಡಿಗೆ ವಾಪಸಾಗಲು ನಿರ್ಧರಿಸಿದ ಅನಿವಾಸಿ ಭಾರತೀಯ

ಉತ್ತಮ ಗುಣಮಟ್ಟದ ಜೀವನ, ಉತ್ತಮ ಸಂಬಳ ಸಿಗುವ ಕೆಲಸವೇ ಬೇಕೆಂದು ಕೆಲವರು ತಮ್ಮ ತಾಯ್ನಾಡು ಬಿಟ್ಟು ಹೆಂಡ್ತಿ ಮಕ್ಕಳೊಂದಿಗೆ ಅಮೆರಿಕ, ಕೆನಾಡ, ಜಪಾನ್‌ ಇತ್ಯಾದಿ ಅಭಿವೃದ್ಧಿಶೀಲ ದೇಶಗಳಿಗೆ ಹೋಗ್ತಾರೆ. ಆದ್ರೆ ಕೆನಡಾದಲ್ಲಿನ ಅನಿವಾಸಿ ಭಾರತೀಯರೊಬ್ಬರು ಇಲ್ಲಗಿಂತ ಭಾರತದಲ್ಲಿನ ಜೀವನ ಮಟ್ಟವೇ ಉತ್ತಮವಾಗಿದೆ ಎನ್ನುತ್ತಾ ಭಾರತಕ್ಕೆ ವಾಪಸಾಗಲು ನಿರ್ಧರಿಸಿದ್ದಾರೆ. ಜೊತೆಗೆ ಈ ಎರಡೂ ದೇಶಗಳಲ್ಲಿ ಏನೆಲ್ಲಾ ಪ್ರಯೋಜನಗಳಿಗೆ ಎಂಬುದನ್ನು ಕೂಡಾ ಪಟ್ಟಿ ಮಾಡಿದ್ದಾರೆ.

ಇಲ್ಲಿಗಿಂತ ಭಾರತದ ಜೀವನ ಗುಣಮಟ್ಟ ಉತ್ತಮವಾಗಿದೆ; ಕೆನಡಾ ಬಿಟ್ಟು ತಾಯ್ನಾಡಿಗೆ ವಾಪಸಾಗಲು ನಿರ್ಧರಿಸಿದ ಅನಿವಾಸಿ ಭಾರತೀಯ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 03, 2025 | 4:21 PM

ಬಹುತೇಹ ಹೆಚ್ಚಿನ ಭಾರತೀಯರು (Indians) ಆರೋಗ್ಯಕರ, ಸಂತೋಷದಾಯಕ ಜೀವನವನ್ನು ಸಾಗಿಸಲು, ಉತ್ತಮ ಸಂಬಳ ಪಡೆಯುವ ಕೆಲಸಕ್ಕಾಗಿ, ಉನ್ನತ ಗುಣಮಟ್ಟದ ಜೀವನವನ್ನು ಸಾಗಿಸುವ ಸಲುವಾಗಿ ಅಮೆರಿಕ (America), ಕೆನಡಾ (Canada), ಜಪಾನ್‌ (Japan) ಅಂತೆಲ್ಲಾ ವಿದೇಶಗಳಲ್ಲಿ (Foreign) ನೆಲೆಸಲು ಬಯಸುತ್ತಾರೆ. ಕೆಲವರು ಈಗಾಗ್ಲೇ ವಿದೇಶಗಳಿಗೆ ಹೋಗಿ ಸೆಟಲ್‌ ಆದ್ರೆ ಇನ್ನೂ ಕೆಲವರು ವಿದೇಶಕ್ಕೆ ಹೋಗುವ ಸಲುವಾಗಿ ಹೆಣಗಾಡುತ್ತಿದ್ದಾರೆ. ಅಂತದ್ರಲ್ಲಿ ಇಲ್ಲೊಬ್ರು ಅನಿವಾಸಿ ಭಾರತೀಯ (NRI) ಕೆನಡಾ (Cenada) ಬಿಟ್ಟು ಭಾರತಕ್ಕೆ (India) ವಾಪಸಾಗಲು ನಿರ್ಧರಿಸಿದ್ದಾರೆ. ಹೌದು ಕೆನಡಾಕ್ಕಿಂತ ಭಾರತದ ಜೀವನ ಗುಣಮಟ್ಟವೇ (Lifestyle) ಉತ್ತಮವಾಗಿದೆ ಎಂದು ಅವರು ಹೇಳಿದ್ದು, ಭಾರತದ ಜೀವನ ಗುಣಮಟ್ಟ ಏಕೆ ಬೆಸ್ಟ್‌ ಅನ್ನೋ ಕಾರಣ ಕೂಡಾ ಕೊಟ್ಟಿದ್ದಾರೆ.

ಸುಮಾರು ಒಂದು ವರ್ಷಗಳ ಹಿಂದೆ 33 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಉತ್ತಮ ಅವಕಾಶ ಮತ್ತು ಆರಾಮದಾಯಕ ಜೀವನದ ಭರವಸೆಯಿಂದ ಆಕರ್ಷಿತರಾಗಿ ಹೆಂಡತಿ ಮಗುವಿನೊಂದಿಗೆ ಕೆನಡಾಕ್ಕೆ ಹೋಗಿ ನೆಲೆಸಿದ್ದು, ಇದೀಗ ಅವರು ಭಾರತದ ಜೀವನಶೈಲಿಯೇ ಬೆಸ್ಟ್‌ ಎನ್ನುತ್ತಿದ್ದಾರೆ. ಭಾರತದಲ್ಲಿ ನಾನು ನನ್ನ ಹೆಂಡ್ತಿ ಇಬ್ಬರೂ ಕೆಲಸ ಮಾಡುತ್ತಿದ್ದೆವು ಆಗ ನಾವು 30 ಲಕ್ಷದವರೆಗೆ ಉಳಿತಾಯ ಮಾಡುತ್ತಿದ್ದೆವು. ಆದ್ರೆ ಕೆನಡಾದಲ್ಲಿ ನೆಲೆಸಿರುವುದರಿಂದ ನನಗೆ ದೊಡ್ಡ ಪ್ರಯೋಜನವಾಗಿದೆ ಎಂದು ನನಗೆ ಅನ್ನಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಇಲ್ಲಿದೆ ನೋಡಿ ಪೋಸ್ಟ್​​:

ಇದನ್ನೂ ಓದಿ
Image
ಹೊಸ ವರ್ಷ ಆಚರಿಸಿ ಫೂಲ್ ಆದ ದೇಶ ಯಾವುದು?
Image
ದೇಹ ಆಕಾರವೇ ನಿಮ್ಮ ವ್ಯಕ್ತಿತ್ವ ಬಹಿರಂಗ ಪಡಿಸುತ್ತೆ
Image
ಬೇಸಿಗೆಯ ದಾಹ ನೀಗಿಸಲು ಎಳನೀರು ಕುಲುಕ್ಕಿ ಶರ್ಬತ್‌ ಒಮ್ಮೆ ಟ್ರೈ ಮಾಡಿ…
Image
ಭಾರತದ ಹೊರತುಪಡಿಸಿ ವಿದೇಶದಲ್ಲಿರುವ ಪ್ರಮುಖ ಶಿವ ದೇವಾಲಯಗಳಿವು

I don’t see big benefits staying in Canada, so returning back to India. Help me to understand. byu/village_love inreturnToIndia

ಕೆನಡಾದಲ್ಲಿರುವ ಉಚಿತ ಆರೋಗ್ಯ, ವಿಮೆ ಸೌಲಭ್ಯ ಭಾರತದಲ್ಲಿಯೂ ಇದೆ. ಉಚಿತ ಶಿಕ್ಷಣ ಭಾರತಕ್ಕಿಂತ ಕೆನಾಡದಲ್ಲಿ ಉತ್ತಮವಾಗಿಗೆ . ಹೀಗೆ ಆರೋಗ್ಯ, ರಕ್ಷಣೆ, ಶಿಕ್ಷಣ, ಉನ್ನತ ಗುಣಮಟ್ಟದ ಜೀವನ ಭರವಸೆಗಳನ್ನು ಕೆನಡಾ ನೀಡಿದ್ದರೂ, ಇದು ಭಾರತದಲ್ಲಿರುವ ಜೀವನ ಗುಣಮಟ್ಟದಷ್ಟು ಪ್ರಯೋಜನಕಾರಿಯಾಗಿದೆ ಎಂದು ನನಗೆ ಅನ್ನಿಸುವುದಿಲ್ಲ. ಹೆಚ್ಚಿನವರು ಕೆನಡಾದಲ್ಲಿ ನೆಲೆಸಲು ಬಯಸುತ್ತಾರೆ, ಆದ್ರೆ ಇಲ್ಲಿ ನೆಲೆಸಲು ನನಗೆ ಬಲವಾದ ಕಾರಣ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.

ಭಾರತ ಮತ್ತು ಕೆನಡಾದ ನಡುವಿನ ಜೀವನಶೈಲಿ:

ಕೆನಡಾದಲ್ಲಿ ಎಂತಹದ್ದೇ ಸೌಲಭ್ಯಗಳಿದ್ದರೂ ಇಲ್ಲಿಗಿಂತ ಭಾರತದ ಜೀವನ ಗುಣಮಟ್ಟವೇ ಉತ್ತಮವಾಗಿದೆ ಎಂದು ಹೇಳುವ ಅವರು, ಭಾರತದಲ್ಲಿ ವರ್ಷವಿಡೀ ಹವಾಮಾನವು ಉತ್ತಮವಾಗಿದೆ. ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವನಾಗಿರುವುದರಿಂದ ನನ್ನನ್ನು ಇಲ್ಲಿನ ಸಂಸ್ಕೃತಿಗೆ ಹತ್ತಿರವಾಗಿಟ್ಟುಕೊಳ್ಳಬಹುದು. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಬಹುದು., ಕುಟುಂಬದವರ ಜೊತೆ ಬೆರೆಯಬಹುದು, ಸಮಯ ಕಳೆಯಬಹುದು. ಅದ್ಭುತವಾದ ರುಚಿಕರ ಆಹಾರವನ್ನು ಸವಿಯುವುದರ ಜೊತೆಗೆ ಜೀರ್ಣಕ್ರಿಯೆ, ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಬಹುದು. ಅಷ್ಟೆ ಏಕೆ ಭಾರತದಲ್ಲಿ ನಾನು ನನ್ನ ಸ್ವಂತ ವ್ಯವಹಾರವನ್ನು ಸ್ಥಾಪಿಸಬಹುದು. ಜೊತೆಗೆ ಮಕ್ಕಳನ್ನು ಇತರೆ ಮಕ್ಕಳೊಂದಿಗೆ ಹಾಗೂ ಅಜ್ಜ ಅಜ್ಜಿಯೊಂದಿಗೆ ಆಡಲು ಬಿಡುವ ಮೂಲಕ ಅವರಲ್ಲಿ ಮೊಬೈಲ್‌ ಗೀಳು ಬೆಳೆಯದಂತೆ ನೋಡಿಕೊಳ್ಳಬಹುದು, ಸಂಸ್ಕಾರ ಕಲಿಸಬಹುದು. ಆದರೆ ವಿದೇಶಗಳಲ್ಲಿ ಜೀವನವು ಹೆಚ್ಚಾಗಿ ಒಂಟಿತನದಿಂದ ತುಂಬಿರುತ್ತದೆ ಮತ್ತು ಸಾಮಾಜಿಕ ಒತ್ತಡವೂ ಹೆಚ್ಚಾಗಿರುತ್ತದೆ. ಈ ಎಲ್ಲಾ ಕಾರಣದಿಂದಾಗಿ ಭಾರತದ ಜೀವನ ಗುಣಮಟ್ಟವೇ ಬೆಸ್ಟ್‌ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಪುರುಷರಿಗೆ ಈ ಬೇಸಿಗೆಯಲ್ಲಿ ಯಾವ ಅಂಡರ್‌ವೇರ್‌ ಉತ್ತಮ? ಒಳ ಉಡುಪಿನ ವಿಚಾರದಲ್ಲಿ ಈ ತಪ್ಪುಗಳನ್ನು ಮಾಡದಿರಿ

ಈ ಕುರಿತ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಜೀವನಶೈಲಿ ಹೆಚ್ಚು ಆರಾಮದಾಯಕ ಮತ್ತು ತೃಪ್ತಿದಾಯಕವಾಗಿದೆ ಎಂದು ಹೆಚ್ಚಿನ ಜನ ಹೇಳಿದ್ದಾರೆ. ಇನ್ನೂ ಕೆಲವರು ವಿದೇಶದಲ್ಲಿ ವಾಸಿಸುವುದರಿಂದ ಅನುಕೂಲಗಳಿವೆ ನಿಜ ಆದರೆ ನಿಜವಾದ ಯಶಸ್ಸು ಎಂದರೆ ಒಬ್ಬ ವ್ಯಕ್ತಿಯು ಸಂತೋಷವಾಗಿರುವುದು, ಆ ಸಂತೋಷ ನಮ್ಮ ತಾಯ್ನಾಡಲ್ಲಿ ಮಾತ್ರ ಸಿಗಲು ಸಾಧ್ಯ ಎಂದು ಹೇಳುತ್ತಾ ಅನಿವಾಸಿ ಭಾರತೀಯನ ಮಾತಿಗೆ ಬೆಂಬಲ ಸೂಚಿಸಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
Daily Devotional: ಉಪವಾಸವಿದ್ದಾಗ ಹಗಲು ಹೊತ್ತಿನಲ್ಲಿ ಮಲಗಬಹುದಾ?
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ