Updated on: Jan 05, 2022 | 2:54 PM
ಮೊಟ್ಟೆಯಲ್ಲಿರುವ ವಿವಿಧ ಪೋಷಕಾಂಶಗಳು ಕಡಿಮೆ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತವೆ. ಹೀಗಾಗಿ ಮೊಟ್ಟೆ ಸೇವನೆ, ಹಸಿವನ್ನುನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಸೇಬು ಉತ್ಕರ್ಷಣ ನಿರೋಧಕಗಳು, ಖನಿಜಗಳು, ಫೈಬರ್ ಮತ್ತು ವಿಟಮಿನ್ಗಳನ್ನು ಹೊಂದಿರುತ್ತವೆ. ಸೇಬು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಪ್ರತಿದಿನ ಕನಿಷ್ಠ ಒಂದು ಸೇಬನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಮತ್ತು ಫೈಟೊಕೆಮಿಕಲ್ಸ್ ಸಮೃದ್ಧವಾಗಿದೆ. ಕಬ್ಬಿಣದ ಕೊರತೆಯಿಂದ ಬಳಲುತ್ತಿರುವವರು ಪಾಲಕ್ ಸೊಪ್ಪಿನ ಸೇವನೆ ಉತ್ತಮ. ಅಲ್ಲದೆ ದೇಹದಿಂದ ಹೆಚ್ಚುವರಿ ಕೊಬ್ಬನ್ನು ಹೊರಹಾಕಲು ಪಾಲಕ್ ಸೊಪ್ಪು ಸಹಾಯ ಮಾಡುತ್ತದೆ.
ಗ್ರೀನ್ ಟೀ ದೇಹವನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ. ಜತೆಗೆ ಕ್ಯಾನ್ಸರ್ ತಡೆಗಟ್ಟುವಲ್ಲಿ ಗ್ರೀನ್ ಟೀ ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳಲ್ಲಿ ಸಾಬೀತಾಗಿದೆ.
ಮೊಳಕೆ ಕಾಳುಗಳು ಬೆಳಗ್ಗಿನ ಉಪಹಾರಕ್ಕೆ ಉತ್ತಮ ಆಹಾರವಾಗಿದೆ. ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡಲು ಮೊಳಕೆಕಾಳುಗಳು ಸಹಾಯ ಮಾಡುತ್ತದೆ.
ಹಣ್ಣುಗಳು ದೇಹದಲ್ಲಿನ ನೀರಿನ ಮಟ್ಟವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಜತೆಗೆ ಹಣ್ಣುಗಳಲ್ಲಿರುವ ಫೈಬರ್ ಅಂಶವು ನಿಮ್ಮ ಹಸಿವನ್ನು ನಿಯಂತ್ರಿಸಿ ದೇಹದ ಆರೋಗ್ಯವನ್ನು ಕಾಪಾಡುತ್ತದೆ.