Father’s Day Special: ವಿಶ್ವ ಅಪ್ಪಂದಿರ ದಿನದಂದು ನಿಮ್ಮ ತಂದೆಗಾಗಿ ಮಾಡಿ ಆರೋಗ್ಯಕರ ರಾಗಿ ಕೇಕ್‌

ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯ ದಿನವನ್ನು ಆಚರಿಸಲಾಗುತ್ತದೆ. ತಂದೆಯಂದಿರ ದಿನವು ಕೇವಲ ಒಂದು ದಿನವಲ್ಲ, ತಂದೆಯಂದಿರು ತಮ್ಮ ಕುಟುಂಬಕ್ಕಾಗಿ ಮಾಡುವ ತ್ಯಾಗ ಮತ್ತು ಪ್ರೀತಿಗಾಗಿ ಅವರಿಗೆ ಧನ್ಯವಾದ ಹೇಳಲಿರುವ ಅವಕಾಶವಾಗಿದೆ. ಈ ವಿಶೇಷ ಸಂದರ್ಭದಲ್ಲಿ ನಿಮ್ಮ ತಂದೆಗಾಗಿ ಏನಾದ್ರೂ ವಿಶೇಷವಾದುದನ್ನು ಮಾಡಲು ಬಯಸಿದರೆ ಅವರಿಗಾಗಿ ನೀವು ಆರೋಗ್ಯಕರ ರಾಗಿ ಕೇಕ್‌ ತಯಾರಿಸಿ. ಟೇಸ್ಟಿ ಮತ್ತು ಹೆಲ್ತಿ ರಾಗಿ ಕೇಕ್‌ ರೆಸಿಪಿ ಇಲ್ಲಿದೆ.

Father’s Day Special: ವಿಶ್ವ ಅಪ್ಪಂದಿರ ದಿನದಂದು ನಿಮ್ಮ ತಂದೆಗಾಗಿ ಮಾಡಿ ಆರೋಗ್ಯಕರ ರಾಗಿ ಕೇಕ್‌
ರಾಗಿ ಕೇಕ್‌ ರೆಸಿಪಿ
Image Credit source: Pinterest

Updated on: Jun 20, 2026 | 5:34 PM

ನಮ್ಮ ಜೀವನದ ನಿಜವಾದ ಸೂಪರ್ ಹೀರೋ ತಂದೆಯೇ (Father) ಎಂಬುದನ್ನು ಅಲ್ಲಗಳೆಯುವಂತಿಲ್ಲ. ತನ್ನ ಆಸೆ ಆಕಾಂಕ್ಷೆಗಳನ್ನು ಪಕ್ಕಕ್ಕಿಟ್ಟು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ದುಡಿಯುವ ಶ್ರಮಜೀವಿ, ತ್ಯಾಗಮಯಿ  ಎಂದರೆ ಅದು ಅಪ್ಪ ಮಾತ್ರ.  ಇಂತಹ ತಂದೆಯ ತ್ಯಾಗ ಮತ್ತು ಪ್ರೀತಿಯನ್ನು ಸ್ಮರಿಸುವ ಸಲುವಾಗಿ ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ತಂದೆಯರ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಮಕ್ಕಳು ತಮ್ಮ ತಂದೆಗೆ ಗಿಫ್ಟ್‌ ನೀಡುವ ಮೂಲಕ ಅವರನ್ನು ಖುಷಿ ಪಡಿಸುತ್ತಾರೆ. ಈ ಬಾರಿಯ ಫಾದರ್ಸ್‌ ಡೇಯಂದು ಅಪ್ಪನಿಗೆ ಏನಾದರೂ ವಿಶೇಷವಾದದ್ದನ್ನು ನೀಡಿ ಅಚ್ಚರಿಗೊಳಿಸಬೇಕೆಂದು ಬಯಸಿದರೆ ನೀವು ನಿಮ್ಮ ಕೈಯಾರೇ ಅವರಿಗಾಗಿ ರಾಗಿ ಕೇಕ್‌ ತಯಾರಿಸಿ. ಈ ಕೇಕ್‌ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

ಫಾದರ್ಸ್‌ ಡೇ ಸ್ಪೆಷಲ್‌ ರಾಗಿ ಕೇಕ್‌:

ರಾಗಿ ಕೇಕ್ ರುಚಿಕರ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.  ಕ್ಯಾಲ್ಸಿಯಂ, ಪ್ರೋಟೀನ್‌ನಿಂದ ಸಮೃದ್ಧವಾಗಿರುವ ರಾಗಿ ಪೋಷಕಾಂಶಗಳ ನಿಧಿಯಾಗಿದೆ. ಇದರಿಂದ ತಯಾರಿಸಿದ ಕೇಕ್‌ ಕೂಡ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೃತಕ ಸಿಹಿಕಾರಕ ಹಾಗೂ ಕೃತಕ ಬಣ್ಣಗಳನ್ನು ಹೊಂದಿರುವ ಕೇಕ್‌ಗಳನ್ನು ಅಂಗಡಿಯಿಂದ ತರುವ ಬದಲು ಫಾದರ್ಸ್‌ ಡೇ ದಿನ ನಿಮ್ಮ ತಂದೆಗಾಗಿ ನೀವು ಆರೋಗ್ಯಕರ ರಾಗಿ ಕೇಕ್‌ ಅನ್ನು ಮನೆಯನ್ನೇ ತಯಾರಿಸಿ.

ರಾಗಿ ಕೇಕ್ ಮಾಡಲು ಬೇಕಾಗುವ ಸಾಮಗ್ರಿಗಳು:

  • ರಾಗಿ ಹಿಟ್ಟು – 3/4 ಕಪ್
  • ಗೋಧಿ ಹಿಟ್ಟು – 3/4 ಕಪ್
  • 2 ಚಮಚ ಕೋಕೋ ಪುಡಿ
  • ಬೇಕಿಂಗ್ ಪೌಡರ್ – 1.5 ಟೀಸ್ಪೂನ್
  • ಅಡಿಗೆ ಸೋಡಾ – 1/2 ಟೀಸ್ಪೂನ್
  • ಒಂದು ಚಿಟಿಕೆ ಉಪ್ಪು
  • 200 ಗ್ರಾಂ ಬೆಲ್ಲದ ಪುಡಿ
  • ಚೆರ್ರಿ, ಒಣ ಹಣ್ಣುಗಳು
  • ಮೊಸರು – 1/3 ಕಪ್
  • ಹಾಲು – 3/4 ಕಪ್
  • ಅಗತ್ಯಕ್ಕೆ ತಕ್ಕಷ್ಟು ವೆನಿಲ್ಲಾ ಎಸೆನ್ಸ್
  • ಎಣ್ಣೆ / ತುಪ್ಪ / ಬೆಣ್ಣೆ – 1/2 ಕಪ್
  • ಡಾರ್ಕ್ ಚಾಕೊಲೇಟ್

ಇದನ್ನೂ ಓದಿ: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಸ್ಪೆಷಲ್‌ ಉಡುಗೊರೆಗಳನ್ನು ನೀಡಿ

ರಾಗಿ ಕೇಕ್ ತಯಾರಿಸುವ ವಿಧಾನ:

  • ರುಚಿಕರವಾದ ಮತ್ತು ಪೌಷ್ಟಿಕವಾದ ರಾಗಿ ಕೇಕ್ ಮಾಡಲು, ಮೊದಲು ಓವಲ್ ಓವನ್ ಅನ್ನು 180 ಡಿಗ್ರಿ ಸೆಲ್ಸಿಯಸ್‌ಗೆ ಕನಿಷ್ಠ 15 ನಿಮಿಷಗಳ ಕಾಲ ಬಿಸಿ ಮಾಡಿ. ನಿಮ್ಮ ಬಳಿ ಮೈಕ್ರೋವೇವ್ ಇಲ್ಲದಿದ್ದರೆ, ನೀವು ಈ ಕೇಕ್ ಅನ್ನು ಪ್ರೆಶರ್ ಕುಕ್ಕರ್‌ನಲ್ಲಿ ತಯಾರಿಸಬಹುದು. ಪ್ರೆಶರ್ ಕುಕ್ಕರ್‌ಗೆ ಒಂದು ಕಪ್ ಉಪ್ಪು ಸೇರಿಸಿ, ಮಧ್ಯಮ-ಹೆಚ್ಚಿನ ಶಾಖಕ್ಕೆ ಹೊಂದಿಸಿ ಮತ್ತು 15 ರಿಂದ 20 ನಿಮಿಷಗಳ ಕಾಲ ಬಿಸಿ ಮಾಡಲು ಬಿಡಿ.
  • ರಾಗಿ ಹಿಟ್ಟು ಮತ್ತು ಗೋಧಿ ಹಿಟ್ಟನ್ನು ಒಂದು ಬಟ್ಟಲಿಗೆ ಶೋಧಿಸಿ ಇಡಿ. ಈ ಹಿಟ್ಟಿಗೆ ಬೇಕಿಂಗ್ ಪೌಡರ್, ಅಡಿಗೆ ಸೋಡಾ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಪಕ್ಕಕ್ಕೆ ಇರಿಸಿ.
  • ಈಗ ಇನ್ನೊಂದು ಬಟ್ಟಲನ್ನು ತೆಗೆದುಕೊಂಡು ಪುಡಿ ಮಾಡಿದ ಬೆಲ್ಲ ಮತ್ತು ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ಮೊಸರನ್ನು ಮಿಶ್ರಣಕ್ಕೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ, ನಿಧಾನವಾಗಿ ಮಿಶ್ರಣಕ್ಕೆ ಹಾಲನ್ನು ಸೇರಿಸಿ. ಈಗ, ನಿಧಾನವಾಗಿ ಈ ಮಿಶ್ರಣವನ್ನು ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ.
  • ಕೇಕ್‌ ಹಿಟ್ಟನ್ನು ಚೆನ್ನಾಗಿ ಮಿಶ್ರಣ ಮಾಡಿದ ನಂತರ ಬೇಕಿಂಗ್ ಪ್ಲೇಟ್ ಅಥವಾ ಬೌಲ್‌ಗೆ ಬೆಣ್ಣೆ, ತುಪ್ಪ ಅಥವಾ ಎಣ್ಣೆಯನ್ನು ಗ್ರೀಸ್ ಮಾಡಿ, ಅದರ ಮೇಲೆ ಬಟರ್‌ ಪೇಪರ್‌ ಹಾಕಿ. ಕೇಕ್ ಬ್ಯಾಟರ್ ಹಾಕಿ ಅದರ ಮೇಲೆ ಸಣ್ಣದಾಗಿ ಕಟ್‌ ಮಾಡಿದಂತಹ ಬಾದಮಿ, ಗೋಡಂಬಿ, ಪಿಸ್ತಾ ಸೇರಿದಂತೆ ಒಂದಷ್ಟು ಒಣ ಹಣ್ಣುಗಳನ್ನು ಸೇರಿಸಬಹುದು. ನಂತರ ಅದನ್ನು ಸಮತಟ್ಟಾಗಿಸಲು ಎರಡರಿಂದ ನಾಲ್ಕು ಬಾರಿ ಟ್ಯಾಪ್ ಮಾಡಿ.
  • ಈಗ ಟ್ರೇಯನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟ ಓವನ್‌ ಅಥವಾ ಕುಕ್ಕರ್‌ನಲ್ಲಿ ಇರಿಸಿ ಮತ್ತು 25 ರಿಂದ 30 ನಿಮಿಷಗಳ ಕಾಲ ಬೇಯಿಸಿ. ಕೇಕ್ ಬೇಯಿಸಿದ ನಂತರ, ಅದನ್ನು ತೆಗೆದು 15 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ.
  • ಕೇಕ್‌ ತಣ್ಣಗಾದ ಬಳಿಕ ಬೇಕಿಂಗ್ ಟ್ರೇನಿಂದ ತೆಗೆದು ಒಂದು ಪ್ಲೇಟ್‌ನಲ್ಲಿ ಇಡಿ. ಈಗ ಡಾರ್ಕ್‌ ಚಾಕೋಲೇಟ್‌ ಅನ್ನು ಕರಗಿಸಿ ಅದನ್ನು ಅದನ್ನು ಕೇಕ್ ಮೇಲೆ ಹರಡಿ. ಚೆರ್ರಿಯಿಂದ ಅಲಂಕರಿಸಿ. ಅದರ ಮೇಲೆ ಬಿಳಿ ಚಾಕೋಲೇಟ್‌ ಬಳಸಿ ಹ್ಯಾಪಿ ಫಾದರ್ಸ್‌ ಡೇ ಅಂತಾನೂ ಬರೆಯಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us