AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Father’s Day 2026: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಈ ಸ್ಪೆಷಲ್‌ ಉಡುಗೊರೆಗಳನ್ನು ನೀಡಿ

ತಂದೆಯಂದಿರು ಹಾಗೆಯೇ, ತಮ್ಮ ಸ್ವಂತ ಅಗತ್ಯಗಳನ್ನು ಬದಿಗಿಟ್ಟು ಮಕ್ಕಳ ಸಂತೋಷಕ್ಕೆ ಮೊದಲ ಸ್ಥಾನ ನೀಡುತ್ತಾರೆ. ಮಕ್ಕಳ ಖುಷಿಗಾಗಿ, ಮಕ್ಕಳ ಭವಿಷ್ಯಕ್ಕಾಗಿ ಹಗಲು ರಾತ್ರಿಯೆನ್ನದೆ ಕಷ್ಟಪಟ್ಟು ಶ್ರಮಿಸುತ್ತಾರೆ. ಇಂತಹ ತಂದೆಯಂದಿರನ್ನು ಗೌರವಿಸಲು ಪ್ರತಿವರ್ಷ ಜೂನ್‌ ಮೂರನೇ ಭಾನುವಾರದಂದು ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಜೂನ್‌ 21 ರಂದು ಫಾದರ್ಸ್‌ ಡೇ ಆಚರಿಸಲಾಗುತ್ತಿದ್ದು, ಈ ದಿನ ಕೆಲವೊಂದು ಸ್ಪೆಷಲ್‌ ಗಿಫ್ಟ್‌ಗಳನ್ನು ನೀಡುವ ಮೂಲಕ ನಿಮ್ಮ ತಂದೆಯ ಮುಖದಲ್ಲಿ ನಗು ತರಿಸಿ.

Father’s Day  2026: ಅಪ್ಪಂದಿರ ದಿನದಂದು ನಿಮ್ಮ ಪ್ರೀತಿಯ ತಂದೆಗೆ ಈ ಸ್ಪೆಷಲ್‌ ಉಡುಗೊರೆಗಳನ್ನು ನೀಡಿ
ಫಾದರ್ಸ್‌ ಡೇ 2026Image Credit source: Getty Images
TV9 Web
| Edited By: |

Updated on: Jun 18, 2026 | 6:49 PM

Share

ತಾಯಿಯಂತೆ ಮಕ್ಕಳ ಜೀವನದಲ್ಲಿ ತಂದೆಯೂ (Father) ಸಹ ಬಹುಮುಖ್ಯ ಪಾತ್ರವನ್ನು ವಹಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ತನ್ನ ಸಂತೋಷವನ್ನೇ ತ್ಯಾಗ ಮಾಡಿ ಹಗಲಿರುಳು ದುಡಿಯುವ ಶ್ರಮಜೀವಿ ತಂದೆಯೇ ಮಕ್ಕಳ ಪಾಲಿನ ರಿಯಲ್‌ ಹೀರೋ. ಮಕ್ಕಳ ಪಾಲಿನ ಈ ಸೂಪರ್‌ ಹೀರೋಗಳನ್ನು ಸಂಭ್ರಮಿಸಲು, ಅಪ್ಪಂದಿರ ಪ್ರೀತಿ, ತ್ಯಾಗವನ್ನು ಸ್ಮರಿಸಲು ಪ್ರತಿವರ್ಷ ಜೂನ್‌ ತಿಂಗಳ ಮೂರನೇ ಭಾನುವಾರದಂದು ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಇದು ತಂದೆಯರ ಪಾಲಿಗಂತೂ ತುಂಬಾನೇ ವಿಶೇಷವಾದ ದಿನ. ಅನೇಕ ಜನರು ತಮ್ಮ ತಂದೆಯ ಸಲುವಾಗಿ ಈ ದಿನವನ್ನು ಸ್ಪೆಷಲ್‌ ಆಗಿ ಆಚರಿಸುತ್ತಾರೆ. ಈ ಬಾರಿ ಫಾದರ್ಸ್‌ ಡೇಯನ್ನು ಜೂನ್‌ 21 ರಂದು ಆಚರಿಸಲಾಗುತ್ತಿದ್ದು, ಈ ದಿನ ನಿಮ್ಮ ಪ್ರೀತಿಯ ತಂದೆಯ ಮುಖದಲ್ಲಿ ನಗು ತರಿಸಲು ಬಯಸಿದರೆ ಈ ಕೆಲವೊಂದು ವಿಶೇಷ ಉಡುಗೊರೆಗಳನ್ನು ನೀಡಿ.

ಫಾದರ್ಸ್‌ ಡೇ ದಿನ ತಂದೆಗೆ  ನೀಡಬಹುದಾದ ಉಡುಗೊರೆಗಳ ಪಟ್ಟಿ:

ನಿಮ್ಮ ತಂದೆಯೊಂದಿಗೆ ಸಮಯ ಕಳೆಯಿರಿ: ನೀವು ಎಷ್ಟೇ ದುಬಾರಿ ಉಡುಗೊರೆಯನ್ನು ಖರೀದಿಸಿದರೂ, ನಿಮ್ಮ ತಂದೆಗೆ ನೀವು ನೀಡಬಹುದಾದ ಅತ್ಯಂತ ಅಮೂಲ್ಯ ಉಡುಗೊರೆ ನಿಮ್ಮ ಸಮಯ. ಇಂದಿನ ಒತ್ತಡದ ಜೀವನದಲ್ಲಿ, ಹೆತ್ತವರೊಂದಿಗೆ ಸಮಯ ಕಳೆಯಲು ಯಾಗಿಗೂ ಟೈ ಇಲ್ಲ. ಹೀಗಿರುವಾಗ ಒಂದು ದಿನ ಬಿಡುವು ತೆಗೆದುಕೊಂಡು ತಂದೆ ತಾಯಿಯ ಜೊತೆ ಪಿಕ್ನಿಕ್‌ಗೆ ಹೋಗಿ ಅಮೂಲ್ಯ ಸಮೈವನ್ನು ಕಳೆಯಿರಿ. ಇಲ್ಲವೇ ಫಿಲ್ಮ್‌ಗೆ ಹೋಗಿ, ಇಲ್ಲವೇ ಮನೆಯಲ್ಲಿಯೇ ಇದ್ದು ನಿಮ್ಮ ತಂದೆಗೆ ಅವರಿಷ್ಟದ ಅಡುಗೆಗಳನ್ನು ನಿಮ್ಮ ಕೈಯಾರೆ ಮಾಡಿ ಉಣಬಡಿಸಿ, ಸ್ನೇಹಿತರಂತೆ ತಂದೆಯೊಂದಿಗೆ ಮನಬಿಚ್ಚಿ ಮಾತನಾಡಿ, ಖಂಡಿತವಾಗಿ ಈ ವಿಷಯ ನಿಮ್ಮ ತಂದೆಗೆ ತುಂಬಾ ಖುಷಿಯನ್ನು ನೀಡುತ್ತದೆ.

ಅವರು ಆನಂದಿಸುವ ವಿಷಯಗಳಿಗೆ ಸಮಯ ಮೀಸಲಿಡಿ: ತಂದೆಯಂದಿರು ಹೆಚ್ಚಾಗಿ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲಿಯೇ ಕಳೆದುಹೋಗುತ್ತಾರೆ. ಹೀಗಿರುವಾಗ ತಂದೆಯಂದಿರ ದಿನದಂದು, ಅವರು ಆನಂದಿಸುವ ಕೆಲಸಗಳನ್ನು ಮಾಡಲು ಅವರಿಗೆ ಅವಕಾಶ ನೀಡಿ. ಅವರು ವಿಶ್ರಾಂತಿ ಪಡೆಯಲಿ, ಅವರ ನೆಚ್ಚಿನ ಪುಸ್ತಕ, ಸಂಗೀತ ಅಥವಾ ಹವ್ಯಾಸಕ್ಕಾಗಿ ಸಮಯವನ್ನು ಕಂಡುಕೊಳ್ಳಲು ಅವರಿಗೆ ನೀವು ಸಹಾಯ ಮಾಡಿ.

ಹಳೆಯ ಸ್ನೇಹಿತರನ್ನು ಭೇಟಿ ಮಾಡಿಸಿ: ಕುಟುಂಬದ ಜವಾಬ್ದಾರಿಗಳಿಂದಾಗಿ, ತಂದೆಯಂದಿರು ಸ್ನೇಹಿತರಿಂದ ದೂರವಿರುತ್ತಾರೆ, ಅವರಿಗೆ ಅವರ ಹಳೆಯ ಸ್ನೇಹಿತರನ್ನು ಭೇಟಿಯಾಗಲು ಸಹ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಅಪ್ಪಂದಿರ ದಿನದಂದು  ನಿಮ್ಮ ತಂದೆಯ  ಕ್ಲೋಸ್‌ ಫ್ರೆಂಡ್ಸ್‌, ಶಾಲಾ, ಕಾಲೇಜು ಸ್ನೇಹಿತರನ್ನು ಒಟ್ಟು ಸೇರಿಸಿ ಅವರಿಗಾಗಿ ಒಂದು ಸ್ನೇಹ ಕೂಟವನ್ನು ಆಯೋಜಿಸಿ. ಹಲವು ವರ್ಷಗಳ ನಂತರ ತಂದೆ ತಮ್ಮ ಹಳೆಯ ಸ್ನೇಹಿತರನ್ನು ನೋಡಿದಾಗ ಅವರ ಮುಖದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ನಗು ಯಾವುದೇ ದುಬಾರಿ ಉಡುಗೊರೆಗಿಂತ ಹೆಚ್ಚು ಮೌಲ್ಯಯುತವಾಗಿರುತ್ತದೆ.

ಇದನ್ನೂ ಓದಿ: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ

ಆರೋಗ್ಯ ಸಂಬಂಧಿತ ಉಡುಗೊರೆಗಳು: ವಯಸ್ಸಾದಂತೆ, ಅಪ್ಪಂದಿರಿಗೆ ವಿಶ್ರಾಂತಿ ಹೆಚ್ಚು ಬೇಕಾಗುತ್ತದೆ. ಅವರು ದೀರ್ಘ ದಿನದ ನಂತರ ದಣಿದಿದ್ದಾಗ, ಅವರಿಗೆ ರೆಸ್ಟ್‌ ಪಡೆಯಲು ನೀವು ಅವರಿಗೆ ಫೂಟ್ ಮಸಾಜ್ ಯಂತ್ರ ಅಥವಾ ಉತ್ತಮ ಮಸಾಜ್ ದಿಂಬನ್ನು ಉಡುಗೊರೆಯಾಗಿ ನೀಡಬಹುದು. ಸ್ಮಾರ್ಟ್ ವಾಚ್‌ ಉಡುಗೊರೆಯಾಗಿ ನೀಡಬಹುದು. ಇದಲ್ಲದೆ ಮಸಾಜ್ ಸೆಷನ್, ಆಕ್ಯುಪ್ರೆಶರ್ ಥೆರಪಿ ಅಥವಾ ಉತ್ತಮ ಕ್ಷೇಮ ಕೇಂದ್ರದಲ್ಲಿ ಯೋಗ/ಧ್ಯಾನ ತರಗತಿಗೆ ಒಂದು ತಿಂಗಳ ಚಂದಾದಾರಿಕೆಯನ್ನು ಉಡುಗೊರೆಯಾಗಿ ನೀಡಬಹುದು.  ಈ ಉಡುಗೊರೆಗಳು ಅವರು ತಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳುವಂತೆ ಮಾಡುತ್ತದೆ.

ನೆನಪುಗಳನ್ನು ಮರಳಿ ತರುವ ಉಡುಗೊರೆಗಳು: ನಿಮ್ಮ ತಂದೆಯ ಬಾಲ್ಯದ ಫೋಟೋಗಳು, ತಂದೆ ಅವರ ಸಹೋದರ, ಸಹೋದರಿಯರೊಂದಿಗಿರುವ ಫೋಟೋ ಅಥವಾ ನಿಮ್ಮ ಕುಟುಂಬದ ಮರೆಯಲಾದ ಕ್ಷಣದ ಫೋಟೋಗಳನ್ನು ಫೋಟೋ ಫ್ರೇಮ್‌ ಹಾಕಿಸಿ ತಂದೆಗೆ ಉಡುಗೊರೆಯಾಗಿ ನೀಡಬಹುದು.

ಪ್ರತಿದಿನ ಉಪಯೋಗಕ್ಕೆ ಬರುವ ವಸ್ತುಗಳು: ನಿಮ್ಮ ತಂದೆಗೆ ಅವರು ಪ್ರತಿದಿನ ಬಳಸುವ ವಸ್ತುಗಳನ್ನು ಸಹ ನೀವು ಗಿಫ್ಟ್‌ ಆಗಿ ನೀಡಬಹುದು. ವಾಚ್‌, ಶೇವಿಂಗ್‌ ಕಿಟ್, ಬಟ್ಟೆ, ವಾಕಿಂಗ್‌ ಶೂ, ಪರ್ಫ್ಯೂಮ್‌ ಇತ್ಯಾದಿ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು. ಇದಲ್ಲದೆ ಅಪ್ಪನಿಗೆ ಓಡಾಡಲು ದ್ವಿಚಕ್ರ ವಾಹನವನ್ನೂ ಗಿಫ್ಟ್‌ ಮಾಡಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us