AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Picnic Day 2026: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ

ಇಂದಿನ ಒತ್ತಡದ ಜೀವನದಲ್ಲಿ, ಕುಟುಂಬ ಮತ್ತು ಸ್ನೇಹಿತರಿಗಾಗಿ ಸಮಯ ಕಂಡುಕೊಳ್ಳುವುದು ಕಷ್ಟಕರವಾಗಿದೆ. ಜೊತೆಗೆ ಈ ಜಂಜಾಟ ಮಾನಸಿಕ ಒತ್ತಡವೂ ಹೆಚ್ಚಾಗುತ್ತದೆ. ಹೀಗಿರುವಾಗ ಪಿಕ್ನಿಕ್‌ ಹೋಗುವ ಮೂಲಕ ಮನಸ್ಸಿಗೆ ನೆಮ್ಮದಿಯನ್ನು ಪಡೆಯಬಹುದು ಮತ್ತು ಫ್ರೆಂಡ್ಸ್‌, ಫ್ಯಾಮಿಲಿಯೊಂದಿಗೆ ಸಮಯವನ್ನು ಕಳೆಯಬಹುದು. ಈ ಪಿಕ್ನಿಕ್‌ಗೂ ಒಂದು ದಿನವಿದ್ದು, ಆ ದಿನದ ಹಿನ್ನೆಲೆಯೇನು ಎಂಬುದನ್ನು ತಿಳಿದುಕೊಳ್ಳಿ.

International Picnic Day 2026: ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಪಿಕ್ನಿಕ್‌ ಹೋಗುವ ಖುಷಿಯೇ ಬೇರೆ
ಅಂತಾರಾಷ್ಟ್ರೀಯ ಪಿಕ್ನಿಕ್‌ ದಿನImage Credit source: Pexels
ಮಾಲಾಶ್ರೀ ಅಂಚನ್​
|

Updated on: Jun 17, 2026 | 9:06 PM

Share

ಪಿಕ್ನಿಕ್‌ (Picnic) ಹೋಗೋದು ಎಂದ್ರೆ ಎಲ್ಲರಿಗೂ ಇಷ್ಟ. ಪಿಕ್ನಿಕ್ ಎಂದರೆ ಸ್ನೇಹಿತರು, ಕುಟುಂಬ ಮತ್ತು ಆಪ್ತರೊಂದಿಗೆ ಸುಂದರವಾದ ಸ್ಥಳಕ್ಕೆ ಹೋಗುವುದು ಮತ್ತು  ಪ್ರಕೃತಿಯ ನಡುವೆ ಆನಂದಿಸುವುದು. ಇದೊಂದು ರೀತಿಯಲ್ಲಿ ಸಣ್ಣ ಪ್ರವಾಸವಾಗಿದ್ದು, ಪ್ರೀತಿಪಾತ್ರರೊಂದಿಗೆ ಹೊರಗಡೆ ಹೋಗುವ ಮೂಲಕ ಒಂದೊಳ್ಳೆ ಸಮಯವನ್ನು ಕಳೆಯಬಹುದು. ಅನೇಕರು ತಮ್ಮ ಫ್ರೆಂಡ್ಸ್‌, ಫ್ಯಾಮಿಲಿಯೊಂದಿಗೆ ಸುಂದರ ಪಾರ್ಕ್‌, ಬೀಚ್‌, ವಾಟರ್‌ಫಾಲ್ಸ್‌ನಂತಹ ಸುಂದರ ತಾಣಗಳಿಗೆ  ಊಟ ತಿಂಡಿ, ಹಣ್ಣು ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗಿ, ಅದನ್ನು ತಿನ್ನುತ್ತಾ ತಮ್ಮವರೊಂದಿಗೆ ಮೋಜು ಮಾಡುತ್ತಾ ಪಿಕ್ನಿಕ್‌ ಆನಂದಿಸುತ್ತಾರೆ. ಹೀಗೆ ಪಿಕ್ನಿಕ್‌ ಹೋಗುವ ಮೂಲಕ ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಸಮಯವನ್ನು ಕಳೆಯುವುದರ ಜೊತೆಗೆ ಹೀಗೆ ಹೊರಗಡೆ ಸುತ್ತಾಡಲು ಹೋಗುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸಿಗೂ ಒಂದು ರೀತಿಯ ಮುದ ಸಿಗುತ್ತದೆ. ಈ ಪಿಕ್ನಿಕ್‌ಗೂ ಒಂದು ದಿನವಿದ್ದು, ಆ ವಿಶೇಷ ದಿನದ ಹಿನ್ನೆಲೆಯ ಬಗ್ಗೆ ತಿಳಿಯಿರಿ.

ಅಂತಾರಾಷ್ಟ್ರೀಯ ಪಿಕ್ನಿಕ್ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಪಿಕ್ನಿಕ್ ದಿನವನ್ನು ಪ್ರತಿ ವರ್ಷ ಜೂನ್ 18 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಪಿಕ್ನಿಕ್ ಎಂಬ ಪದವು ಫ್ರೆಂಚ್ ಪದ ‘ಪಿಕ್-ನಿಕ್’ ನಿಂದ ಬಂದಿದೆ, ಇದರರ್ಥ ಎಲ್ಲರೂ  ಆಹಾರವನ್ನು ಹಂಚಿಕೊಳ್ಳುವ ಸಾಮಾಜಿಕ ಕಾರ್ಯಕ್ರಮ. ಪಿಕ್ನಿಕ್ ದಿನದ ಇತಿಹಾಸ ಇನ್ನೂ ಸಂಪೂರ್ಣವಾಗಿ ಸ್ಪಷ್ಟವಾಗಿಲ್ಲವಾದರೂ, ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಪಿಕ್ನಿಕ್‌ಗಳು ಒಂದು ರೀತಿಯ ಅನೌಪಚಾರಿಕ ಊಟದ ಕಾರ್ಯಕ್ರವಾಗಿ ಪ್ರಾರಂಭವಾಯಿತು ಎಂದು ನಂಬಲಾಗಿದೆ.

ವರದಿಯ ಪ್ರಕಾರ, 19 ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಪಿಕ್ನಿಕ್‌ಗಳು ಜನಪ್ರಿಯವಾದವು. ನಂತರದ ವರ್ಷಗಳಲ್ಲಿ, ರಾಜಕೀಯ ಪ್ರತಿಭಟನೆಗಳ ಸಮಯದಲ್ಲಿ ಪಿಕ್ನಿಕ್‌ಗಳು ಸಾಮಾನ್ಯ ಸಭೆಯಾದವು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪೋರ್ಚುಗಲ್‌ನಲ್ಲಿ ನಡೆದ ಪಿಕ್ನಿಕ್ ಅನ್ನು ಅತಿದೊಡ್ಡ ಪಿಕ್ನಿಕ್ ಎಂದು ದಾಖಲಿಸಿದೆ. ಆ ಕಾರ್ಯಕ್ರಮದಲ್ಲಿ ಸುಮಾರು 20,000 ಜನರು ಭಾಗವಹಿಸಿದ್ದರು.

ಇದನ್ನೂ ಓದಿ: ಬರಡಾಗುತ್ತಿರುವ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ

ಪಿಕ್ನಿಕ್‌ ಹೋಗುವುದರಿಂದ ಲಭಿಸುವ ಪ್ರಯೋಜನಗಳು:

  • ಬೀಚ್‌, ಫಾಲ್ಸ್‌, ಪಾರ್ಕ್‌ನಂತಹ ಸ್ಥಳಗಳಿಗೆ ಪಿಕ್ನಿಕ್‌ಗೆ ಹೋದಾಗ ದಿನವಿಡೀ ತಾಜಾ ಗಾಳಿಯನ್ನು ಉಸಿರಾಡಲು ನಮಗೆ ಅವಕಾಶ ಸಿಗುತ್ತದೆ. ಇದು ದೇಹಕ್ಕೆ ಉಲ್ಲಾಸವನ್ನು ನೀಡುತ್ತದೆ. ಮನಸ್ಸನ್ನು ರಿಫ್ರೆಶ್‌ ಮಾಡುತ್ತದೆ.
  • ಆಗಾಗ್ಗೆ ಪಿಕ್ನಿಕ್‌ಗಳಿಗೆ ಹೋಗುವುದರಿಂದ ವಿವಿಧ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯವಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
  • ಪ್ರಕೃತಿ, ಫ್ರೆಂಡ್ಸ್‌, ಸ್ನೇಹಿತರೊಂದಿಗೆ ಸಮಯ ಕಳೆಯುವ ಮೂಲಕ ಒತ್ತಡದಿಂದಲೂ ಮುಕ್ತಿ ಪಡೆಯಬಹುದು. ನಿಯಮಿತವಾಗಿ ಪಿಕ್ನಿಕ್‌ಗೆ ಹೋಗುವುದರಿಂದ ಒತ್ತಡ ಮತ್ತು ಆತಂಕದಂತಹ ಮಾನಸಿಕ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗುತ್ತದೆ.
  • ಇತ್ತೀಚಿನ ಬ್ಯುಸಿ ಜೀವನಶೈಲಿ, ಕೆಲಸದ ಒತ್ತಡದ ಕಾರಣ ಜನರಿಗೆ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಟೈಂ ಸಿಗುತ್ತಿಲ್ಲ. ಹೀಗಿರುವಾಗ ಪಿಕ್ನಿಕ್‌ ಡೇ ಸಂದರ್ಭದಲ್ಲಿ ಒಂದೊಳ್ಳೆ ಸ್ಥಳಕ್ಕೆ ಪಿಕ್ನಿಕ್‌ ಹೋಗುವ ಮೂಲಕ ಪ್ರೀತಿಪಾತ್ರರೊಂದಿಗೆ ಒಂದೊಳ್ಳೆ ಟೈಮ್‌ ಸ್ಪೆಂಡ್‌ ಮಾಡುವುದರ ಜೊತೆಗೆ ಬಾಂಧವ್ಯವನ್ನು ಇನ್ನಷ್ಟು ಬಲಗೊಳಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಅಡ್ಡ ಮತದಾನದ ಭೀತಿ: ಕಾಂಗ್ರೆಸ್ ಶಾಸಕರಿಗೆ ಮತದಾನದ ತರಬೇತಿ
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಬಿಗ್​​ಬಾಸ್​ನಿಂದ ಜೀವನದಲ್ಲಾದ ಬದಲಾವಣೆ ಏನು: ಕರಿಬಸಪ್ಪ ಮಾತು
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಮೇಲ್ಮನೆ ಮೇಲಾಟ:ಕಾಂಗ್ರೆಸ್​​ ಕ್ಯಾಂಪ್​ ಸೇರಿಕೊಂಡ ಬಿಜೆಪಿ ಉಚ್ಛಾಟಿತ ಶಾಸಕ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಸಚಿವ ಸ್ಥಾನ ಸಂಬಂಧ ಜಮೀರ್​​ ಅಹ್ಮದ್​​ ಸ್ಫೋಟಕ ಹೇಳಿಕೆ
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಐಸೊಬ್ಯುಟನಾಲ್; ಶೀಘ್ರದಲ್ಲೇ ಬರಲಿದೆ ಪರಿಸರ ಸ್ನೇಹಿ ಬಯೋ ಡೀಸೆಲ್!
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಅವರು ಹೋಮಕ್ಕೆ ಕೋಟಿ ಸುರಿದರೆ, ನಾನು ರಂಗಭೂಮಿಗೆ ವ್ಯಯಿಸುತ್ತೇನೆ; ಪ್ರಕಾಶ್
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಚಿನ್ನಯ್ಯ ತಮ್ಮ ಬಳಿ ಹೇಳಿದ್ದೇನು? ಬಹಿರಂಗಪಡಿಸಿದ ಪ್ರಕಾಶ್ ರೈ
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಎದೆ ಉರಿ ಕಾಣಿಸಿಕೊಂಡು ನಾಲ್ಕು ವರ್ಷದ ಬಾಲಕ ವೈಷ್ಣವ್ ಸಾವು
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಬೌರಿಂಗ್ ಆಸ್ಪತ್ರೆ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು!
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು
ಗ್ರೈಂಡರ್​​​ನಿಂದ ವಿದ್ಯುತ್​ ಪ್ರವಹಿಸಿ 4 ವರ್ಷದ ಬಾಲಕಿ ಸಾವು