ಪೇರಳೆ ಎಲೆಯ ಚಹಾ ಕುಡಿಯೋದ್ರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ

ಪೇರಳೆ ಹಣ್ಣು ಮಾತ್ರವಲ್ಲ ಅದರ ಎಲೆ ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೌದು ಈ ಎಲೆಯಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಪೋಷಕಾಂಶಗಳು ಸಮೃದ್ಧವಾಗಿದೆ. ಇದೇ ಕಾರಣಕ್ಕೆ ಪ್ರತಿದಿನ ಪೇರಳೆ ಎಲೆಯನ್ನು ತಿನ್ನಬೇಕು ಎಂದು ಹೇಳುತ್ತಾರೆ ಅಲ್ವಾ. ಅದೇ ರೀತಿ ಪೇರಳೆ ಎಲೆಯ ಟೀ ಸೇವನೆ ಮಾಡುವುದು ಕೂಡಾ ಅಷ್ಟೇ ಪ್ರಯೋಜನಕಾರಿ. ಪ್ರತಿದಿನ ಈ ಟೀ ಸೇವನೆ ಮಾಡುವುದರಿಂದ ದೃಷ್ಟಿ ಶಾರ್ಪ್‌ ಆಗುತ್ತಂತೆ. ಹಾಗಿದ್ರೆ ಪೇರಳೆ ಎಲೆ ಟೀ ಹೇಗೆ ಮಾಡೋದು ಎಂಬುದನ್ನು ನೋಡೋಣ ಬನ್ನಿ.

ಪೇರಳೆ ಎಲೆಯ ಚಹಾ ಕುಡಿಯೋದ್ರಿಂದ ಲಭಿಸುವ ಪ್ರಯೋಜನ ಅಷ್ಟಿಷ್ಟಲ್ಲ
ಪೇರಳೆ ಎಲೆ ಚಹಾ

Updated on: Aug 11, 2025 | 5:49 PM

ಪೇರಳೆ ಹಣ್ಣಿನಂತೆ (guava) ಅದರ ಎಲೆಯು ಸಹ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಈ ಎಲೆ ಉತ್ಕರ್ಷಣ ನಿರೋಧಕಗಳು, ಉರಿಯೂತ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು, ಪ್ರೊಟೀನ್‌, ವಿಟಮಿನ್‌ ಸಿ, ಬಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೇಸಿಯಂ, ರಂಜಕ, ಪೊಟ್ಯಾಸಿಯಂ, ಕ್ವೆರ್ಸೆಟಿನ್, ಫ್ಲೇವನಾಯ್ಡ್‌ ಸೇರಿದಂತೆ ಹಲವು ಜೀವಸತ್ವ, ಖನಿಜ ಮತ್ತು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಜೊತೆಗೆ ಈ ಎಲೆ ಸಾಕಷ್ಟು ಔಷಧೀಯ ಗುಣಗಳನ್ನು ಸಹ ಹೊಂದಿದೆ. ಇದೇ ಕಾರಣಕ್ಕೆ ಪೇರಳೆ ಎಲೆಯನ್ನು ಜಗಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡೋದು. ಇದು ಮಾತ್ರವಲ್ಲದೆ ಪೇರಳೆ ಎಲೆಯ ಚಹಾ (guava leaf tea) ಮಾಡಿ ಕುಡಿಯುವುದು ಕೂಡ ತುಂಬಾನೇ ಪ್ರಯೋಜನಕಾರಿ. ಇದು ಚರ್ಮವನ್ನು ಆರೋಗ್ಯಕವಾಗಿಸುವುದರಿಂದ ಹಿಡಿದು ಕಣ್ಣಿನ ಆರೋಗ್ಯವನ್ನು ಉತ್ತೇಜಿಸುವವರೆಗೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಾಗಿದ್ದರೆ ಈ ಪೇರಳೆ ಎಲೆ ಸಹ ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ ಬನ್ನಿ.

ಪೇರಳೆ ಎಲೆ ಚಹಾವನ್ನು ಮನೆಯಲ್ಲಿ ಹೇಗೆ ತಯಾರಿಸುವುದು:

4-5 ಪೇರಳೆ ಎಲೆಗಳನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ 2 ಕಪ್ ನೀರು ಹಾಕಿ ಚೆನ್ನಾಗಿ ಬಿಸಿ ಮಾಡಿಕೊಳ್ಳಿ. ನೀರು ಕುದಿಯುತ್ತಿರುವಾಗ ತೊಳೆದಿಟ್ಟ ಪೇರಳೆ ಎಲೆಗಳನ್ನು ಸೇರಿಸಿ, ಬಳಿಕ ಕಡಿಮೆ ಉರಿಯಲ್ಲಿ ಅದನ್ನು 10 ರಿಂದ 12 ನಿಮಿಷಗಳ ಕಾಲ ಕುದಿಸಿ. ನಂತರ ಒಂದು ಕಪ್‌ಗೆ ಈ ನೀರನ್ನು ಸೋಸಿದರೆ ಪೇರಳೆ ಟೀ ಸಿದ್ಧ. ನೀವು ಬೇಕಾದರೆ ಇದಕ್ಕೆ  ಜೇನುತುಪ್ಪ ಅಥವಾ ನಿಂಬೆ ರಸ ಸೇರಿಸಬಹುದು.

ಪೇರಳೆ ಎಲೆ ಚಹಾದ ಆರೋಗ್ಯ ಪ್ರಯೋಜನ:

  • ಪೇರಳೆ ಎಲೆಗಳು ವಿಟಮಿನ್ ಎ ಯ ಪ್ರಬಲ, ನೈಸರ್ಗಿಕ ಮೂಲವಾಗಿದ್ದು, ಇದು ದೃಷ್ಟಿ ಸುಧಾರಿಸಲು,  ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
  • ಪೇರಳೆ ಎಲೆ ಚಹಾವು ಹೊಟ್ಟೆಗೆ ನೈಸರ್ಗಿಕ ಔಷಧವಾಗಿ ಕಾರ್ಯನಿರ್ವಹಿಸುತ್ತದೆ. ಈ ಎಲೆಗಳು ಟ್ಯಾನಿನ್‌ಗಳು ಮತ್ತು ಫ್ಲೇವನಾಯ್ಡ್‌ಗಳನ್ನು ಹೊಂದಿದೆ. ಇದರ ಚಹಾ ಕುಡಿಯುವುದರಿಂದ  ಹೊಟ್ಟೆಯ ಉರಿಯೂತ, ಹೊಟ್ಟೆ ಭಾರ, ಗ್ಯಾಸ್‌ , ಆಮ್ಲೀಯತೆ ಅಥವಾ ಉಬ್ಬುವಿಕೆಯ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
  • ಪೇರಳೆ ಎಲೆಗಳ ಸಾರವು ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡುತ್ತದೆ ಮತ್ತು ಕೊಬ್ಬನ್ನು ಸುಡುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ ಎಂದು ಅನೇಕ ಸಂಶೋಧನೆಗಳು ತೋರಿಸಿವೆ. ಅಲ್ಲದೆ ಈ ಚಹಾ  ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಮತ್ತು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತು ಈ ಚಹಾ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್  ಹೆಚ್ಚಿಸಲು ಸಹಾಯ ಮಾಡುತ್ತದೆ. ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸುತ್ತದೆ.
  • ಪೇರಳೆ ಎಲೆ ಚಹಾವು ಮಧುಮೇಹ ರೋಗಿಗಳಿಗೆ ಸಹ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಈ ಚಹಾವು ಪ್ರಿಡಿಯಾಬಿಟಿಸ್ ಮತ್ತು ಟೈಪ್ 2 ಮಧುಮೇಹ ಹೊಂದಿರುವ ರೋಗಿಗಳಿಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.
  • ಪೇರಳೆ ಎಲೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ಹೃದಯ ಸಂಬಂಧಿತ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ಹೃದಯ ಸಂಬಂಧಿ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ಈ ಹಳದಿ ನೀರಿನಿಂದ 1 ನಿಮಿಷದಲ್ಲಿ ಮಲಬದ್ಧತೆಯನ್ನು ನಿವಾರಣೆ ಮಾಡಬಹುದು

ಇದನ್ನೂ ಓದಿ
ಮುಖದ ಗ್ಲೋ ಹೆಚ್ಚಿಸಿಕೊಳ್ಳಬೇಕೇ? ಹಾಗಿದ್ರೆ ಟ್ರೈ ಮಾಡಿ ಈ ಫೇಸ್ ಪ್ಯಾಕ್!
ಈ ಹಳದಿ ನೀರಿನಿಂದ 1 ನಿಮಿಷದಲ್ಲಿ ಮಲಬದ್ಧತೆಯನ್ನು ನಿವಾರಣೆ ಮಾಡಬಹುದು
ಆತಂಕ, ಒತ್ತಡಕ್ಕೆ ಈ ಎಲೆ ಪರಿಹಾರ
ಚಹಾ ಮಾಡುವಾಗ ಎಂದಿಗೂ ಈ ತಪ್ಪುಗಳನ್ನು ಮಾಡಲೇಬೇಡಿ
  • ಪೇರಳೆ ಎಲೆ ಚಹ ಚರ್ಮದ ಆರೋಗ್ಯಕ್ಕೂ ಪ್ರಯೋಜನಕಾರಿ.  ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳು ಮೊಡವೆಗಳನ್ನು ಕಡಿಮೆ ಮಾಡಲು, ಕಲೆಗಳನ್ನು ತೆಗೆದುಹಾಕಲು ಮತ್ತು ಚರ್ಮವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ.
  • ತೂಕ ಇಳಿಕೆಗೂ ಪೇರಳೆ ಎಲೆ ಚಹಾ ಪ್ರಯೋಜನಕಾರಿ. ಪೇರಳೆ ಎಲೆಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್ ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ, ಇದು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅಲ್ಲದೆ, ಈ ಚಹಾ ಹಸಿವನ್ನು ನಿಯಂತ್ರಿಸುತ್ತದೆ ಮತ್ತು ಹೆಚ್ಚುವರಿ ಕೊಬ್ಬಿನ ಶೇಖರಣೆಯನ್ನು ತಡೆಯುತ್ತದೆ. ಪ್ರತಿದಿನ ಈ ಚಹಾವನ್ನು ಸೇವಿಸುವುದರಿಂದ, ನಿಮ್ಮ ತೂಕ ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ