ದೀಪಾವಳಿ ಹಬ್ಬದ ಶುಭಾಶಯಗಳು
Image Credit source: pixabay
ಬೆಳಕಿನ ಹಬ್ಬ ದೀಪಾವಳಿ (Deepavali) ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಈ ಹಬ್ಬವನ್ನು ದೀಪಗಳನ್ನು ಬೆಳಗಿ, ಪಟಾಕಿ ಹಚ್ಚಿ, ಸಿಹಿ ಹಂಚಿ ಸ್ನೇಹಿತರು ಮತ್ತು ಕುಟುಂಬದೊಂದಿದೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಅಲ್ಲದೆ ಈ ದಿನ ಲಕ್ಷ್ಮೀ ದೇವಿಯನ್ನು ಪೂಜಿಸಿ ಮನೆಯನ್ನು ದೀಪಗಳಿಂದ ಅಲಂಕರಿಸುತ್ತಾರೆ. ಈ ಬಾರಿ ನವೆಂಬರ್ 8 ಅಂದರೆ ಇಂದು ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿ ನಿಮ್ಮ ಸ್ನೇಹಿತರು, ಆಪ್ತರಿಗೆ ಸುಂದರವಾದ ಸಂದೇಶವನ್ನು ಕಳುಹಿಸಿ, ಶುಭಾಶಯಗಳನ್ನು ತಿಳಿಸುವ ಮೂಲಕ ಹಬ್ಬದ ಸಂತಸವನ್ನು ಹೆಚ್ಚಿಸಬಹುದು. ಸಂಬಂಧವನ್ನು ಮತ್ತಷ್ಟು ಬಲಪಡಿಸಬಹುದು. ಇಲ್ಲಿದೆ ದೀಪಾವಳಿಯ ಅರ್ಥಪೂರ್ಣ ಶುಭ ಸಂದೇಶಗಳು.
ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಅದ್ಭುತ ಸಂದೇಶಗಳು:
- ದೀಪಗಳ ಬೆಳಕು ನಿಮ್ಮ ಜೀವನದ ಕಷ್ಟಗಳೆಂಬ ಎಲ್ಲಾ ಕತ್ತಲೆಯನ್ನು ಹೋಗಲಾಡಿಸಲಿ. ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು.
- ಅಜ್ಞಾನ ಅಂಧಕಾರ ತೊಡೆದು ಜ್ಞಾನದ ದೀಪ ಹಚ್ಚೋಣ, ದ್ವೇಷ ಅಸೂಯೆ ಬಿಟ್ಟು ಪ್ರೀತಿಯ ದೀಪ ಬೆಳಗೋಣ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು.
- ದೀಪದ ಬೆಳಕಿನಲ್ಲಿ ಕತ್ತಲು ಕರಗುವಂತೆ ನಿಮ್ಮ ಕಷ್ಟಗಳೆಲ್ಲಾ ಕರಗಲಿ, ದೀಪದ ಬೆಳಕಿನಂತೆ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಹೊಳೆಯಲಿ. ನಿಮಗೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
- ಮಣ್ಣಿನ ಹಣತೆಯಲ್ಲಿ ಉರಿಯುವ ಬೆಳಕಿನಂತೆ ನಿಮ್ಮ ಬದುಕು ಬೆಳಗಲಿ. ದೀಪಾವಳಿಯ ಶುಭಾಶಯಗಳು.
- ಈ ದೀಪಾವಳಿಯು ನಿಮ್ಮ ಮನೆಗೆ ದೀಪಗಳ ಬೆಳಕು ಮಾತ್ರವಲ್ಲದೆ ಸಂತೋಷ, ಸಮೃದ್ಧಿ ಮತ್ತು ಯಶಸ್ಸಿನ ಬೆಳಕನ್ನು ತರಲಿ. ನಿಮಗೆ ದೀಪಾವಳಿಯ ಶುಭಾಶಯಗಳು.
- ಪ್ರತಿ ಮನೆಯೂ ಸಂತೋಷದಿಂದ ತುಂಬಿರಲಿ, ಪ್ರತಿ ಮುಖವೂ ನಗುದಿಂದ ತುಂಬಿರಲಿ, ಮತ್ತು ಪ್ರತಿ ದಿನವೂ ನಿಮಗೆ ಹೊಸ ಭರವಸೆಯನ್ನು ತರಲಿ. ದೀಪಾವಳಿಯ ಶುಭಾಶಯಗಳು.
- ಲಕ್ಷ್ಮಿ ದೇವಿಯು ನಿಮ್ಮ ಮನೆಗೆ ಸಂತೋಷ ಮತ್ತು ಸಮೃದ್ಧಿಯನ್ನು ತರಲಿ, ಮತ್ತು ಗಣೇಶನು ನಿಮ್ಮ ಜೀವನದಿಂದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಿ. ನಿಮಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.
- ಈ ಬೆಳಕಿನ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಆರಂಭಗಳು, ಹೊಸ ಭರವಸೆಗಳು ಮತ್ತು ಹೇರಳವಾದ ಸಂತೋಷವನ್ನು ತರಲಿ. ನಿಮ್ಮ ಇಡೀ ಕುಟುಂಬಕ್ಕೆ ದೀಪಾವಳಿಯ ಶುಭಾಶಯಗಳು.
- ದೀಪಾವಳಿಯ ದೀಪಗಳ ಬೆಳಕು ನಿಮ್ಮ ಮನೆ ಬಾಗಿಲು ಮಾತ್ರವಲ್ಲ ನಿಮ್ಮ ಬದುಕನ್ನೂ ಪ್ರಜ್ವಲಿಸಲಿ. ದೀಪಾವಳಿಯ ಶುಭಾಶಯಗಳು.
- ಮೂಡಲಿ ಖುಷಿಯ ಚಿತ್ತಾರ, ದೂರವಾಗಲಿ ಬದುಕಿನ ಅಂಧಕಾರ, ತುಂಬಲಿ ಮನೆ ಮನಗಳಲ್ಲಿ ಸಡಗರ… ಹ್ಯಾಪಿ ದೀಪಾವಳಿ.
- ದೀಪ ಬೆಳಗುವಂಯೆ ಸಂತೋಷ, ಶಾಂತಿ ಮತ್ತು ಯಶಸ್ಸು ನಿಮ್ಮ ಜೀವನದಲ್ಲಿ ಬೆಳಗಲಿ. ದೀಪಾವಳಿ ಹಬ್ಬದ ಶುಭಾಶಯಗಳು.
- ದೀಪಾವಳಿ ನಿಮ್ಮ ಜೀವನದಲ್ಲಿ ಅಪಾರ ಬೆಳಕನ್ನು ತರಲಿ,
ಯಶಸ್ಸು, ಪ್ರೀತಿ ಬೆಳೆಯುತ್ತಲೇ ಇರಲಿ, ನಮ್ಮ ಈ ಸ್ನೇಹ ಶಾಶ್ವತವಾಗಿರಲಿ. ಹ್ಯಾಪಿ ದೀಪಾವಳಿ.
- ದೀಪಗಳ ಬೆಳಕು ನಿಮ್ಮ ಜೀವನದ ಎಲ್ಲಾ ಕತ್ತಲೆಯನ್ನು ಹೋಗಲಾಡಿಸಲಿ, ಮತ್ತು
ಲಕ್ಷ್ಮಿ ದೇವಿಯ ಆಶೀರ್ವಾದವು ನಿಮ್ಮ ಮನೆಯಲ್ಲಿ ಸಂತೋಷವನ್ನು ತುಂಬಲಿ.
ದೀಪಾವಳಿಯ ಶುಭಾಶಯಗಳು.
- ದೀಪಾವಳಿಯ ಈ ಶುಭ ಸಂದರ್ಭದಲ್ಲಿ, ನಿಮ್ಮ ಜೀವನದಲ್ಲಿ ಭರವಸೆಯ ಹೊಸ ದೀಪಗಳು ಬೆಳಗಲಿ, ನಿಮ್ಮ ಜೀವನದಲ್ಲಿ ಪ್ರತಿದಿನವೂ ಸಂತೋಷದಿಂದ ತುಂಬಿರಲಿ, ಮತ್ತು ದೇವರ ಆಶೀರ್ವಾದವು ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲೆ ಸದಾ ಇರಲಿ. ದೀಪಾವಳಿಯ ಶುಭಾಶಯಗಳು.
- ಈ ಶುಭ ದೀಪಾವಳಿ ಹಬ್ಬವು ನಿಮ್ಮ ಜೀವನದಲ್ಲಿ ಹೊಸ ಉತ್ಸಾಹ, ಹೊಸ ಶಕ್ತಿ ಮತ್ತು ಹೊಸ ಭರವಸೆಯನ್ನು ತರಲಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Loading...
{{{html}}}