Health Tips: ತುಳಸಿ ಆರೋಗ್ಯಕ್ಕೆ ಮಾತ್ರವಲ್ಲ, ತ್ವಚೆಗೂ ಸಹಕಾರಿ! ಹೇಗೆಂದು ತಿಳಿಯಿರಿ

Edited By:

Updated on: Oct 17, 2022 | 8:00 AM

ತುಳಸಿಯಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಆ್ಯಂಟಿಆಕ್ಸಿಡೆಂಟ್​ಗಳಿವೆ. ಇದು ಚರ್ಮಕ್ಕೆ ತುಂಬಾ ಸಹಕಾರಿಯಾಗಿದೆ. ಇಂದು ತುಳಸಿಯಿಂದ ಚರ್ಮಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

1 / 5

ತುಳಸಿ ಗಿಡದಲ್ಲಿ ಹಲವು ಔಷಧೀಯ ಗುಣಗಳಿವೆ. ತುಳಸಿ ಎಲೆ ತಿನ್ನುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ. ತುಳಸಿ ಕೇವಲ ಆರೋಗ್ಯವರ್ಧಕ ಮಾತ್ರವಲ್ಲದೆ ತ್ವಚೆಗೂ ಪ್ರಯೋಜನಕಾರಿಯಾಗಿದೆ. ತುಳಸಿಯಲ್ಲಿ ಬೀಟಾ ಕ್ಯಾರೋಟಿನ್ ಮತ್ತು ಆ್ಯಂಟಿಆಕ್ಸಿಡೆಂಟ್​ಗಳಿವೆ. ಇದು ಚರ್ಮಕ್ಕೆ ತುಂಬಾ ಸಹಕಾರಿಯಾಗಿದೆ. ಇಂದು ತುಳಸಿಯಿಂದ ಚರ್ಮಕ್ಕೆ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

2 / 5

ಸುಂದರ ಮುಖ ಯಾರಿಗೆ ಬೇಡ ಹೇಳಿ? ಇದಕ್ಕಾಗಿ ಕೆಲವರು ಬ್ಯೂಟಿ ಪಾರ್ಲರ್‌ಗಳನ್ನು ಸುತ್ತಿದರೆ, ಇನ್ನು ಕೆಲವರು ಮನೆಮದ್ದುಗಳನ್ನು ಉಪಯೋಗಿಸುತ್ತಾರೆ. ತುಳಸಿ ಎಲೆಗಳು ಶುದ್ಧೀಕರಿಸುವ ಗುಣಗಳನ್ನು ಹೊಂದಿವೆ. ನಿಮ್ಮ ತ್ವಚೆ ಹೊಳೆಯಬೇಕೆಂದರೆ ತುಳಸಿಯನ್ನು ಬಳಸಬಹುದು. ತುಳಸಿ ಎಲೆಗಳು ರಕ್ತವನ್ನು ಶುದ್ಧೀಕರಿಸುತ್ತವೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

3 / 5

ತುಳಸಿ ಎಲೆಗಳು ಮತ್ತು ಅದರ ರಸವನ್ನು ಸೇವಿಸುವುದರಿಂದ ವಯಸ್ಸಾದವರಂತೆ ಕಾಣುವುದನ್ನು ಕಡಿಮೆ ಮಾಡಬಹುದು. ತುಳಸಿ ಉತ್ಕರ್ಷಣ ನಿರೋಧಕ ಪರಿಣಾಮವನ್ನು ಹೊಂದಿದೆ. ಇದರಿಂದಾಗಿ ತುಳಸಿ ಅಕಾಲಿಕ ವಯಸ್ಸಾಗುವುದನ್ನು ತಡೆಯುತ್ತದೆ. ಚರ್ಮದ ಮೇಲಿನ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.

4 / 5

ಚರ್ಮ ರೋಗಗಳ ತಡೆಗಟ್ಟುವಿಕೆ: ತುಳಸಿಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮ ರೋಗಗಳನ್ನು ತಡೆಗಟ್ಟುವಲ್ಲಿ ಅದ್ಭುತ ಪರಿಣಾಮವನ್ನು ಹೊಂದಿದೆ. ಗಾಯಗಳನ್ನು ಬೇಗ ವಾಸಿಮಾಡುತ್ತದೆ. ಚರ್ಮ ರೋಗಗಳಿಗೆ ಇದು ಉತ್ತಮ ಔಷಧಿಯಾಗಿ ಕೆಲಸ ಮಾಡುತ್ತದೆ. ಇದು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಮೂಲಕ ತೀವ್ರವಾದ ಚರ್ಮದ ಸಮಸ್ಯೆಗಳನ್ನು ನಿವಾರಿಸುತ್ತದೆ.

5 / 5

ತುಳಸಿ ಎಲೆಗಳಿಂದ ತೆಗೆದ ರಸವು ಬ್ಯಾಕ್ಟೀರಿಯಾ ವಿರೋಧಿ ಪರಿಣಾಮವನ್ನು ಹೊಂದಿದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಮೊಡವೆಗಳು ಕಡಿಮೆಯಾಗುತ್ತದೆ. ಅಲ್ಲದೆ, ಅದರಲ್ಲಿರುವ ಲಿನೋಲಿಕ್ ಆಮ್ಲವು ಉರಿಯೂತದ ಪರಿಣಾಮವನ್ನು ಹೊಂದಿದೆ.

TV9 Web

TV9 Kannada

Read More
Loading...
Unable to load recommendations.
Follow Us