
ಅನೇಕ ಜನರು ಬಟ್ಟೆಗಳ (clothes) ಗುಣಮಟ್ಟ ಹಾಳಾಗುತ್ತದೆ ಅನ್ನೋ ಕಾರಣಕ್ಕೆ ವಾಷಿಂಗ್ ಮಷೀನ್ ಬದಲು ಕೈಯಲ್ಲೇ ಬಟ್ಟೆಗಳನ್ನು ಒಗೆಯುತ್ತಾರೆ. ಹೀಗೆ ಕೈಯಲ್ಲಿ ಬಟ್ಟೆ ಒಗೆಯುವ ಮುನ್ನ ಬಟ್ಟೆಗಳನ್ನು ಒಂದಷ್ಟು ಕಾಲ ಡಿಟರ್ಜೆಂಟ್ ನೀರಿನಲ್ಲಿ ನೆನೆಸಿಡುತ್ತಾರೆ. ಇದರಿಂದ ಕೊಳಕು, ಕಲೆಗಳು, ಬೆವರಿನ ವಾಸನೆ ಸುಲಭವಾಗಿ ನಿವಾರಣೆಯಾಗುತ್ತವೆ. ಆದರೆ ಈ ನೀರಿನಲ್ಲಿ ಎಷ್ಟು ಹೊತ್ತು ಬಟ್ಟೆಗಳನ್ನು ನೆನೆಸಬೇಕು, ಬಟ್ಟೆ ಒಗೆಯುವ ಸರಿಯಾದ ವಿಧಾನ ಯಾವುವು ಎಂಬುದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಈ ಒಂದು ತಪ್ಪಿನಿಂದ ಬಟ್ಟೆಗಳ ಗುಣಮಟ್ಟ ಹಾಳಾಗುವ, ಕಲೆ-ಕೊಳೆಗಳು ಹೋಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಡಿಟರ್ಜೆಂಟ್‌ನಲ್ಲಿ ಬಟ್ಟೆಗಳನ್ನು ಎಷ್ಟು ಹೊತ್ತು ನೆನೆಸಿಡಬೇಕು, ಏನೆಲ್ಲಾ ವಿಷಯಗಳನ್ನು ನೆನಪಿಟ್ಟುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ.
ಸಾಮಾನ್ಯವಾಗಿ, ಬಟ್ಟೆಗಳನ್ನು ಡಿಟರ್ಜೆಂಟ್ ನೀರಿನಲ್ಲಿ 15 ರಿಂದ 30 ನಿಮಿಷಗಳ ಕಾಲ ನೆನೆಸಿದರೆ ಸಾಕು. ಇದು ಬಟ್ಟೆಯಿಂದ ಬರುವ ಸಾಮಾನ್ಯ ಕೊಳಕು ಮತ್ತು ಬೆವರಿನ ಕಲೆಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ. ಬಟ್ಟೆಯ ಪ್ರಕಾರಕ್ಕನುಗುಣವಾಗಿ ನೋಡಿದರೆ,
ಕೆಲವೊಮ್ಮೆ ನಾವು ಬಟ್ಟೆಗಳನ್ನು ಗಂಟೆಗಟ್ಟಲೆ ಡಿಟರ್ಜೆಂಟ್ ನೀರಿನಲ್ಲಿ ನೆನೆಸಿಡುತ್ತೇವೆ. ಇದು ಒಳ್ಳೆಯದಲ್ಲ. ಡಿಟರ್ಜೆಂಟ್‌ಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕೆಲವು ಬಟ್ಟೆಗಳ ಬಣ್ಣ ಮಸುಕಾಗಬಹುದು. ಈ ಸಮಸ್ಯೆ ವಿಶೇಷವಾಗಿ ಗಾಢ ಬಣ್ಣಗಳು ಮತ್ತು ಪ್ರಿಂಟೆಡ್ ಬಟ್ಟೆಗಳಲ್ಲಿ ಕಂಡುಬರುತ್ತದೆ. ಇದಲ್ಲದೆ, ಸೂಕ್ಷ್ಮವಾದ ಬಟ್ಟೆಯ ನಾರುಗಳ ಮೇಲೂ ಸಹ ಪರಿಣಾಮ ಬೀರಬಹುದು. ಆದ್ದರಿಂದ, ರಾತ್ರಿಯಿಡೀ ಬಟ್ಟೆಗಳನ್ನು ಡಿಟರ್ಜೆಂಟ್ ನೀರಿನಲ್ಲಿ ನೆನೆಸುವುದನ್ನು ತಪ್ಪಿಸುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ