ಒಬ್ಬ ವ್ಯಕ್ತಿ ದಿನಕ್ಕೆ ಎಷ್ಟು ಬಾರಿ ಉಸಿರಾಡುತ್ತಾನೆ? ಪ್ರತಿದಿನ ನಮ್ಮ ದೇಹವು ಎಷ್ಟು ಪ್ರಮಾಣದಲ್ಲಿ ಬೆವರುತ್ತದೆ?
TV9 Web | Updated By: preethi shettigar
Updated on:
Sep 20, 2021 | 7:26 AM
ಪ್ರತಿದಿನ ಮನುಷ್ಯ 2000 ಗ್ಯಾಲನ್‌ಗಳಿಗಿಂತ ಹೆಚ್ಚು ಗಾಳಿಯೊಂದಿಗೆ ಉಸಿರಾಟ ಕ್ರಿಯೆ ನಡೆಸುತ್ತಾನೆ. ಉಸಿರಾಡುವ ಆಮ್ಲಜನಕವು ನಿಮ್ಮ ಶ್ವಾಸಕೋಶಕ್ಕೆ ಮತ್ತು ಅಲ್ಲಿಂದ ನಿಮ್ಮ ರಕ್ತಕ್ಕೆ ಹೋಗುತ್ತದೆ.
1 / 5
ಮಾನವ ದೇಹದಲ್ಲಿ ಲಕ್ಷಾಂತರ ಜೀವಕೋಶಗಳು, ರಕ್ತ, ನೂರಾರು ಮೂಳೆಗಳು ಮತ್ತು ಇತರ ಅನೇಕ ಅಂಶಗಳಿದೆ. ನಮ್ಮ ದೇಹವನ್ನು ಸ್ಥಿರವಾಗಿಡಲು ಇವೆಲ್ಲವೂ ಕೂಡ ಸಹಾಯ ಮಾಡುತ್ತವೆ. ಆದರೆ ನಮ್ಮ ದೇಹದಲ್ಲಿ ನಡೆಯುವ ಅನೇಕ ಕ್ರಿಯೆಗಳ ಬಗ್ಗೆ ನಾವು ಗಮನಿಸುವುದೇ ಇಲ್ಲ. ಇವುಗಳಲ್ಲಿ ಒಂದು ಕ್ರಮವೆಂದರೆ ಉಸಿರಾಟ. ಅದು ಇಲ್ಲದೆ, ನಾವು ನಮ್ಮ ಜೀವನವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಒಬ್ಬ ವ್ಯಕ್ತಿಯು 24 ಗಂಟೆಗಳಲ್ಲಿ ಎಷ್ಟು ಬಾರಿ ಉಸಿರಾಡುತ್ತಾನೆ ಎಂದು ನಿಮಗೆ ತಿಳಿದಿದೆಯೇ? ಇದನ್ನು ತಿಳಿಯುವುದು ಮುಖ್ಯ.
2 / 5
ಉಸಿರಾಟ
3 / 5
ಪ್ರತಿದಿನ ಮನುಷ್ಯ 2000 ಗ್ಯಾಲನ್‌ಗಳಿಗಿಂತ ಹೆಚ್ಚು ಗಾಳಿಯೊಂದಿಗೆ ಉಸಿರಾಟ ಕ್ರಿಯೆ ನಡೆಸುತ್ತಾನೆ. ಉಸಿರಾಡುವ ಆಮ್ಲಜನಕವು ನಿಮ್ಮ ಶ್ವಾಸಕೋಶಕ್ಕೆ ಮತ್ತು ಅಲ್ಲಿಂದ ನಿಮ್ಮ ರಕ್ತಕ್ಕೆ ಹೋಗುತ್ತದೆ. ನಂತರ ರಕ್ತ ಪರಿಚಲನೆಯೊಂದಿಗೆ ದೇಹದ ಎಲ್ಲಾ ಜೀವಕೋಶಗಳಿಗೆ ಸಾಗಿಸಲಾಗುತ್ತದೆ.
4 / 5
ಸಾಮಾನ್ಯವಾಗಿ ದೈಹಿಕ ಚಟುವಟಿಕೆಯ ಸಮಯದಲ್ಲಿ ಸರಾಸರಿ ವ್ಯಕ್ತಿಯು ಗಂಟೆಗೆ 0.5-2 ಲೀಟರ್ಗಳಷ್ಟು ಬೆವರುತ್ತಾನೆ. ಆದರೆ ಕೆಲವು ಅಧ್ಯಯನಗಳ ಪ್ರಕಾರ, ಮನುಷ್ಯನ ದೇಹದಿಂದ ದಿನಕ್ಕೆ ಕನಿಷ್ಠ 3 ಲೀಟರ್ ಬೆವರು ಹೊರಬರುತ್ತದೆ. ಬೆವರು ಎಂದರೆ ದೇಹದಿಂದ ಹೊರಬರುವ ನೀರಿನ ಸಣ್ಣ ಹನಿಗಳು. ಅವು ಅಮೋನಿಯಾ, ಯೂರಿಯಾ, ಉಪ್ಪು ಮತ್ತು ಸಕ್ಕರೆ ಇತ್ಯಾದಿಗಳನ್ನು ಒಳಗೊಂಡಿರುತ್ತವೆ. ನಮ್ಮ ದೇಹದ ಉಷ್ಣತೆಯು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ. ದೇಹದ ಉಷ್ಣತೆಯನ್ನು ನಿಯಂತ್ರಿಸಲು ಬೆವರು ಗ್ರಂಥಿಗಳು ಸಕ್ರಿಯಗೊಳ್ಳುತ್ತವೆ.
5 / 5
ಬೆವರುವಿಕೆಯು ನಮ್ಮ ದೇಹದಿಂದ ವಿಷಕಾರಿ ಅಂಶಗಳನ್ನು ತೆಗೆದುಹಾಕುತ್ತದೆ. ಅನೇಕ ಸಂಶೋಧನೆಗಳ ಪ್ರಕಾರ, ಉಪ್ಪು, ಸಕ್ಕರೆಯ ಹೊರತಾಗಿ ಕೊಲೆಸ್ಟ್ರಾಲ್ ಮತ್ತು ಮದ್ಯದಂತಹ ಪದಾರ್ಥಗಳು ಮಾನವನ ಬೆವರಿನಲ್ಲಿ ಕಂಡುಬರುತ್ತವೆ. ಬೆವರುವುದರಿಂದ ದೇಹವು ಸ್ವಚ್ಛವಾಗಿರುತ್ತದೆ ಮತ್ತು ಎಲ್ಲಾ ಅಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಬೆವರಿದ ನಂತರ, ಚರ್ಮವು ಪಾರ್ಶೈನ್ ಆಗುತ್ತದೆ. ಏಕೆಂದರೆ ಬೆವರುವಿಕೆಯಿಂದಾಗಿ ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ.