ಈ ಸಿಂಪಲ್ ಟಿಪ್​ನಿಂದ ನಿಮ್ಮ ಸ್ವಿಚ್‌ಬೋರ್ಡ್ ಅನ್ನು ಸೆಕೆಂಡುಗಳಲ್ಲಿ ಹೊಳೆಯುವಂತೆ ಮಾಡಿ

ಅಡುಗೆಮನೆಯ ಸ್ವಿಚ್ ಬೋರ್ಡ್ ಮೇಲೆ ಎಣ್ಣೆಯ ಜಿಡ್ಡು, ಹೊಗೆ ಮತ್ತು ಧೂಳು ಸೇರಿ ಕೊಳೆಯಾಗುವುದು ಸಾಮಾನ್ಯ. ಆದರೆ ಇದನ್ನು ಸ್ವಚ್ಛಗೊಳಿಸುವಾಗ ನೀರು ಬಳಸಿದರೆ ವಿದ್ಯುತ್ ಅಪಾಯ ಎದುರಾಗಬಹುದು. ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಒಣ ಬಟ್ಟೆ ಬಳಸಿ ಹಾಗೂ ಬೋರ್ಡ್ ಒಳಗೆ ತೇವಾಂಶ ಹೋಗದಂತೆ ಎಚ್ಚರಿಕೆಯಿಂದ ಸ್ವಚ್ಛಗೊಳಿಸುವ ವಿಧಾನ ಇಲ್ಲಿದೆ.

ಈ ಸಿಂಪಲ್ ಟಿಪ್​ನಿಂದ ನಿಮ್ಮ ಸ್ವಿಚ್‌ಬೋರ್ಡ್ ಅನ್ನು ಸೆಕೆಂಡುಗಳಲ್ಲಿ ಹೊಳೆಯುವಂತೆ ಮಾಡಿ
Switch Board Clean
Edited By:

Updated on: Sep 18, 2026 | 1:20 PM

ಮುಖ್ಯಾಂಶಗಳು

  • ಸ್ವಿಚ್ ಬೋರ್ಡ್ ಮೇಲಿನ ಜಿಡ್ಡು ಹೀಗೆ ತೆಗೆಯಿರಿ!
  • ನೀರು ಬಳಸಿ ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸಬೇಡಿ!
  • ಸ್ವಚ್ಛಗೊಳಿಸುವ ಮುನ್ನ ವಿದ್ಯುತ್ ಆಫ್ ಮಾಡಿ!

ಮನೆಯಲ್ಲಿರುವ (Home Clean) ಸ್ವಿಚ್ ಬೋರ್ಡ್‌ಗಳ ಮೇಲೆ ದಿನಕಳೆದಂತೆ ಧೂಳು ಮತ್ತು ಕೊಳೆ ಸಂಗ್ರಹವಾಗುವುದು ಸಾಮಾನ್ಯ. ಅದರಲ್ಲೂ ಅಡುಗೆಮನೆಯಲ್ಲಿರುವ ಸ್ವಿಚ್ ಬೋರ್ಡ್‌ಗಳ ಮೇಲೆ ಎಣ್ಣೆಯ ಜಿಡ್ಡು, ಹೊಗೆ ಹಾಗೂ ಧೂಳು ಸೇರಿಕೊಂಡು ಬೋರ್ಡ್‌ಗಳು ಕಪ್ಪಾಗಿ ಕಾಣಿಸಬಹುದು. ಎಷ್ಟೇ ಉಜ್ಜಿದರೂ ಕೆಲವು ಕಲೆಗಳು ಸುಲಭವಾಗಿ ಹೋಗುವುದಿಲ್ಲ. ಆದರೆ ಇದನ್ನು ಸ್ವಚ್ಛಗೊಳಿಸುವಾಗ ವಿದ್ಯುತ್ ಸುರಕ್ಷತೆಯ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವುದು ಮುಖ್ಯ.

ಮೊದಲು ವಿದ್ಯುತ್ ಸಂಪರ್ಕ ಕಡಿತಗೊಳಿಸಿ

ಸ್ವಿಚ್ ಬೋರ್ಡ್ ಸ್ವಚ್ಛಗೊಳಿಸುವ ಮೊದಲು ಮನೆಯ ಮುಖ್ಯ ವಿದ್ಯುತ್ ಸ್ವಿಚ್‌ನ್ನು ಆಫ್ ಮಾಡಬೇಕು. ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಂಡಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಸ್ವಚ್ಛಗೊಳಿಸುವ ಕೆಲಸ ಆರಂಭಿಸಿ. ತೇವವಾದ ಕೈಗಳಿಂದ ಸ್ವಿಚ್ ಬೋರ್ಡ್ ಮುಟ್ಟಬಾರದು. ವಿದ್ಯುತ್ ಇರುವ ಸಂದರ್ಭದಲ್ಲಿ ನೀರು ಅಥವಾ ತೇವಾಂಶ ಬಳಸುವುದು ಅಪಾಯಕಾರಿಯಾಗಬಹುದು.

ಮೊದಲು ಒಣ ಬಟ್ಟೆಯಿಂದ ಧೂಳು ತೆಗೆಯಿರಿ

ಸ್ವಚ್ಛಗೊಳಿಸುವ ಮೊದಲ ಹಂತವಾಗಿ ಮೃದುವಾದ ಒಣ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಿ ಬೋರ್ಡ್ ಮೇಲಿರುವ ಧೂಳನ್ನು ನಿಧಾನವಾಗಿ ತೆಗೆಯಿರಿ. ಸ್ವಿಚ್‌ಗಳ ಅಂಚುಗಳಲ್ಲಿ ಸಿಲುಕಿರುವ ಧೂಳನ್ನು ತೆಗೆಯಲು ಮೃದುವಾದ ಪೇಂಟಿಂಗ್ ಬ್ರಷ್‌ನಂತಹ ಸಾಧನವನ್ನೂ ಬಳಸಬಹುದು. ಈ ಹಂತದಲ್ಲಿ ನೀರು ಅಥವಾ ಯಾವುದೇ ದ್ರವ ಕ್ಲೀನರ್‌ಗಳನ್ನು ನೇರವಾಗಿ ಬಳಸಬಾರದು.

ಕ್ವಿಕ್ ವೈಟ್ ಲಾಸ್​ನಿಂದ ದೇಹದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೆ? ಕೂದಲು, ಮುಖ, ಸ್ನಾಯುಗಳ ಮೇಲೂ ಪರಿಣಾಮ!

ಜಿಡ್ಡು ಇದ್ದರೆ ಹೊರಭಾಗ ಮಾತ್ರ ಒರೆಸಿ

ಸ್ವಿಚ್ ಬಟನ್‌ಗಳ ಹೊರಭಾಗದಲ್ಲಿ ಹೆಚ್ಚು ಕೊಳೆ ಅಥವಾ ಜಿಡ್ಡು ಇದ್ದರೆ, ಬಟ್ಟೆಯನ್ನು ಸ್ವಲ್ಪ ಮಾತ್ರ ತೇವಗೊಳಿಸಿ, ಅದರಲ್ಲಿ ನೀರು ಉಳಿಯದಂತೆ ಚೆನ್ನಾಗಿ ಹಿಂಡಿ. ನಂತರ ಸ್ವಿಚ್ ಬೋರ್ಡ್‌ನ ಹೊರಭಾಗದ ಪ್ಲಾಸ್ಟಿಕ್ ಭಾಗವನ್ನು ಮಾತ್ರ ನಿಧಾನವಾಗಿ ಒರೆಸಬಹುದು. ಸ್ವಚ್ಛಗೊಳಿಸಿದ ತಕ್ಷಣ ಒಣ ಬಟ್ಟೆಯಿಂದ ಮತ್ತೆ ಒರೆಸಿ. ಮುಖ್ಯವಾಗಿ ನೀರಿನ ಹನಿಗಳು ಸ್ವಿಚ್‌ಗಳ ನಡುವಿನ ಸಂದು ಅಥವಾ ಒಳಭಾಗಕ್ಕೆ ಹೋಗದಂತೆ ಎಚ್ಚರಿಕೆ ವಹಿಸಬೇಕು.

ನೀರನ್ನು ನೇರವಾಗಿ ಸ್ಪ್ರೇ ಮಾಡಬೇಡಿ

ಸ್ವಿಚ್ ಬೋರ್ಡ್ ಮೇಲೆ ನೇರವಾಗಿ ನೀರು ಅಥವಾ ಕ್ಲೀನಿಂಗ್ ದ್ರವವನ್ನು ಸ್ಪ್ರೇ ಮಾಡಬಾರದು. ಒದ್ದೆಯಾದ ಬಟ್ಟೆ ಅಥವಾ ಸ್ಪಾಂಜ್‌ನಿಂದ ಬೋರ್ಡ್‌ನ್ನು ಜೋರಾಗಿ ಉಜ್ಜುವುದನ್ನೂ ತಪ್ಪಿಸಬೇಕು. ಕಲೆ ತೆಗೆಯಲು ಚಾಕು, ಪಿನ್ ಅಥವಾ ಇತರ ಹರಿತವಾದ ವಸ್ತುಗಳನ್ನು ಬಳಸುವುದು ಅಪಾಯಕಾರಿ. ಇವುಗಳಿಂದ ಬೋರ್ಡ್‌ಗೆ ಹಾನಿಯಾಗುವುದರ ಜೊತೆಗೆ ವಿದ್ಯುತ್ ಸಂಪರ್ಕದ ಭಾಗಗಳಿಗೂ ಸಮಸ್ಯೆಯಾಗಬಹುದು.

ಸ್ವಚ್ಛಗೊಳಿಸುವ ಸಂದರ್ಭದಲ್ಲಿ ನೀರು ಅಥವಾ ತೇವಾಂಶ ಬೋರ್ಡ್‌ನ ಒಳಭಾಗಕ್ಕೆ ಹೋಗಿದೆ ಎಂದು ಅನುಮಾನ ಬಂದರೆ ತಕ್ಷಣ ವಿದ್ಯುತ್ ಸಂಪರ್ಕವನ್ನು ಆನ್ ಮಾಡಬಾರದು. ಎಲೆಕ್ಟ್ರಿಷಿಯನ್‌ರನ್ನು ಕರೆಸಿ ಬೋರ್ಡ್‌ನ್ನು ಪರಿಶೀಲಿಸಿದ ನಂತರವೇ ವಿದ್ಯುತ್ ಸಂಪರ್ಕ ನೀಡುವುದು ಸುರಕ್ಷಿತ. ಅದೇ ರೀತಿ ಸ್ವಿಚ್ ಬೋರ್ಡ್‌ನಲ್ಲಿ ಬಿರುಕು, ಸುಟ್ಟ ಗುರುತು ಅಥವಾ ಸಡಿಲ ಸಂಪರ್ಕ ಕಂಡುಬಂದರೆ ಮೊದಲು ಎಲೆಕ್ಟ್ರಿಷಿಯನ್‌ರಿಂದ ಸರಿಪಡಿಸಿಕೊಳ್ಳಿ ಅಥವಾ ಅಗತ್ಯವಿದ್ದರೆ ಹೊಸ ಬೋರ್ಡ್ ಅಳವಡಿಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us