ಮೈಸೂರು ಸ್ಪೆಷಲ್​ ಬಜ್ಜಿ; ಸಂಜೆ ಸ್ನ್ಯಾಕ್ಸ್​ಗೆ ಮಾಡಿ ಸವಿಯಿರಿ

Edited By:

Updated on: Aug 28, 2021 | 8:47 AM

ಬಜ್ಜಿ​​  10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಮೈಸೂರು ಸ್ಪೆಷಲ್​ ಬಜ್ಜಿ​​​  ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಲಾಕ್​ಡೌನ್​ ಕಾಲಘಟ್ಟದಲ್ಲಿ ಹೊರಗಿನ ತಿಂಡಿಗಳನ್ನು ತಿನ್ನುವುದು ಅಷ್ಟು ಸಮಂಜಸವಲ್ಲ. ಹಾಗಂತ ರುಚಿಕರವಾದ ಪಿಜ್ಜಾ, ಬರ್ಗರ್, ನಿಪ್ಪಟ್ಟು, ಬಜ್ಜಿ​​ ಇವುಗಳನ್ನು ಬಿಟ್ಟು ಇರುವುದು ಹಲವರಿಗೆ ಕಷ್ಟ ಎನಿಸಬಹುದು. ಆದರೆ ಯೋಚಿಸುವ ಅಗತ್ಯ ಇಲ್ಲ. ಸರಳ ವಿಧಾನದ ಜತೆಗೆ ಇವುಗಳನ್ನು ಮನೆಯಲ್ಲಿಯೇ ಮಾಡಬಹುದು. ಅದರಲ್ಲೂ ಬಜ್ಜಿ​​  10 ನಿಮಿಷಗಳಲ್ಲಿ ಮನೆಯಲ್ಲಿಯೇ ತಯಾರಿಸಬಹುದು. ಹಾಗಿದ್ದರೆ ಮೈಸೂರು ಸ್ಪೆಷಲ್​ ಬಜ್ಜಿ​​​  ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಮೈಸೂರು ಬಜ್ಜಿ ಮಾಡಲು ಬೇಕಾಗುವ ಸಾಮಾಗ್ರಿಗಳು ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಜೀರಿಗೆ, ಉಪ್ಪು, ಅಡಿಗೆ ಸೋಡಾ, ಮೈದಾ ಹಿಟ್ಟು, ಮೊಸರು

ಮೈಸೂರು ಬಜ್ಜಿ ಮಾಡುವ ವಿಧಾನ
ಒಂದು ಬೌಲ್​ಗೆ ಮೈದಾ ಹಿಟ್ಟು, ಮೊಸರು, ಜೀರಿಗೆ, ಉಪ್ಪು, ಅಡಿಗೆ ಸೋಡಾ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಒಂದು ಬಣಾಲೆಗೆ ಎಣ್ಣೆ ಹಾಕಿ ಅದು ಕಾದ ಮೇಲೆ ಬಜ್ಜಿ ಆಕಾರದಲ್ಲಿ ಉಂಡೆ ಮಾಡಿ ಕರಿಯಿರಿ. ಈಗ ರುಚಿಕರವಾದ ಮೈಸೂರು ಬಜ್ಜಿ ಸವಿಯಲು ಸಿದ್ಧ.

ಇದನ್ನೂ ಓದಿ:

ಗೋಧಿ ಹಿಟ್ಟು ಉಂಡೆ; ಸರಳ ವಿಧಾನದಲ್ಲಿ ಮಾಡಿ ಸವಿಯಿರಿ

ಚಟ್​ಪಟ್;​ ಸರಳವಾದ ವಿಧಾನದಲ್ಲಿ ಇಂದೇ ಮಾಡಿ ಸವಿಯಿರಿ

Loading...
Unable to load recommendations.
Follow Us
TV9 Web

TV9 Kannada

Read More