ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು (International Plastic Free Day) ಪ್ರತಿ ವಷ ಜುಲೈ 3 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಹಿಂದಿನ ಮುಖ್ಯ ಉದ್ದೇಶವೆಂದರೆ ಪ್ಲಾಸ್ಟಿಕ್ ಮಾಲಿನ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು. ಏಕೆಂದರೆ ಈ ಜೈವಿಕ ವಿಘಟನೀಯವಲ್ಲದ ಏಕ ಬಳಕೆಯ ಪ್ಲಾಸ್ಟಿಕ್ ಪರಿಸರಕ್ಕೆ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ. ನಾವು ಎಸೆಯುವ ಪ್ಲಾಸ್ಟಿಕ್ ತ್ಯಾಜ್ಯಗಳು ಮಣ್ಣಿನಲ್ಲಿ ಕರಗದೆ ಸಾವಿರಾರು ವರ್ಷಗಳವರೆಗೆ ಹಾಗೆಯೇ ಉಳಿದುಬಿಡುತ್ತದೆ. ಅಲ್ಲದೆ ಈ ಪ್ಲಾಸ್ಟಿಕ್ಗಳು ಸಮುದ್ರ ಜೀವಿಗಳಿಗೂ ಹಾಗೂ ಭೂಮಿಯ ಮೆಲಿನ ಇತರ ಜೀವಿಗಳಿಗೂ ಹಾನಿಕಾರಕವಾಗಿದೆ. ಹಾಗಾಗಿ ಪ್ರಕೃತಿಯನ್ನು ಸಂರಕ್ಷಿಸುವ ಹಾಗೂ ಪರಿಸರ ಸ್ನೇಹಿ ವಸ್ತುಗಳ ಬಳಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ಲಾಸ್ಟಿಕ್ ಮುಕ್ತದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು ಪ್ರತಿವರ್ಷ ಜುಲೈ 3 ರಂದು ಆಚರಿಸಲಾಗುತ್ತದೆ. ‘ಬ್ಯಾಗ್ ಫ್ರೀ ವರ್ಲ್ಡ್’ ಅಭಿಯಾನದಿಂದ ಈ ಉಪಕ್ರಮವನ್ನು ಪ್ರಾರಂಭಿಸಲಾಯಿತು. ಇದು ಏಕ ಬಳಕೆಯ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಒಂದು ಆಂದೋಲನವಾಗಿದೆ. 2008 ರ ಜುಲೈ 3ರಂದು ‘ಝೀರೋ ವೇಸ್ಟ್ ಯುರೋಪ್’ ಆಂದೋಲನದ ಸದಸ್ಯರಾದ ರೆಝೆರೊ ಅವರು ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನದ ಆಚರಣೆಗೆ ಚಾಲನೆ ನೀಡಿದರು. ನಂತರ ಪ್ರಪಂಚದಾದ್ಯಂತ ಅನೇಕ ದೇಶಗಳು ಈ ಆಂದೋಲನಕ್ಕೆ ಬೆಂಬಲ ನೀಡಿತು. ಅಂದಿನಿಂದ ಜನರಿಗೆ ಪ್ಲಾಸ್ಟಿಕ್ ನಿಂದ ಉಂಟಾಗುವ ಪರಿಸರ ಹಾನಿಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಚೀಲ ಮುಕ್ತ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಈ ಬಾರಿಯ ಅಂತರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತ ದಿನಕ್ಕೆ ಯಾವುದೇ ನಿರ್ದಿಷ್ಟ ಥೀಮ್ ಇಲ್ಲ. ಆದರೆ ಪ್ರತಿದಿನವು ಪ್ಲಾಸ್ಟಿಕ್ ಮುಕ್ತ ಜಗತ್ತನ್ನು ಮತ್ತು ಸಮರ್ಥನೀಯ ಪರಿಹಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಪ್ಲಾಸ್ಟಿಕ್ ಚೀಲಗಳ ಬಳಕೆ ನಮ್ಮ ಪರಿಸರದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತದೆ. ನಾವು ಬಳಕೆ ಮಾಡಿ ಎಸೆಯುವ ಪ್ಲಾಸ್ಟಿಕ್ ಗಳು ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷ ತೆಗೆದುಕೊಳ್ಳುತ್ತದೆ. ಅದು ಮಾಲಿನ್ಯದ ಪ್ರಮುಖ ಮೂಲವಾಗಿದ್ದು, ಕಾಡು, ಸಮುದ್ರ ಜೀವಿಗಳಿಗೆ ಹಾನಿಯುಂಟುಮಾಡುತ್ತವೆ. ಮತ್ತು ನಮ್ಮ ಸ್ವಚ್ಛ ಪರಿಸರ ವ್ಯವಸ್ಥೆಯ ನಾಶಕ್ಕೆ ಕಾರಣವಾಗುತ್ತದೆ.
ಇದನ್ನೂ ಓದಿ: International Day of the Tropics 2022: ಅಂತಾರಾಷ್ಟ್ರೀಯ ಉಷ್ಣವಲಯ ಪ್ರದೇಶಗಳ ದಿನ ಮಹತ್ವ, ಆಚರಣೆ
ಇಂದು ಮಾರುಕಟ್ಟೆಯಲ್ಲಿ ಪೇಪರ್ ಬ್ಯಾಗ್ಗಳು, ಮರಬಳಕೆ ಮಾಡಬಹುದಾದ ಹತ್ತಿ ಚೀಲಗಳು ಮುಂತಾದ ಹಲವು ಪರ್ಯಾಯಗಳು ಲಭ್ಯವಿದೆ. ಸೆಣಬು ಹತ್ತಿ ಅಥವಾ ಇತರ ವಸ್ತುಗಳಿಂದ ಮಾಡಲಾದ ಮರುಬಳಕೆ ಮಾಡಬಹುದಾದ ಚೀಲಗಳು ಸಾಮಾನ್ಯ ಪರ್ಯಾಯಗಳಲ್ಲಿ ಒಂದಾಗಿದೆ. ಈ ಚೀಲಗಳು ಬಾಳಿಕೆ ಬರುವುದು ಮಾತ್ರವ್ಲದೆ ಅವುಗಳನ್ನು ಮರುಬಳಕೆ ಮಾಡಬಹುದಾಗಿದೆ. ಮತ್ತೊಂದು ಪರ್ಯಾಯವೆಂದರೆ ಕಾಗದದ ಚೀಲಗಳು ಅವುಗಳು ಜೈವಿಕ ವಿಘಟನೀಯ ಮತ್ತು ಮರುಬಳಕೆ ಮಾಡಬಹುದಾದ ಚೀಲಗಳಾಗಿವೆ.
ಇದನ್ನೂ ಓದಿ:
ಅಂತರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ಚೀಲ ದಿನವು ಪ್ಲಾಸ್ಟಿಕ್ ಚೀಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಸಮರ್ಥನೀಯ ಪರ್ಯಾಯಗಳನ್ನು ಉತ್ತೇಜಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಾಮೂಹಿಕ ಪ್ರಜ್ಞೆಯನ್ನು ಸೃಷ್ಟಿಸುವ ಗುರಿಯನು ಹೊಂದಿದೆ. ಪ್ರತಿದಿನವು ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ರೂಪಿಸಲು ಪ್ಲಾಸ್ಟಿಕ್ ಚೀಲಗಳ ಬಳಕೆ ಮಾಡದೆ ಅದರ ಪರ್ಯಾಯವಾಗಿ ಪರಿಸರ ಸ್ನೇಹಿ ಚೀಲಗಳನ್ನು ಉಪಯೋಗಿಸಲು ಪ್ರೋತ್ಸಾಹಿಸುತ್ತದೆ. ಹಾಗೂ ಪರಿಸರ, ವನ್ಯಜೀವಿಗಳು ಮತ್ತು ಮಾನವರ ಆರೋಗ್ಯದ ಮೇಲೆ ಪ್ಲಾಸ್ಟಿಕ್ ಚೀಲಗಳಿಂದ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ದಿನ ಇದಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ