ಸಾಂದರ್ಭಿಕ ಚಿತ್ರ
ಮನೆಯಲ್ಲಿ ಬೇರೆ ಯಾವುದೇ ತರಕಾರಿಯಿಲ್ಲದೆ ಹೋದರೂ ಆಲೂಗಡ್ಡೆಯಿದ್ದು ಬಿಟ್ಟರೆ ರುಚಿಕರವಾದ ಸಾಂಬಾರ್ ಮಾಡಬಹುದು. ಈ ದೋಸೆಗೆ ಆಲೂಗಡ್ಡೆ ಪಲ್ಯ ಬೆಸ್ಟ್ ಕಾಂಬಿನೇಶನ್ ಎನ್ನಬಹುದು. ಆದರೆ ಆಲೂಗಡ್ಡೆ ಹಾಗೆಯೇ ಇಟ್ಟುಬಿಟ್ಟರೆ ಬೇಗನೇ ಕೊಳೆತು ಹೋಗುತ್ತದೆ. ತಂಪಾದ ವಾತಾವರಣಕ್ಕೆ ಮೊಳಕೆಯೊಡೆಯುತ್ತದೆ. ಆದರೆ ಈ ವಿಧಾನ ಅನುಸರಿಸಿದರೆ ಆಲೂಗಡ್ಡೆ ಹಾಳಾಗದೇ, ಮೊಳಕೆಯೊಡೆಯದಂತೆ ಅನೇಕ ತಿಂಗಳುಗಳ ಕಾಲ ಶೇಖರಿಸಿ ಇಡಬಹುದು.
- ಆಲೂಗಡ್ಡೆಯಲ್ಲಿ ಮೊಳಕೆಯೊಡೆಯುವುದನ್ನು ತಪ್ಪಿಸಲು ಅತ್ಯುತ್ತಮ ಮಾರ್ಗವೆಂದರೆ ಅವುಗಳನ್ನು ದಾಸ್ತಾನು ಮಾಡುವುದನ್ನು ತಪ್ಪಿಸುವುದು. ಹೀಗಾಗಿ ಅವಶ್ಯಕತೆಗಳಿಗೆ ಅನುಗುಣವಾಗಿ ಖರೀದಿಸುವುದು ಉತ್ತಮ.
- ಆಲೂಗಡ್ಡೆಗಳನ್ನು ತಂಪಾದ, ಗಾಢವಾದ ಮತ್ತು ಚೆನ್ನಾಗಿ ಗಾಳಿ ಇರುವ ಜಾಗದಲ್ಲಿ ಶೇಖರಿಸಿಡಬೇಕು. ರೆಫ್ರಿಜರೇಟರ್ನಲ್ಲಿ ಸಂಗ್ರಹಿಸುವುದನ್ನು ತಪ್ಪಿಸಿ. ತಂಪಾದ ವಾತಾವರಣವು ಪಿಷ್ಟವನ್ನು ಸಕ್ಕರೆಯಾಗಿ ಪರಿವರ್ತಿಸುತ್ತದೆ, ಇದರಿಂದ ರುಚಿಯನ್ನು ಬದಲಾಗುತ್ತದೆ.
- ಹೆಚ್ಚುವರಿ ತೇವಾಂಶವು ಮೊಳಕೆಯೊಡೆಯಲು ಕಾರಣವಾಗುತ್ತದೆ. ಹೀಗಾಗಿ ಮುಚ್ಚಿದ ಪ್ಲಾಸ್ಟಿಕ್ ಚೀಲಗಳ ಬದಲಿಗೆ ಕಾಗದದ ಚೀಲ, ಗೋಣಿ ಚೀಲ ಹಾಗೂ ಬುಟ್ಟಿಯಂತಹ ಗಾಳಿಯಾಡುವ ಕಂಟೇನರ್ನಲ್ಲಿ ಆಲೂಗಡ್ಡೆ ಸಂಗ್ರಹಿಸಿಡುವುದು ಒಳ್ಳೆಯದು.
- ಆಲೂಗಡ್ಡೆಯನ್ನು ಈರುಳ್ಳಿ ಅಥವಾ ಬಾಳೆಹಣ್ಣಿನೊಂದಿಗೆ ಶೇಖರಿಸಬೇಡಿ. ಇವುಗಳು ಎಥಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತವೆ, ಇದರಿಂದ ಆಲೂಗಡ್ಡೆ ವೇಗವಾಗಿ ಮೊಳಕೆಯೊಡೆಯುತ್ತವೆ.
- ಕಪ್ಪಾದ ಕಲೆಯಿರುವ ಹಾಗೂ ಹಾಳಾದ ಆಲೂಗಡ್ಡೆಯನ್ನು ಖರೀದಿಸಬೇಡಿ. ಮಾರುಕಟ್ಟೆಯಿಂದ ತಂದ ಈ ತರಕಾರಿಯನ್ನು ತಂಪಾದ, ಶುಷ್ಕ ಮತ್ತು ಡಾರ್ಕ್ ಆದ ಸ್ಥಳದಲ್ಲಿ ಸಂಗ್ರಹಿಸಬೇಕು.
- ಆಲೂಗಡ್ಡೆಗಳನ್ನು ಸೂರ್ಯನ ಬೆಳಕಿನಿಂದ ಸಾಧ್ಯವಾದಷ್ಟು ದೂರವಿಡುವುದು ಒಳ್ಳೆಯದು. ಹೆಚ್ಚಿನ ಬೆಳಕು ಹಸಿರೀಕರಣವನ್ನು ಪ್ರಚೋದಿಸಿ ಕ್ಲೋರೊಫಿಲ್ ಅನ್ನು ಉತ್ಪಾದಿಸುತ್ತದೆ. ಹಸಿರುಗೊಳಿಸುವಿಕೆಯು ಆಲೂಗಡ್ಡೆಯನ್ನು ಕಹಿಯಾಗಿಸುತ್ತದೆ, ಇದರಿಂದ ರುಚಿಯು ಬದಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ