ಸಿಹಿ ತಿನಿಸುಗಳಿಲ್ಲದೇ ಭಾರತೀಯ ಹಬ್ಬವು ಸಂಪೂರ್ಣಗೊಳ್ಳುವುದಿಲ್ಲ. ಸಿಹಿ ಹಂಚುತ್ತಾ ಹಬ್ಬವನ್ನು ಖುಷಿಯಿಂದ ಸಂಭ್ರಮಿಸುತ್ತಾರೆ ಭಾರತೀಯರು. ಕೃಷ್ಣ ಜನ್ಮಾಷ್ಟಮಿ ಹಬ್ಬದಂದು ಸಿಹಿ ತಿನ್ನಬೇಕೆಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಆರೋಗ್ಯ ತೊಂದರೆಗಳಿಂದಾಗಿ ಕೆಲವರು ಸಿಹಿ ತಿನ್ನುವ ಆಸೆಯನ್ನು ಕೈಬಿಡಬೇಕಾಗುತ್ತದೆ. ಹಾಗೆಂದು ಚಿಂತಿಸಬೇಕಿಲ್ಲ. ಹಬ್ಬದ ದಿನದಂದು ನೀವೂ ಸಿಹಿ ತಿನ್ನಬಹುದು. ಮಧುಮೇಹ ಸಮಸ್ಯೆ ಇರುವವರು ದಿಢೀರ್ಆಗಿ ಸಿಗಿ ತಯಾರಿಸಿ ಸವಿಯಬಹುದಾದ ಸಿಹಿ ತಿಂಡಿಗಳು ಯಾವುವುದು ಎಂಬುದನ್ನು ತಿಳಿಯೋಣ.
ಕೃಷ್ಣ ಜನ್ಮಾಷ್ಟಮಿಯ ದಿನದಂದು ಮಧುಮೇಹ ಸಮಸ್ಯೆ ಹೊಂದಿರುವವರು ತ್ಯಾಗ ಮಾಡಬೇಕಾಗಿಲ್ಲ. ಈ ರುಚಿಕರವಾದ ರೆಸಿಪಿಗಳನ್ನು ಮಾಡಿ ಸವಿಯಬಹುದು.
ಪನೀರ್ ಖೀರ್
ಹಾಲನ್ನು ನಾನ್ಸ್ಟಿಕ್ ಪ್ಯಾನ್ನಲ್ಲಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಹಾಲು ಚೆನ್ನಾಗಿ ಕುದಿಯಬೇಕು. ಏಲಕ್ಕಿ ಪುಡಿ ಮತ್ತು ಡ್ರೈ ಫ್ರೂಟ್ಸ್ಗಳನ್ನು ಪ್ಯಾನ್ಗೆ ಹಾಕಿ. ಜತೆಗೆ ಪನೀರ್ಅನ್ನು ಪ್ಯಾನ್ಗೆ ಹಾಕಿ. ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ಪನೀರ್ ಖೀರ್ ಸಿದ್ಧವಾಗಿದೆ. ತಣ್ಣಗಾದ ಬಳಿಕ ನೀವು ಖೀರ್ಅನ್ನು ಸೇವಿಸಬಹುದು.
ಶುಗರ್ ಫ್ರೀ ಶ್ರಿಖಂಡ
ಒಂದು ಪಾತ್ರೆಯಲ್ಲಿ ಹಾಲನ್ನು ತೆಗೆದುಕೊಳ್ಳಿ. ಕೇಸರಿ ಎಳೆಗಳನ್ನು ಸೇರಿಸಿ ಸ್ವಲ್ಪ ಸಮಯ ಹಾಗೆಯೇ ಬಿಡಿ. ಬಟ್ಟಲಿನಲ್ಲಿದ್ದ ಏಲಕ್ಕಿ ಪುಡಿ ಮತ್ತು ಮೊಸರನ್ನು ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಅದಕ್ಕೆ ಸಕ್ಕರೆ ಮುಕ್ತ ಪದಾರ್ಥಗಳನ್ನು ಸೇರಿಸಿ ಮತ್ತೆ ಮಿಶ್ರಣ ಮಾಡಿ. ತಣ್ಣಗಾದರೆ ಶುಗರ್ ಫ್ರೀ ಶ್ರೀಖಂಡ ಸವಿಯಲು ಸಿದ್ಧ.
ತೆಂಗಿನಕಾಯಿ ಬರ್ಫಿ
ತೆಂಗಿನ ತುರಿಯನ್ನು ತೆಗೆದುಕೊಂಡು 2 ರಿಂದ 3 ಚಮಚ ತುಪ್ಪದೊಂದಿಗೆ ಪ್ಯಾನ್ನಲ್ಲಿ ಹುರಿಯಿರಿ. ಶುಗರ್ ಫ್ರೀ ಪದಾರ್ಥಗಳನ್ನು ಸದಕ್ಕೆ ಸೇರಿಸಿ. ಏಲಕ್ಕಿ ಪುಡಿಯನ್ನು ರುಚಿಗಾಗಿ ಸ್ವಲ್ಪ ಸೇರಿಸಿ. ಸ್ವಲ್ಪ ನೀರು ಸೇರಿಸಿ ಮಿಶ್ರಣ ಮಾಡಿ. ಬಟ್ಟಲಿಗೆ ಸ್ವಲ್ಪ ತುಪ್ಪ ಸವರಿ ನಂತರ ಅದನ್ನು ಬಟ್ಟಲಿನಲ್ಲಿ ಹಾಕಿ ಬರ್ಫಿ ಆಕಾರದಲ್ಲಿ ಕತ್ತರಿಸಿ. ಫ್ರಿಜ್ನಲ್ಲಿಯೂ ಸಹ ಇಟ್ಟು ಕೋಲ್ಡ್ ಮಾಡಬಹುದು. ಇದೀಗ ತೆಂಗಿನ ತುರಿ ಬರ್ಫಿ ಸವಿಯಲು ಸಿದ್ಧ.
ಇದನ್ನೂ ಓದಿ:
Krishna Janmashtami 2021 ಶ್ರೀ ಕೃಷ್ಣನ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಆಸಕ್ತಿಕರ ಸಂಗತಿಗಳು
Krishna Janmashtami 2021: ಶ್ರೀ ಕೃಷ್ಣನ 50 ಹೆಸರುಗಳು
(Krishna Janmashtami 2021 quick recipes for diabetes)
Published On - 11:46 am, Mon, 30 August 21