ಈ ದಸರಾ ರಜೆಗೆ ಮಕ್ಕಳು-ಫ್ಯಾಮಿಲಿ ಜೊತೆ ಒಂದೇ ದಿನದಲ್ಲಿ ಸುತ್ತಾಡಲು KSTDC ಸೂಪರ್ ಒನ್‌ಡೇ ಟೂರ್ ಪ್ಯಾಕೇಜ್

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಒಂದು ದಿನದ ಬೆಂಗಳೂರು ಸಿಟಿ ಟೂರ್ ಪ್ಯಾಕೇಜ್ ಪರಿಚಯಿಸಿದೆ. ಈ ಪ್ಯಾಕೇಜ್‌ನಲ್ಲಿ ಇಸ್ಕಾನ್, ರಾಜರಾಜೇಶ್ವರಿ ದೇವಾಲಯ, ಬನ್ನೇರುಘಟ್ಟ ಜೈವಿಕ ಉದ್ಯಾನವನ, ತಾರಾಲಯ ಮತ್ತು ವಿಜ್ಞಾನ ಮ್ಯೂಸಿಯಂ ಸೇರಿವೆ. ಹೈ-ಟೆಕ್ ಬಸ್, ಅನುಭವಿ ಗೈಡ್‌ಗಳು ಮತ್ತು ಎಲ್‌ಟಿಸಿ ಸೌಲಭ್ಯ ಲಭ್ಯ. ನಿಮ್ಮ ಅನುಕೂಲಕ್ಕೆ ತಕ್ಕಂತೆ KSTDC ವೆಬ್‌ಸೈಟ್ ಮೂಲಕ ಬುಕಿಂಗ್ ಮಾಡಬಹುದು.

ಈ ದಸರಾ ರಜೆಗೆ ಮಕ್ಕಳು-ಫ್ಯಾಮಿಲಿ ಜೊತೆ ಒಂದೇ ದಿನದಲ್ಲಿ ಸುತ್ತಾಡಲು KSTDC ಸೂಪರ್ ಒನ್‌ಡೇ ಟೂರ್ ಪ್ಯಾಕೇಜ್
ಸಾಂದರ್ಭಿಕ ಚಿತ್ರ

Updated on: Oct 09, 2026 | 2:57 PM

ಬೆಂಗಳೂರು, ಅ.9: ಉದ್ಯಾನನಗರಿ ಬೆಂಗಳೂರಿನ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಒಂದೇ ದಿನದಲ್ಲಿ ಸುಲಭವಾಗಿ ಕಣ್ಣುಂಬಿಕೊಳ್ಳಲು ಬಯಸುವ ಪ್ರವಾಸಿಗರು ಹಾಗೂ ಸಾರ್ವಜನಿಕರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ವಿಶೇಷವಾದ ‘ಒಂದು ದಿನದ ಬೆಂಗಳೂರು ಸಿಟಿ ಟೂರ್’ (One Day Bengaluru Sightseeing Tour) ಪ್ಯಾಕೇಜ್ ಅನ್ನು ಪರಿಚಯಿಸಿದೆ.

ಸಾರಿಗೆಗಾಗಿ ಹೈ-ಟೆಕ್ ಡೆಲಕ್ಸ್ ಕೋಚ್ ಬಸ್ ವ್ಯವಸ್ಥೆ ಮಾಡಲಾಗಿದ್ದು, ಅನುಭವಿ ಗೈಡ್‌ಗಳ ಮಾರ್ಗದರ್ಶನ ಹಾಗೂ ಕೇಂದ್ರ, ರಾಜ್ಯ ಸರ್ಕಾರಿ ನೌಕರರಿಗೆ ಎಲ್‌ಟಿಸಿ (LTC) ಸೌಲಭ್ಯವೂ ಲಭ್ಯವಿದೆ.

ಒಂದು ದಿನದ ಪ್ರವಾಸದ ಪೂರ್ಣ ವೇಳಾಪಟ್ಟಿ :

ಈ ವಿಶೇಷ ಒನ್‌ಡೇ ಟೂರ್ ಬೆಳಿಗ್ಗೆಯಿಂದ ಸಂಜೆಯವರೆಗೆ ಬೆಂಗಳೂರಿನ ಪ್ರಮುಖ ಧಾರ್ಮಿಕ, ನೈಸರ್ಗಿಕ ಹಾಗೂ ವಿಜ್ಞಾನ ಕೇಂದ್ರಗಳನ್ನು ಒಳಗೊಂಡಿದೆ:

ಬೆಳಿಗ್ಗೆ 07.30: ಯಶವಂತಪುರ ಬಿಎಂಟಿಸಿ ಬಸ್ ನಿಲ್ದಾಣದಲ್ಲಿರುವ KSTDC ಪ್ರಧಾನ ಕಚೇರಿಯಿಂದ ಪ್ರವಾಸ ಆರಂಭ.

ಬೆಳಿಗ್ಗೆ 07.45 ರಿಂದ 08.45: ರಾಜಾಜಿನಗರದ ಪ್ರಸಿದ್ಧ ಇಸ್ಕಾನ್ ಶ್ರೀ ಕೃಷ್ಣ ದೇವಾಲಯದ ದರ್ಶನ.

ಬೆಳಿಗ್ಗೆ 08.45 ರಿಂದ 09.15: ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ದೇವಾಲಯ ಭೇಟಿ.

ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 01.00: ಬನ್ನೇರುಘಟ್ಟ ಜೈವಿಕ ಉದ್ಯಾನವನ ಭೇಟಿ – ವನ್ಯಜೀವಿ ಸಫಾರಿ ಮತ್ತು ಮೃಗಾಲಯ ವೀಕ್ಷಣೆ.

ಮಧ್ಯಾಹ್ನ 01.00 ರಿಂದ 01.30: ಬನ್ನೇರುಘಟ್ಟದ ಹೋಟೆಲ್ ಮಯೂರ ವನಶ್ರಿಯಲ್ಲಿ ಮಧ್ಯಾಹ್ನದ ಸವಿಭೋಜನ.

ಸಂಜೆ 04.30 ರಿಂದ 05.15: ಜವಾಹರ್‌ಲಾಲ್ ನೆಹರೂ ತಾರಾಲಯ ಹಾಗೂ ವಿಶ್ವೇಶ್ವರಯ್ಯ ವಿಜ್ಞಾನ ಮ್ಯೂಸಿಯಂ ವೀಕ್ಷಣೆ.

ಸಂಜೆ 06.30: ಯಶವಂತಪುರ KSTDC ಪ್ರಧಾನ ಕಚೇರಿಗೆ ತಲುಪುವುದರೊಂದಿಗೆ ಒಂದು ದಿನದ ಸುಂದರ ಪ್ರವಾಸ ಮುಕ್ತಾಯ.

ಇದನ್ನೂ ಓದಿ: ಮೈಸೂರು ದಸರಾ ಉದ್ಘಾಟನೆ, ಅಂಬಾರಿ ಮೆರವಣಿಗೆ ವೇಳಾಪಟ್ಟಿ ಇಲ್ಲಿದೆ; KSTDC ಪ್ಯಾಕೇಜ್, ಪ್ರಯಾಣದ ಸಂಪೂರ್ಣ ವಿವರ

ಬೆಂಗಳೂರು ಪ್ರವಾಸದ ಪ್ರಮುಖ ಆಕರ್ಷಣೆಗಳು:

ಗಾರ್ಡನ್ ಸಿಟಿ ಎಂದೇ ಹೆಸರುವಾಸಿಯಾಗಿರುವ ಬೆಂಗಳೂರು ತನ್ನ ಇತಿಹಾಸ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಪ್ರಸಿದ್ಧಿಯಾಗಿದೆ. ಈ ಟೂರ್ ಪ್ಯಾಕೇಜ್ ಹೊರತಾಗಿಯೂ ನಗರದಲ್ಲಿ ಕಬ್ಬನ್ ಪಾರ್ಕ್, ನವ-ದ್ರಾವಿಡ ಶೈಲಿಯ ಐತಿಹಾಸಿಕ ವಿಧಾನಸೌಧ, ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್ ಮಾದರಿಯಲ್ಲಿ ನಿರ್ಮಿಸಲಾದ 19ನೇ ಶತಮಾನದ ಬೆಂಗಳೂರು ಅರಮನೆ ಹಾಗೂ 18ನೇ ಶತಮಾನದ ತೇಗದ ಮರದ ಅಪರೂಪದ ನಿರ್ಮಾಣವಾದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗಳಂತಹ ಅದ್ಭುತ ಪ್ರವಾಸಿ ತಾಣಗಳಿವೆ.

ಪ್ರವಾಸಿಗರು KSTDC ಯ ಅಧಿಕೃತ ವೆಬ್‌ಸೈಟ್ ಅಥವಾ ಯಶವಂತಪುರ ಪ್ರಧಾನ ಕಚೇರಿಗೆ ಭೇಟಿ ನೀಡಿ ಈ ಒನ್‌ಡೇ ಟೂರ್‌ಗಾಗಿ ಮುಂಗಡ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us