ಚಳಿಗಾಲದಲ್ಲಿ ತುಟಿ ಒಡೆದುಕೊಳ್ಳುವುದು ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಇದು ಬಿರುಕು ಬಿಡುವುದಲ್ಲದೇ ಸಾಕಷ್ಟು ನೋವನ್ನುಂಟು ಮಾಡುತ್ತದೆ. ಚಳಿಗಾಲದಲ್ಲಿ ವಿಶೇಷವಾಗಿ ಕಾಳಜಿ ವಹಿಸಿಕೊಳ್ಳದ್ದಿದ್ದರೆ, ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಕಡಿಮೆ ನೀರು ಕುಡಿಯುವುದು ಈ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಇದಲ್ಲದೇ ನಿಮ್ಮ ತುಟಿಗಳನ್ನು ನೆಕ್ಕುವ ಅಥವಾ ಕಚ್ಚುವ ಅಥವಾ ಕಿರಿಕಿರಿಯುಂಟುಮಾಡುವ ಅಭ್ಯಾಸಗಳಿದ್ದರೂ ಸಹ ತುಟಿ ಒಡೆದುಕೊಳ್ಳಲು ಕಾರಣವಾಗುತ್ತದೆ.
ಇವೆಲ್ಲಾ ಕಾರಣಗಳನ್ನು ಹೊರತುಪಡಿಸಿ ಕೂಡ ತುಟಿ ಬಿರುಕು ಬಿಡುತ್ತದೆ. ಅಂತಹ ಕಾರಣಗಳ ಕುರಿತು ಚರ್ಮಶಾಸ್ತ್ರಜ್ಞರಾದ ಡಾ.ಜೈಶ್ರೀ ಶರದ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ಯಾನಿಕ್ ಅಟ್ಯಾಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ನೀವು ಈ ರೀತಿ ಸಹಾಯಮಾಡಿ
ಪ್ರತಿದಿನ 2ಲೀಟರ್ ನೀರು ಕುಡಿಯಿರಿ. ಕೆಫೀನ್ ತಪ್ಪಿಸುವುದು ಮತ್ತು ದೀರ್ಘಕಾಲ ಉಳಿಯುವ ಲಿಪ್‌ಸ್ಟಿಕ್‌ಗಳನ್ನು ಅನ್ವಯಿಸದಿರುವುದು. ಸುಗಂಧ, ಮೆಂಥಾಲ್ ಮತ್ತು ಕ್ಯಾಪ್ಸೈಸಿನ್ ಹೊಂದಿರದ ಲಿಪ್ ಬಾಮ್ ಬಳಸಲು ಚರ್ಮರೋಗ ತಜ್ಞರು ಸಲಹೆ ನೀಡುತ್ತಾರೆ. ಒಡೆದ ತುಟಿಗಳಿಗೆ ಚಿಕಿತ್ಸೆ ನೀಡಲು ನೀವು ಲಿಪ್ ಬಾಮ್ಗಳ ಬದಲಾಗಿ ತುಪ್ಪ, ಬೆಣ್ಣೆ ಹಚ್ಚಿ ಎಂದು ಸಲಹೆ ನೀಡುತ್ತಾರೆ. ಹೆಚ್ಚುವರಿಯಾಗಿ, ವಿಟಮಿನ್ ಸಿ, ವಿಟಮಿನ್ ಇ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರ ಸೇವಿಸಿ ಎಂದು ಸಲಹೆ ನೀಡುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:44 am, Sun, 29 January 23