Mental Health: ಪ್ಯಾನಿಕ್ ಅಟ್ಯಾಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ನೀವು ಈ ರೀತಿ ಸಹಾಯಮಾಡಿ

ನಿಮ್ಮ ಸುತ್ತಮುತ್ತಲಿನವರಲ್ಲಿ ಪ್ಯಾನಿಕ್ ಅಟ್ಯಾಕ್ ಸಮಸ್ಯೆ ಕಂಡು ಬಂದರೆ ಅವರಿಗೆ ಧೈರ್ಯ ನೀಡುವುದು, ಅವರ ಜೊತೆಯಾಗಿ ನಿಲ್ಲುವುದು ತುಂಬಾ ಅಗತ್ಯ ಎಂದು ತಜ್ಞರಾದ ಲೊವ್ನೀತ್ ಬಾತ್ರಾ ಹೇಳುತ್ತಾರೆ.

Mental Health: ಪ್ಯಾನಿಕ್ ಅಟ್ಯಾಕ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ನೀವು ಈ ರೀತಿ ಸಹಾಯಮಾಡಿ
ಸಾಂದರ್ಭಿಕ ಚಿತ್ರImage Credit source: Forbes
Follow us
| Updated By: Digi Tech Desk

Updated on:Jan 28, 2023 | 9:36 PM

ಪ್ಯಾನಿಕ್ ಅಟ್ಯಾಕ್(Panic Attack) ಸಾಮಾನ್ಯವಾಗಿ ಕೆಲವೇ ನಿಮಿಷಗಳಲ್ಲಿ ಅನಿರೀಕ್ಷಿತವಾಗಿ ಸಂಭವಿಸುವ ಒಂದು ಸಮಸ್ಯೆಯಾಗಿದೆ. ಆ ಸಮಯದಲ್ಲಿ ನೀವು ಅವರ ಜೊತೆಗಿದ್ದು, ಅವರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂದು ಆರೋಗ್ಯ ತಜ್ಞರಾದ ಲೊವ್ನೀತ್ ಬಾತ್ರಾ ಸಲಹೆ ನೀಡುತ್ತಾರೆ. ಇದು ಸಮಸ್ಯೆ ಸಾಮಾನ್ಯವಾಗಿ ಚಿಕ್ಕದಾಗಿ ಕಂಡರೂ ಕೂಡ, ಈ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅವರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ಸುತ್ತಮುತ್ತಲಿನವರಲ್ಲಿ ಇಂತಹ ಸಮಸ್ಯೆ ಕಂಡು ಬಂದರೆ ಅವರಿಗೆ ಧೈರ್ಯ ನೀಡುವುದು, ಅವರ ಜೊತೆಯಾಗಿ ನಿಲ್ಲುವುದು ತುಂಬಾ ಅಗತ್ಯ ಎಂದು ತಜ್ಞರಾದ ಲೊವ್ನೀತ್ ಬಾತ್ರಾ ಹೇಳುತ್ತಾರೆ. ಎದೆನೋವು, ಮರಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳ ಜೊತೆಗೆ ವ್ಯಕ್ತಿಯನ್ನು ಆವರಿಸುವ ಭಯ ಮತ್ತು ಆತಂಕದ ಹಠಾತ್ ಭಾವನೆಯಿಂದ ಪ್ಯಾನಿಕ್ ಅಟ್ಯಾಕ್ ಸಂಭವಿಸುತ್ತದೆ.

ತಜ್ಞರಾದ ಲೊವ್ನೀತ್ ಬಾತ್ರಾ ಪ್ಯಾನಿಕ್ ಅಟ್ಯಾಕ್​​ನಿಂದ ಬಳಲುತ್ತಿದ್ದವರಿಗೆ ಸಹಾಯ ಮಾಡಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳನ್ನು ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್​ ಇಲ್ಲಿದೆ.

View this post on Instagram

A post shared by Lovneet Batra (@lovneetb)

ಇದನ್ನೂ ಓದಿ: ನೀರು ಹೆಚ್ಚು ಕುಡಿಯುವುದರಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು

ಪ್ಯಾನಿಕ್ ಅಟ್ಯಾಕ್​​ನಿಂದ ಬಳಲುತ್ತಿದ್ದವರಿಗೆ ಸಹಾಯ ಮಾಡಲು ನೀವು ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.

ಸ್ವಲ್ಪ ನೀರು ಕೊಡಿ:

ನೀರು ಕುಡಿಯುವುದರಿಂದ ಸ್ವಲ್ಪ ಮಟ್ಟದ ಭಯ, ಆತಂಕದಿಂದ ಶಾಂತಗೊಳಿಸುತ್ತದೆ ಎಂದು ಬಾತ್ರಾ ಹೇಳುತ್ತಾರೆ. ತಣ್ಣೀರು ಕುಡಿಯುವುದರಿಂದ ಪ್ಯಾರಾಸಿಂಪಥೆಟಿಕ್ ನರಮಂಡಲವನ್ನು ಪ್ರಚೋದಿಸುತ್ತದೆ. ಇದು ವ್ಯಕ್ತಿಯನ್ನು ಶಾಂತಗೊಳಿಸಲು ಸಹಕಾರಿಯಾಗಿದೆ. ಆದ್ದರಿಂದ ಆ ವ್ಯಕ್ತಿಯ ಕೈ ಅಥವಾ ಪಾದಗಳನ್ನು ತಣ್ಣೀರು ಹಾಕಿ ಅಥವಾ ಒದ್ದೆಯಾದ ಟವೆಲ್​​ನಲ್ಲಿ ಮುಖದ ಮೇಲೆ ಅಥವಾ ಕುತ್ತಿಗೆಗೆ ಹಾಕಿ. ಇದು ಅವರನ್ನು ಭಯದಿಂದ ಸ್ವಲ್ಪ ಶಾಂತಗೊಳಿಸುತ್ತದೆ.

ಪ್ಯಾನಿಕ್ ಅಟ್ಯಾಕ್ ಒಳಪಟ್ಟ ವ್ಯಕ್ತಿಯನ್ನು ಸ್ವಲ್ಪ ಹೊತ್ತು ನಿಮ್ಮ ಬಳಿ ಕೂರಿಸಿಕೊಳ್ಳಿ:

ನಿಮ್ಮ ಸುತ್ತಮುತ್ತ ಅಥವಾ ಮನೆಯಲ್ಲಿ ಪ್ಯಾನಿಕ್ ಅಟ್ಯಾಕ್ ಆದವರು ಕಂಡುಬಂದರೆ ಆ ವ್ಯಕ್ತಿಯನ್ನು ಆರಾಮದಾಯಕವಾದ ಕುರ್ಚಿ ಅಥವಾ ಸೋಫಾದಲ್ಲಿ ಕುಳಿತುಕೊಳ್ಳಿ. ಸ್ವಲ್ಪ ಹೊತ್ತು ನೀವು ಜೊತೆಗಿದ್ದು ಧೈರ್ಯ ಹೇಳಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 6:26 pm, Sat, 28 January 23

ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ