AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Panic attack: ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವ, ಒತ್ತಡಕ್ಕೀಡು ಮಾಡುವ ಸಮಸ್ಯೆಯ ಕುರಿತು ಮಾಹಿತಿ ಇಲ್ಲಿದೆ

ಈ ಸಮಸ್ಯೆಯಿಂದ ಬಳಲುತ್ತಿರುವವ ಹೊತ್ತಿನಲ್ಲಿ ಹೃದಯಬಡಿತ ಹೆಚ್ಚುತ್ತದೆ, ಉಸಿರಾಟ ತಡೆತಡೆದು ನಡೆಯುತ್ತದೆ, ವ್ಯಕ್ತಿ ತಾನು ಇನ್ನೇನು ಸಾಯಲಿದ್ದೇನೆ, ಇದು ತನ್ನ ಅಂತಿಮ ಕ್ಷಣಗಳು ಎಂಬಂತೆ ವರ್ತಿಸುತ್ತಾನೆ.

Panic attack: ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸುವ, ಒತ್ತಡಕ್ಕೀಡು ಮಾಡುವ ಸಮಸ್ಯೆಯ ಕುರಿತು ಮಾಹಿತಿ ಇಲ್ಲಿದೆ
Panic AttackImage Credit source: News Bytes
TV9 Web
| Updated By: ಅಕ್ಷತಾ ವರ್ಕಾಡಿ|

Updated on:Nov 20, 2022 | 6:43 PM

Share

ಪ್ಯಾನಿಕ್ ಅಟ್ಯಾಕ್ ಮತ್ತು ಆತಂಕದ ಸ್ಥಿತಿ ಇವೆರಡು ನಿಮ್ಮನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವ ಒಂದು ರೀತಿಯ ಕಾಯಿಲೆಯಾಗಿದ್ದು, ನೀವು ಈ ಕಾಯಿಲೆಯಿಂದ ಬಳಲುತ್ತಿದ್ದರೆ ಆದಷ್ಟು ಹೊರ ಬರಲು ಪ್ರಯತ್ನಿಸಿ.  ಯಾವುದೇ ಒಂದು ಘಟನೆಗಳು ನಿಮ್ಮನ್ನು ಭಯ ಭೀತರನ್ನಾಗಿಸುವುದು. ಇದು ನಿಮ್ಮನ್ನು ಕಾಲ ಕ್ರಮೇಣ ಮಾನಸಿಕ ಖಿನ್ನತೆಗೆ ಒಳಪಡಿಸುತ್ತದೆ. ಪ್ಯಾನಿಕ್ ಅಟ್ಯಾಕ್ ಹಾಗೂ ಆತಂಕದ ಸ್ಥಿತಿ ಬಹುಮಟ್ಟಿಗೆ ಒಂದೇ ರೀತಿಯ ರೋಗಲಕ್ಷಣಗಳನ್ನು ಹೊಂದಿದ್ದರೂ, ಅನೇಕ ವಿಧಗಳಲ್ಲಿ ಆತಂಕದ ದಾಳಿಯಿಂದ ಭಿನ್ನವಾಗಿರುತ್ತದೆ.

ಸಾಮಾನ್ಯವಾಗಿ ಸುಲಭವಾಗಿ ಸ್ಥೈರ್ಯಗೆಡುವ ವ್ಯಕ್ತಿಗಳಲ್ಲಿ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಆ ಹೊತ್ತಿನಲ್ಲಿ ಹೃದಯಬಡಿತ ಹೆಚ್ಚುತ್ತದೆ, ಉಸಿರಾಟ ತಡೆತಡೆದು ನಡೆಯುತ್ತದೆ, ವ್ಯಕ್ತಿ ತಾನು ಇನ್ನೇನು ಸಾಯಲಿದ್ದೇನೆ, ಇದು ತನ್ನ ಅಂತಿಮ ಕ್ಷಣಗಳು ಎಂಬಂತೆ ವರ್ತಿಸುತ್ತಾನೆ.

ಪ್ಯಾನಿಕ್ ಅಟ್ಯಾಕ್(Panic attack) ಎಂದರೆ ಹಠಾತ್, ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ಭಯ, ಆತಂಕ. ಆದರೆ ಇದು ಕ್ರಮೇಣ ಬೆಳೆಯುತ್ತಾ ಹೋಗುತ್ತದೆ. ಇದು ನಿರೀಕ್ಷಿತ ಮತ್ತು ಅನಿರೀಕ್ಷಿತ ಎರಡೂ ಆಗಿರಬಹುದು. ಯಾರಿಗಾದರೂ, ಯಾವಾಗ ಬೇಕಾದರೂ ಸಂಭವಿಸಬಹುದಾದ ಒಂದು ರೀತಿಯ ಸಮಸ್ಯೆಯಾಗಿದೆ.

ಮತ್ತೊಂದೆಡೆ, ಆತಂಕದ ದಾಳಿಯು(anxiety attack) ನಿಮ್ಮ ಯಾವುದೋ ಭಯ ಅಥವಾ ಒತ್ತಡ ಉಲ್ಬಣಗೊಂಡಾಗ ಸಾಮಾನ್ಯವಾಗಿ ಸಂಭವಿಸುತ್ತದೆ. ಇದು ಸೌಮ್ಯ, ಮಧ್ಯಮ ಅಥವಾ ತೀವ್ರವಾಗಿರಬಹುದು. ನಿಮ್ಮ ಒತ್ತಡದ ಪರಿಸ್ಥಿತಿಯಿಂದಾಗಿ ಆತಂಕವನ್ನು ಪ್ರಚೋದಿಸುತ್ತದೆ.

ಈ ಎರಡು ಸಮಸ್ಯೆಗಳಿಂದ ನೀವು ನಿಮ್ಮನ್ನು ಕುಗ್ಗಿಸಲು ಅನುವುಮಾಡಿಕೊಡುತ್ತದೆ. ಆದ್ದರಿಂದ ಇಂತಹ ಸಮಸ್ಯೆ ತೀವ್ರ ಸ್ವರೂಪವನ್ನು ಪಡೆಯುವ ಮುನ್ನ ಮನಶಾಸ್ತ್ರಜ್ಞರನ್ನು ಭೇಟಿ ನೀಡಿ ಅವರ ಸಲಹೆ ತೆಗೆದುಕೊಳ್ಳಿ.

ನಿಮ್ಮ ಈ ಸಮಸ್ಯೆಗೆ ಪ್ರಮುಖ ಕಾರಣಗಳು ಇಲ್ಲಿವೆ: ಕೆಲಸದ ಒತ್ತಡ, ನಿಮ್ಮ ಅನುಭವಕ್ಕೆ ಬಂದ ಅಪಘಾತಕಾರಿ ಘಟನೆಗಳು, ದೀರ್ಘಕಾಲದ ಕಾಯಿಲೆಗಳು, ತಪ್ಪಿತಸ್ಥ ಎಂಬ ಭಾವನೆ, ಊಟವನ್ನು ಬಿಟ್ಟುಬಿಡುವುದು, ಘರ್ಷಣೆಗಳು ಅಥವಾ ಜಗಳಗಳು, ಬೇರ್ಪಡುವಿಕೆ ಅಥವಾ ನಷ್ಟದಿಂದಾಗಿ ಪ್ಯಾನಿಕ್ ಅಟ್ಯಾಕ್ ಮತ್ತು ಆತಂಕದ ದಾಳಿಗಳು ಹೆಚ್ಚಾಗಬಹುದು.

ಇದನ್ನು ಓದಿ: ಬೆಟ್ಟದಷ್ಟು ಪ್ರೀತಿ ಮಾಡುವ ಸಂಗಾತಿಯು ಹಿಂಸಾತ್ಮಕ ಮತ್ತು ಆಕ್ರಮಣಕಾರಿ ರೂಪ ತಾಳುವುದೇಕೆ? ಮನಃಶಾಸ್ತ್ರಜ್ಞರು ಏನಂತಾರೆ?

ಕೆಲವು ಸಾಮಾನ್ಯ ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ಹೃದಯ ಬಡಿತದ ಹೆಚ್ಚಳ, ದೇಹ ಶೀತ, ನಡುಕ, ಉಸಿರುಗಟ್ಟುವಿಕೆ, ಮರಗಟ್ಟುವಿಕೆ, ಎದೆ ನೋವು, ಸಾಯುವ ಭಯ, ಮೂರ್ಛೆ, ತಲೆನೋವು, ವಾಕರಿಕೆ, ಬೆವರು ಮತ್ತು ಆಯಾಸ.

ಆರೋಗ್ಯಕ್ಕೆ  ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 6:24 pm, Sun, 20 November 22

ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ಹುಬ್ಬಳ್ಳಿಯಲ್ಲಿ ವೇಶ್ಯಾವಾಟಿಕೆ ಜಾಲ: ಟಾಯ್ಲೆಟ್ ರೂಮ್​​ನಲ್ಲಿ ಸುರಂಗ ಮಾರ್ಗ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ನಾವು ಎಷ್ಟೇ ಬೆಳೆದರೂ ನಮ್ಮ ಕಾಲು ನೆಲದ ಮೇಲೆ ಇರಬೇಕು: ಹರ್ಷಿಕಾ ಪೂಣಚ್ಚ
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಬೀಗರ ಗಲಾಟೆ: ಕಪಾಳಕ್ಕೆ ಬಾರಿಸಿದ ಶಾಸಕ ಪ್ರಭು ಚೌಹಾಣ್
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ಹೇಳದೇ ಒಬಿಸಿ ಸಮಿತಿಗೆ ನೇಮಕ: ಈ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
ತಮಿಳುನಾಡಿನ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ, ಓರ್ವ ಸಾವು, ನಾಲ್ವರಿಗೆ ಗಂಭೀರ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
Video: ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ಕಾರು ಚಲಾಯಿಸಿದ ವ್ಯಕ್ತಿ
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
ಇಡೀ ಕುಟುಂಬವನ್ನು ಕಳೆದುಕೊಂಡು ಅನಾಥವಾದ 11ತಿಂಗಳ ಮಗು
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
‘ಗೋಲಿ ಚಲ್ ಜಾವೇಗಿ’ ಹಾಡಿಗೆ ನೃತ್ಯ ಮಾಡುತ್ತಲೇ ಗುಂಡು ಹಾರಿಸಿದ ವ್ಯಕ್ತಿ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ರಶ್ಮಿಕಾ ಮಂದಣ್ಣ ತಪ್ಪು ಮಾತಾಡಿದ್ದಾರೆ, ಕ್ಷಮಿಸಿ ಬಿಡೋಣ: ನಟಿ ಹರ್ಷಿಕಾ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ
ಭೀಕರ ಅಪಘಾತ: ಡಿಕ್ಕಿ ರಭಸಕ್ಕೆ ಎರಡು ಪೀಸ್ ಆದ ಟೆಂಪೊ, EXCLUSIVE ದೃಶ್ಯ