ಆತಂಕದ ಹಾಗೆ ಒತ್ತಡ ಕೂಡ ನಿಮ್ಮ ದೇಹ ಮತ್ತು ಆರೋಗ್ಯದ ಮೇಲೆ ಅನೇಕು ದುಷ್ಪರಿಣಾಮಗಳನ್ನು ಬೀರುತ್ತದೆ
ಅಸಲು ಸಂಗತಿಯೇನು ಗೊತ್ತಾ? ಒತ್ತಡ ಮತ್ತು ತೂಕ ಹೆಚ್ಚುವಿಕೆಯಲ್ಲಿ ಅನಾರೋಗ್ಯಕರ ಸಂಬಂಧವಿದೆ. ದೇಹದ ತೂಕ ಕಾಪಾಡಿಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ಒತ್ತಡ ಹಾಳು ಮಾಡಬಹುದು. ಹಾಗೆಯೇ ಅದು ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವ ನಿಮ್ಮ ಪ್ರಯತ್ನಗಳನ್ನು ನಿಷ್ಫಲಗೊಳಿಸುತ್ತದೆ.
ಒತ್ತಡ (stress) ಅನ್ನೋದು ಬದುಕಿನಲ್ಲಿ ನಡೆಯುವ ಘಟನೆಗಳಿಗೆ ನಮ್ಮ ದೇಹ ಮತ್ತು ಮನಸ್ಸು ಪ್ರತಿಕ್ರಿಯಿಸುವ ಒಂದು ಸ್ವಾಭಾವಿಕ ಪ್ರಕ್ರಿಯೆ. ನಾವೆಲ್ಲ ವೃತ್ತಿಪರ (professional) ಮತ್ತು ಕೌಟುಂಬಿಕ (family) ಒತ್ತಡಗಳನ್ನು ಅನುಭವಿಸುತ್ತೇವೆ. ಆರೋಗ್ಯ ಹಾಳಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾದ ಸ್ಥಿತಿ ಎದುರಾದಾಗ, ಹತ್ತಿರದವರು ತೀರಿಕೊಂಡಾಗ, ಮಕ್ಕಳು ಪರೀಕ್ಷೆಗಳಲ್ಲಿ ಫೇಲಾದಾಗ ನಾವು ಒತ್ತಡ ಅನುಭವಿಸಿವುದು ಸಹಜವೇ. ಅದರೆ ಬಹಳ ಸಮಯದವರಗೆ ಕಾಡುವ ಒತ್ತಡ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರೋದು ನಿಶ್ಚಿತ ಮಾರಾಯ್ರೇ. ಸಕಾಲದಲ್ಲಿ ವೈದ್ಯರನ್ನು ಸಂಪರ್ಕಿಸದೆ ಹೋದರೆ ಅದು, ಅಧಿಕ ರಕ್ತದೊತ್ತಡ, ಹೃದ್ರೋಗಗಳು, ತೂಕ ಹೆಚ್ಚುವಿಕೆ ಮತ್ತು ಮಧುಮೇಹಗಳಿಗೆ ಅದು ಕಾರಣವಾಗಬಹುದು.
ಅಸಲು ಸಂಗತಿಯೇನು ಗೊತ್ತಾ? ಒತ್ತಡ ಮತ್ತು ತೂಕ ಹೆಚ್ಚುವಿಕೆಯಲ್ಲಿ ಅನಾರೋಗ್ಯಕರ ಸಂಬಂಧವಿದೆ. ದೇಹದ ತೂಕ ಕಾಪಾಡಿಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ಒತ್ತಡ ಹಾಳು ಮಾಡಬಹುದು. ಹಾಗೆಯೇ ಅದು ತೂಕ ಕಡಿಮೆ ಮಾಡಿಕೊಳ್ಳಬೇಕೆನ್ನುವ ನಿಮ್ಮ ಪ್ರಯತ್ನಗಳನ್ನು ನಿಷ್ಫಲಗೊಳಿಸುತ್ತದೆ.
ಪೌಷ್ಠಿಕ ಆಹಾರ ತಜ್ಞೆ ಅಂಜಲಿ ಮುಖರ್ಜಿ ಅವರು ಒತ್ತಡಕ್ಕೆ ಒಳಗಾಗದೆ ದೈನಂದಿನ ಕೆಲಸಗಳನ್ನು ಹೇಗೆ ಪೂರೈಸಿಕೊಳ್ಳಬಹುದು ಅಂತ ಇನಸ್ಟಾಗ್ರಾಮ್ ನಲ್ಲಿ ತಮ್ಮ ಫಾಲೋಯರ್ಸ್ಗೆ ವಿವರಿಸಿದ್ದಾರೆ.
View this post on Instagram
ಪ್ರತಿದಿನ ಸಂತೋಷ, ಸಮಾಧಾನ ಮತ್ತು ನಿರಾತಂಕದಿಂದ ಕೆಲಸ ಮಾಡುವುದು ಸಾಧ್ಯವಾಗುವುದಿಲ್ಲ. ಕಚೇರಿಯಲ್ಲಾಗಲೀ ಅಥವಾ ಮನೆಯಲ್ಲಾಗಲೀ ಕೆಲಸಗಳನ್ನು ನಿರ್ದಿಷ್ಟ ಸಮಯದಲ್ಲಿ ಮುಗಿಸುವ ಧಾವಂತ ನಮ್ಮ ಮೇಲಿರುತ್ತದೆ. ಕೆಲಸದಲ್ಲಿ ಸಮಯದೊಂದಿಗೆ ಏಗಾಲಾಗದೆ ಹೋದಾಗ ಅಥವಾ ಮೀಟಿಂಗ್ ನಲ್ಲಿ ಭಾಗವಹಿಸುವ ಮೊದಲು ನಾವು ಸ್ಟ್ರೆಸ್ ಗೆ ಒಳಗಾಗುತ್ತೇವೆ. ಒತ್ತಡ ಕೇವಲ ನಮ್ಮ ಮನಸ್ಸಿನ ಮೇಲೆ ಬೀಳುತ್ತದೆ ಅನ್ನುವ ಅರಿವು ನಮಗಿದೆಯಾದರೂ, ಮನಸ್ಸು ಮತ್ತು ದೇಹಗಳ ನಡುವೆ ನೇರ ಸಂಪರ್ಕವಿರುವ ವಿಡಯವನ್ನು ನಾವು ಮರೆತು ಬಿಡುತ್ತೇವೆ. ಒತ್ತಡದ ಪರಿಣಾಮಗಳು ನಮ್ಮ ದೇಹದ ಚಟುವಟಿಕೆಗಳಲ್ಲೂ ಗೋಚರಿಸುತ್ತವೆ.
ಅಂಜಲಿ ಅವರು ಒತ್ತಡದಿಂದ ದೇಹದ ಮೇಲಾಗುವ ಪರಿಣಾಮಗಳನ್ನು ಪಟ್ಟಿ ಮಾಡಿದ್ದಾರೆ.
ನಿದ್ರಾಹೀನತೆ
ಖಿನ್ನತೆ
ದುರ್ಬಲ ರೋಗ ನಿರೋಧಕ ಶಕ್ತಿ
ರಕ್ತದಲ್ಲಿ ಹೆಚ್ಚುವ ಸಕ್ಕರೆ ಅಂಶ
ಅಧಿಕ ರಕ್ತದೊತ್ತಡ
ಹೊಟ್ಟೆನೋವು
ತಲೆನೋವು
ಕಾರ್ಟಿಸೋಲ್ ನಲ್ಲಿ ಹೆಚ್ಚಳ
ಇನ್ಸುಲಿನ್ ಪ್ರಮಾಣದಲ್ಲಿ ಏರುಪೇರು
ಒತ್ತಡವು ನಮ್ಮ ದೇಹದಲ್ಲಿ ಕಾರ್ಟಿಸೋಲ್, ಅಡ್ರಿನಲೈನ್, ಥೈರಾಕ್ಸಿನ್ ಮತ್ತು ಇನ್ಸಲಿನ್ ಮೊದಲಾದ ಹಾರ್ಮೋನುಗಳ ಏರುಪೇರಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಯಾವುದಾದರೂ ಒಂದು ಹಾರ್ಮೋನು ಪ್ರಭಾವಕ್ಕೊಳಗಾದರೂ ಅದು ನಮ್ಮ ದೇಹದ ಚಟುವಟಿಕೆಗಳಲ್ಲಿ ಒಂದಿಲ್ಲ ಒಂದು ರೀತಿ ವ್ಯಕ್ತವಾಗುತ್ತದೆ.
View this post on Instagram
ಆಸಿಡಿಟಿ, ಅಧಿಕ ರಕ್ತದೊತ್ತಡ, ಉಬ್ಬಿದ ಕಣ್ಣುಗಳು, ಬೆರಳುಗಳಲ್ಲಿ ಬಾವು, ನಿದ್ರಾಹೀನತೆ, ರಕ್ತದಲ್ಲಿ ಸಕ್ಕರೆ ಪ್ರಮಾಣದ ಹೆಚ್ಚಳ ಮೊದಲಾದವೆಲ್ಲ ಒತ್ತಡ ನಮ್ಮ ಮೇಲೆ ಬೀರುವ ದುಷ್ಪರಿಣಾಮಗಳಾಗಿವೆ.
ಮೂರನೇ ವಿಡಿಯೋನಲ್ಲಿ ಅಂಜಲಿ ಮುಖರ್ಜೀ ಅವರು ಒತ್ತಡದಲ್ಲಿರುವ ವ್ಯಕ್ತಿಯ ಆಹಾರ ಕ್ರಮದ ಪ್ರಾಮುಖ್ಯತೆ ಬಗ್ಗೆ ಮಾತಾಡುತ್ತಾರೆ.
View this post on Instagram
ಇದನ್ನೂ ಓದಿ: Health: ಎಚ್ಚರ! ಎಲ್ಲವನ್ನೂ ದಕ್ಕಿಸಿಕೊಳ್ಳುತ್ತಿದ್ದೀರಿ, ಆದರೆ ನಿದ್ರೆಯನ್ನು?
Published On - 2:16 pm, Thu, 7 July 22