Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು: ಹಣದ ಆಸೆಗಾಗಿ ನಿಷೇಧದ ಬಳಿಕವೂ ಬೆಟ್ಟಕ್ಕೆ ಕರೆದೊಯ್ದ ಸಿಬ್ಬಂದಿ

ಬಂಡೀಪುರ ಅರಣ್ಯ ಸಿಬ್ಬಂದಿಗಳಿಂದ ಮತ್ತೊಂದು ಎಡವಟ್ಟು: ಹಣದ ಆಸೆಗಾಗಿ ನಿಷೇಧದ ಬಳಿಕವೂ ಬೆಟ್ಟಕ್ಕೆ ಕರೆದೊಯ್ದ ಸಿಬ್ಬಂದಿ

ಸೂರಜ್ ಪ್ರಸಾದ್ ಎಸ್.ಎನ್
| Updated By: ಗಂಗಾಧರ​ ಬ. ಸಾಬೋಜಿ

Updated on:Apr 12, 2025 | 8:58 AM

ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಸಂಜೆ 4.30ರ ಬಳಿಕ ನಿಷೇಧವಿದ್ದರೂ ಬಂಡೀಪುರ ಅರಣ್ಯ ಸಿಬ್ಬಂದಿಗಳು ಹಣದ ಆಸೆಗಾಗಿ ತಮ್ಮ ವಾಹನದಲ್ಲೇ ಜನರು ಕರೆದುಕೊಂಡು ಹೋಗಿರುವಂತಹ ಘಟನೆ ನಡೆದಿದೆ. ಆ ಮೂಲಕ ಬಂಡೀಪುರ ಅರಣ್ಯ ಸಿಬ್ಬಂದಿಗಳು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಈ ಘಟನೆ ಮೊಬೈಲ್ ಕ್ಯಾಮರದಲ್ಲಿ ಸೆರೆಯಾಗಿದೆ.

ಚಾಮರಾಜನಗರ, ಏಪ್ರಿಲ್​ 12: ಕೇರಳ ಸಿನಿಮಾದ ಚಿತ್ರೀಕರಣಕ್ಕೆ ಅನುಮತಿ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ಬಂಡೀಪುರ (Bandipur) ಅರಣ್ಯ ಸಿಬ್ಬಂದಿಗಳು ಇದೀಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ಸಂಜೆ 4.30ರ ಬಳಿಕ ನಿಷೇಧ ಇದೆ. ಆದರೆ 4.30 ರ ಬಳಿಕವು ಅಧಿಕ ಹಣದ ಆಸೆಗಾಗಿ ತಮ್ಮ ವಾಹನದಲ್ಲೇ ಸಿಬ್ಬಂದಿಗಳು ಕೆಲವರನ್ನು ಕರೆದೊಯ್ದಿದ್ದಾರೆ. ಅರಣ್ಯ ಸಿಬ್ಬದಿಯ ಕಳ್ಳಾಟ ಮೊಬೈಲ್ ಕ್ಯಾಮರೆದಲ್ಲಿ ಸೆರೆ ಆಗಿದೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Apr 12, 2025 08:57 AM