Dark Chocolate: ಮುಟ್ಟಿನ ಸಮಯದಲ್ಲಿ ಚಾಕೊಲೇಟ್ ಸೇವಿಸಬೇಕು ಏಕೆ?
ಸಾಮಾನ್ಯವಾಗಿ ಡಾರ್ಕ್ ಚಾಕೊಲೇಟ್ ಸೇವನೆಯಿಂದ ತೂಕ ಹೆಚ್ಚಳವಾಗುತ್ತದೆ ಎನ್ನುವ ಮಾತನ್ನು ಸಾಕಷ್ಟು ಬಾರಿ ಕೇಳಿದ್ದೇವೆ, ಆದರೆ ಅದೇ ಡಾರ್ಕ್ ಚಾಕೊಲೇಟ್ನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ಸಾಮಾನ್ಯವಾಗಿ ಡಾರ್ಕ್ ಚಾಕೊಲೇಟ್ ಸೇವನೆಯಿಂದ ತೂಕ ಹೆಚ್ಚಳವಾಗುತ್ತದೆ ಎನ್ನುವ ಮಾತನ್ನು ಸಾಕಷ್ಟು ಬಾರಿ ಕೇಳಿದ್ದೇವೆ, ಆದರೆ ಅದೇ ಡಾರ್ಕ್ ಚಾಕೊಲೇಟ್ನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಮುಟ್ಟಿನ ಸಮಯದಲ್ಲಿ ಚಾಕೊಲೇಟ್ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
-ಪ್ರೊಸ್ಟಗ್ಲಾಂಡಿನ್‌ಗಳು ಹಾರ್ಮೋನ್ ತರಹದ ಲಿಪಿಡ್‌ಗಳಾಗಿದ್ದು, ಮುಟ್ಟಿನ ಸಮಯದಲ್ಲಿ ಗರ್ಭಾಶಯವು ಇವುಗಳನ್ನು ಬಿಡುಗಡೆಯಾಗುತ್ತವೆ. ಇದು ಸೆಳೆತಕ್ಕೆ ಕಾರಣವಾಗುವ ಉರಿಯೂತವನ್ನು ಉಂಟುಮಾಡುತ್ತದೆ. ಡಾರ್ಕ್ ಚಾಕೊಲೇಟ್ ಮೆಗ್ನೀಸಿಯಮ್ನೊಂದಿಗೆ ಲೋಡ್ ಆಗುತ್ತದೆ, ಇದು ಸ್ನಾಯುಗಳಿಗೆ ವಿಶ್ರಾಂತಿ ನೀಡುತ್ತದೆ.
ಮೈಗ್ರೇನ್ ಹೊಂದಿದ್ದರೆ ಡಾರ್ಕ್ ಚಾಕೊಲೇಟ್ ಸೇವಿಸಬೇಡಿ ಒಂದೊಮ್ಮೆ ನೀವು ಮೈಗ್ರೇನ್ ಸಮಸ್ಯೆ ಹೊಂದಿದ್ದರೆ ಈ ಡಾರ್ಕ್ ಚಾಕೊಲೇಟ್ಗಳನ್ನು ಹೆಚ್ಚಾಗಿ ಸೇವಿಸಬೇಡಿ ಎಂದು ಅಧ್ಯಯನ ಹೇಳಿದೆ.
-ಡಾರ್ಕ್ ಚಾಕೊಲೇಟ್ಗಳಲ್ಲಿ ಕಬ್ಬಿಣದ ಅಂಶವಿದ್ದು, ಇದು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ಹೆಚ್ಚು ಸಹಾಯ ಮಾಡುತ್ತದೆ. ಮುಟ್ಟಿನ ಸಮಯದಲ್ಲಿ ರಕ್ತದ ನಷ್ಟವು ಕಬ್ಬಿಣದ ಕೊರತೆಯನ್ನು ಉಂಟುಮಾಡುವುದಿಲ್ಲ.
-ಡಾರ್ಕ್ ಚಾಕೊಲೇಟ್ ಆಲಸ್ಯವನ್ನು ತೆಗೆದುಹಾಕಲು ನಿಮಗೆ ಸಹಾಯ ಮಾಡುತ್ತದೆ, ಅದರಲ್ಲಿರುವ ಕೆಲವು ಅಂಶಗಳು ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ.
-ಚಾಕೊಲೇಟ್ನಲ್ಲಿರುವ ಸಿರೊಟೋನಿನ್ ನಿಮ್ಮ ಮನಸ್ಥಿತಿಯನ್ನು ಸುಧಾರಿಸುತ್ತದೆ, ಎಂಡಾರ್ಫಿನ್‌ಗಳು ನೋವು ನಿವಾರಕಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಡೋಪಮೈನ್ ನಿಮಗೆ ಒಳ್ಳೆಯ ಮನಸ್ಥಿತಿಯನ್ನು ಒದಗಿಸುತ್ತವೆ. ಈ ಹಾರ್ಮೋನುಗಳು ಒಟ್ಟಾಗಿ ನಿಮ್ಮ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸಬಹುದು.
-ಸಂಶೋಧನೆಯ ಪ್ರಕಾರ, ಎರಡು ವಾರಗಳ ಕಾಲ ಡಾರ್ಕ್ಚಾಕೊಲೇಟ್ ಅನ್ನು ಸೇವಿಸುವುದರಿಂದ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಅನ್ನು ಕಡಿಮೆ ಮಾಡುತ್ತದೆ ಎಂದು ಕಂಡುಬಂದಿದೆ.
-ಡಾರ್ಕ್ ಚಾಕೊಲೇಟ್ ತಿನ್ನುವುದು ದೇಹದಲ್ಲಿನ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
-ಕಬ್ಬಿಣ ಮತ್ತು ಮೆಗ್ನೀಸಿಯಮ್ ಜೊತೆಗೆ, ಡಾರ್ಕ್ ಚಾಕೊಲೇಟ್ ಪೊಟ್ಯಾಸಿಯಮ್ನನ್ನು ಹೊಂದಿರುತ್ತದೆ. ಪಿರಿಯಡ್ಸ್ ಸಮಯದಲ್ಲಿ ನೀವು ಹೊಟ್ಟೆ ಉಬ್ಬರಿಸಿದರೆ, ಡಾರ್ಕ್ ಚಾಕೊಲೇಟ್ ತಿನ್ನಿ.